Advertisement
ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಸಾವರಿನ್ ಇಂಡಸ್ಟ್ರೀಸ್ ಲಿ. ಕಾರ್ಖಾನೆಯವರು ರೈತರಿಗೆ ಕಬ್ಬು ಬಾಕಿ ಸಂಪೂರ್ಣ ಪಾವತಿಸದ ಹಿನ್ನಲೆಯಲ್ಲಿ ಕಾರ್ಖಾನೆಯ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ನಿಯಮಾನುಸಾರ ಹರಾಜು ಮಾಡಿ ಬಂದ ಮೊತ್ತದಿಂದ ರೈತರಿಗೆ ಬಾಕಿ ಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ್ದಾರೆ.
ಭೂಕಂದಾಯ ಕಾಯ್ದೆ 1964 ಕಲಂ 190ರನ್ವಯ ರಬಕವಿಬನಹಟ್ಟಿ ತಹಶೀಲ್ದಾರ ಇವರಿಗೆ ಕಾರ್ಖಾನೆಯ ಚರಾಸ್ತಿ ಹಾಗೂ ಚಿರಾಸ್ತಿಗಳನ್ನು ಹರಾಜು ಮಾಡಲು ಆದೇಶಿಸಿರುತ್ತಾರೆ. ಈ ಹಿನ್ನಲೆಯಲ್ಲಿ ರಬಕವಿ ಬನಹಟ್ಟಿ ತಹಶೀಲ್ದಾರ ಭೂ ಕಂದಾಯ ನಿಯಮಗಳ ಅನ್ವಯ ಹರಾಜು ಹಾಗೂ ವಸೂಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಈ ಪ್ರಕ್ರಿಯೆ ಮುಗಿದ ತಕ್ಷಣ ರೈತರಿಗೆ ಕಬ್ಬು ಬೆಲೆ ಬಾಕಿ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದ್ದಾರೆ.