Advertisement

ವಿವಿಧ ಕಾಮಗಾರಿಗೆ 5 ಕೋಟಿ ಅನುದಾನ: ಶಾಸಕ

02:47 PM Nov 22, 2019 | Team Udayavani |

ಗುಡಿಬಂಡೆ: ಚುನಾವಣೆ ಸಮಯದಲ್ಲಿ ವಾರ್ಡ್‌ಗಳಿಗೆ ಭೇಟಿ ನೀಡಿದ ನಂತರ ಮೊದಲ ಬಾರಿಗೆ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಶಾಸಕ ಸುಬ್ಟಾರೆಡ್ಡಿ ಅವರು ಭೇಟಿ ನೀಡುತ್ತಿದ್ದಂತೆ ಮಹಿಳೆಯರು ಮತ್ತು ಹಿರಿಯ ನಾಗರಿಕರು ಶಾಸಕರಿಗೆ ಸಮಸ್ಯೆಗಳ ಬಗ್ಗೆ ತಿಳಿಸಿದರು.

Advertisement

ಸಾರ್ವಜನಿಕರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರಿಂದ ಸಮಸ್ಯೆಗಳ ಮಾಹಿತಿ ಪಡೆದರು. ನಿವೇಶನ ಇಲ್ಲ, ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ನೀರಿನ ಸಮಸ್ಯೆ, ಮನೆ ನಿರ್ಮಾಣದ ಅನುದಾನ ಬಿಡುಗಡೆ ಆಗಿಲ್ಲ, ಮಳೆ ಬಂದರೆಸುರಸದ್ಮಗಿರಿ ಬೆಟ್ಟದ ನೀರು ಮನೆಗಳಿಗೆ ನುಗ್ಗುವುದರ ಬಗ್ಗೆ, ರಸ್ತೆ ಅಗಲೀಕರಣ ವೇಳೆ ಮನೆ ಕಳೆದುಕೊಂಡವರಿಗೆ ಇದುವರೆಗೆ ನಿವೇಶನ ನೀಡಿಲ್ಲ ಎಂದು ಸಾರ್ವಜನಿಕರು ದೂರುಗಳ ಬಗ್ಗೆ ಶಾಸಕರಿಗೆ ತಿಳಿಸಿದರು.

ಶಾಸಕ ಸುಬ್ಟಾರೆಡ್ಡಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ಬಗೆ ಹರಿಸುವುದೇ ನನ್ನ ಮುಖ್ಯ ಉದ್ದೇಶವಾಗಿದ್ದು, ಅದಕ್ಕಾಗಿ ಪಟ್ಟಣದ ಎಲ್ಲಾ ವಾರ್ಡ್‌ಗಳಿಗೂ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಪಡೆದುಕೊಂಡಿದ್ದೇನೆ. ನಿವೇಶನ ಮತ್ತು ರಸ್ತೆಗಳ ಬಗ್ಗೆ ದೂರು ಬಂದಿದ್ದು, 5 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್‌ ಕಂಬಗಳ ಬದಲಾವಣೆ ಹಾಗೂ ಗುಡಿಬಂಡೆಯ ಸುರಸದ್ಮಗಿರಿ ಬೆಟ್ಟದಿಂದ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತಿದ್ದು, ಅದಕ್ಕೆ ಪರಿಹಾರವಾಗಿ ದೊಡ್ಡ ಚರಂಡಿ ವ್ಯವಸ್ಥೆ ಮಾಡಲಾಗುತ್ತದೆ. ಪಟ್ಟಣದ ಮುಖ್ಯ ರಸ್ತೆ ಅಗಲೀಕರಣದ ವೇಳೆ ಶಾಲೆಗಳ ತಡೆಗೊಡೆಗಳನ್ನು ಧ್ವಂಸಗೊಳಿಸಿದ್ದು, ನೀತಿ ಸಂಹಿತೆ ಮುಗಿದ ನಂತರದೇ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ಗುಡಿಬಂಡೆ ಬೆಟ್ಟದ ಬುಡದಲ್ಲಿ ಮತ್ತು ಬ್ರಾಹ್ಮಣರಹಳ್ಳಿ ರಸ್ತೆಯ ಬಳಿ ಈಗಾಗಲೇ ನಿವೇಶನ ಕಾಯ್ದಿರಿಸಿದ್ದು, ಕೆಲ ದಿನಗಳಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ನಿಚ್ಚನಬಂಡಹಳ್ಳಿ ರಸ್ತೆಗೆ 48 ಲಕ್ಷ ಅನುದಾನ ಬಿಡುಗಡೆಯಾಗಿ ಟೆಂಡರ್‌ಗೆ ಹೋಗಿದ್ದು, ಕೆಲ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next