Advertisement

Bangladesh ಸಂಸದ ಅನರ್‌ ಕೊಲೆಗೆ ಸ್ನೇಹಿತನಿಂದಲೇ 5 ಕೋಟಿ ರೂ. ಸುಪಾರಿ!

12:57 AM May 24, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಬಾಂಗ್ಲಾ ಸಂಸದ ಅನ್ವರುಲ್‌ ಅಜೀಮ್‌ ಅನರ್‌ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಂಸದನನ್ನು ಹತ್ಯೆ ಮಾಡಲು ಅವರ ಸ್ನೇಹಿತನೇ ನನಗೆ 5 ಕೋಟಿ ರೂ. ಸುಪಾರಿ ನೀಡಿದ್ದರು ಎಂದು ಪ್ರಕರಣದ ಮೊದಲ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕೋಲ್ಕತಾದಲ್ಲಿ ಮನೆ ಹೊಂದಿರುವ ಸಂಸದನ ಸ್ನೇಹಿತ ಈಗ ಅಮೆರಿಕದಲ್ಲಿದ್ದಾನೆ ಎಂದು ಆರೋಪಿ ತಿಳಿಸಿದ್ದಾನೆ. ಅನರ್‌ ಶವ ಸಿಕ್ಕ ಫ್ಲಾಟ್‌ನ ಮಾಲಕ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡು ತ್ತಿದ್ದು, ಆರೋಪಿಯ ಸ್ನೇಹಿತನಿಗೆ ಅದನ್ನು ಬಾಡಿಗೆಗೆ ನೀಡಿದ್ದ. ಇದೊಂದು ಪೂರ್ವ ನಿಯೋಜಿತ ಕೃತ್ಯ ವಾಗಿದ್ದು, ಸಂಸದ ಅನರ್‌ನ ಹಳೆಯ ಸ್ನೇಹಿತ 5 ಕೋಟಿ ರೂ.ಗಳಷ್ಟು ಹಣ ನೀಡಿ ಕೊಲೆ ಮಾಡಲು ಸೂಚಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next