Advertisement

ಸಮ್ಮೇಳನ ನಗರ ಸೌಂದರ್ಯಕ್ಕೆ  5 ಕೋಟಿ

05:10 PM Dec 03, 2018 | Team Udayavani |

ಧಾರವಾಡ: ನಗರದಲ್ಲಿ ಜ. 4,5 ಹಾಗೂ 6ರಂದು ನಡೆಯುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ನಗರ ಸೌಂದರ್ಯಕ್ಕೆ ಆದ್ಯತೆ ನೀಡಲಿದ್ದು, ಹೆಚ್ಚುವರಿಯಾಗಿ ಐದು ಕೋಟಿ ಅನುದಾನ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

Advertisement

ಕೃಷಿ ವಿವಿ ಆವರಣಕ್ಕೆ ರವಿವಾರ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನ ಯಶಸ್ಸಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕಸಾಪ ಪದಾಧಿಕಾರಿಗಳು ಸಮನ್ವಯದಿಂದ ಸೂಕ್ಷ್ಮ ವಿಚಾರಗಳನ್ನು ಸಹ ಮುನೋ°ಟದಿಂದ ಆಲೋಚಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಶುಚಿತ್ವ, ಶೌಚಾಲಯ ನಿರ್ಮಾಣ, ನೀರು ಪೂರೈಕೆ, ವಿದ್ಯುದಲಂಕಾರ ಸಮರ್ಪಕವಾಗಿ ಇರಬೇಕು. ಗೃಹ ಕೈಗಾರಿಕೆಗಳು ಮತ್ತು ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟಕ್ಕೆ ಮಳಿಗೆ ನೀಡಬೇಕು. ಸಮ್ಮೇಳನ ಹಿನ್ನೆಲೆಯಲ್ಲಿ ಡಿ.25ರಿಂದ ಸ್ವಚ್ಛತಾ ಆಂದೋಲನ ಆರಂಭಿಸಬೇಕು ಎಂದು ಸೂಚಿಸಿದರು. 

ಮುಖ್ಯ ವೇದಿಕೆ ನಿರ್ಮಾಣ ಸ್ಥಳ, ಮಾಧ್ಯಮ ಕೇಂದ್ರ, ಭೋಜನಾಂಗಣ, ಪುಸ್ತಕ, ವಸ್ತು ಪ್ರದರ್ಶನ ಮಳಿಗೆಗಳು, ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಂಗಣ ಮತ್ತಿತರ ಸ್ಥಳಗಳಿಗೆ ಸಚಿವರು ಭೇಟಿ ನೀಡಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಿಧಾನ ಪರಿಷತ್‌ ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ, ಜಿಲ್ಲಾಧಿಕಾರಿ ದೀಪಾ ಚೋಳನ್‌, ಜಿಪಂ ಸಿಇಒ ಡಾ| ಸತೀಶ ಬಿ.ಸಿ., ಹು-ಧಾ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಎಸ್ಪಿ ಜಿ.ಸಂಗೀತಾ, ಅಪರ ಜಿಲ್ಲಾಕಾರಿ ಇಬ್ರಾಹಿಂ ಮೈಗೂರ, ಮಹಾನಗರ ಪಾಲಿಕೆ ಆಯುಕ್ತ ಶಕೀಲ್‌ ಅಹ್ಮದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next