Advertisement

ಪಬ್ಲಿಕ್‌ ಐ ಆ್ಯಪ್‌ನಲ್ಲಿ 5.8 ಲಕ್ಷ ದೂರು, 30 ಕೋಟಿ ದಂಡ

01:04 PM Dec 20, 2022 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ “ಪಬ್ಲಿಕ್‌ ಐ ಆ್ಯಪ್‌’ ಕಣ್ಣಿಟ್ಟಿದೆ ಎಚ್ಚರ. ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 3 ವರ್ಷಗಳಲ್ಲಿ “ಪಬ್ಲಿಕ್‌ ಐ ಆ್ಯಪ್‌’ನಲ್ಲೇ ಬರೋಬ್ಬರಿ 5.80 ಲಕ್ಷ ದೂರುಗಳು ಬಂದಿದ್ದು, 30 ಕೋಟಿ ರೂ. ದಂಡ ವಿಧಿಸಲಾಗಿದೆ.

Advertisement

ಈ ಪೈಕಿ ಸಂಚಾರ ನಿಮಯ ಉಲ್ಲಂ ಸಿರುವ 1,40,437 ವಾಹನ ಗಳ ಮಾಲೀಕರಿಂದ 6.83 ಕೋಟಿ ರೂ. ದಂಡ ಸಂಗ್ರಹವಾಗಿದೆ. ಇನ್ನೂ 4,40,305 ಕೇಸ್‌ನಲ್ಲಿ 23.24 ಕೋಟಿ ರೂ. ದಂಡ ವಸೂಲಿ ಬಾಕಿ ಇದೆ.

ಏನಿದು “ಪಬ್ಲಿಕ್‌ ಐ ಆ್ಯಪ್‌’?: ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಹಾಗೂ ಜನಾ ಗ್ರಹ ಸೆಂಟರ್‌ ಫಾರ್‌ ಸಿಟಿಜನ್ಸಿಫ್ ಡೆಮಾಕ್ರಸಿ ಸಂಸ್ಥೆಯು ಜಂಟಿಯಾಗಿ 2015ರಲ್ಲಿ ಪಬ್ಲಿಕ್‌ ಐ ಆ್ಯಪ್‌ ರೂಪಿಸಿದೆ.

ಸಾರ್ವಜನಿಕರು ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ “ಪಬ್ಲಿಕ್‌ ಐ ಆ್ಯಪ್‌’ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆ್ಯಪ್‌ ಓಪನ್‌ ಮಾಡಿ ಅದರಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ಅಪ್‌ಲೋಡ್‌ ಮಾಡಬೇಕು. ನೀವು ಕಳುಹಿಸುವ ಫೋಟೋ ಟ್ರಾಫಿಕ್‌ ಮ್ಯಾನೇಜ್‌ ಮೆಂಟ್‌ ಸೆಂಟರ್‌ ವಿಭಾಗಕ್ಕೆ ರವಾನೆಯಾಗುತ್ತದೆ. ಅಲ್ಲಿನ ಸಿಬ್ಬಂದಿ ಈ ಫೋಟೋದ ಆಧಾರದ ಮೇಲೆ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಸಂಚಾರ ನಿಯಮ ಉಲ್ಲಂ ಸಿದ ವಾಹನ ಮಾಲೀಕರಿಗೆ ನೋಟಿಸ್‌ ಕಳುಹಿಸುತ್ತಾರೆ. ಫೋಟೋ ಕಳುಹಿಸಿದ ವ್ಯಕ್ತಿಯ ವಿವರಣೆ ಗೌಪ್ಯವಾಗಿಡಲಾಗುತ್ತದೆ. ನೋಟಿಸ್‌ ಪಡೆದ ಮಾಲೀಕರು ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಆನ್‌ಲೈನ್‌ನಲ್ಲೇ ದಂಡ ಪಾವತಿಸಬಹುದು. ಆದರೆ, ಈ ಪೈಕಿ ಶೇ.70ರಷ್ಟು ಮಂದಿ ದಂಡ ಪಾವತಿಸುವುದಿಲ್ಲ ಎಂದು ಸಂಚಾರ ವಿಭಾಗದ ಪೊಲೀಸರೇ ಮಾಹಿತಿ ನೀಡಿದ್ದಾರೆ.

ಫಿಟ್‌ನೆಸ್‌ಗೆ ಕ್ಲಿಯರೆನ್ಸ್‌ ಕಡ್ಡಾಯ: ಸಂಚಾರ ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುವುದೇ ಬೆಂಗಳೂರು ಟ್ರಾಫಿಕ್‌ ಪೊಲೀಸರಿಗೆ ತಲೆನೋವಾಗಿದೆ. ಬಾಕಿ ಇರುವ ದೊಡ್ಡ ಪ್ರಮಾಣದ ದಂಡದ ಮೊತ್ತ ವಸೂಲಿಗೆ ಬಾಕಿ ಇದೆ. ಇದೀಗ ಸಂಚಾರ ಪೊಲೀಸರು ದಂಡ ಸಂಗ್ರಹಕ್ಕೆ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಆರ್‌ಟಿಒ ಹಾಗೂ ಇನ್ಶೂರೆನ್ಸ್‌ ಕಂಪನಿಗಳ ಜತೆಗೆ ಸಮನ್ವಯ ಸಾಧಿಸಿದ್ದಾರೆ. ಈ ಮೂಲಕ ಹಳದಿ ಬೋರ್ಡ್‌ ವಾಹನ ಚಾಲಕರು ಆರ್‌ಟಿಒ ಕಚೇರಿಗೆ ಫಿಟ್‌ನೆಸ್‌ ಪ್ರಮಾಣಪತ್ರ ಪಡೆಯಲು ಬರುವ ವೇಳೆ ಅವರ ವಾಹನಗಳು ಸಂಚಾರ ನಿಯಮ ಉಲ್ಲಂಘಿಸಿವೆಯೇ?, ಉಲ್ಲಂಘಿಸಿದ್ದರೆ ಎಷ್ಟು ದಂಡ ಪಾವತಿಸಲು ಬಾಕಿ ಉಳಿಸಿಕೊಂಡಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ.

Advertisement

ದಂಡ ಪಾವತಿಸಿದ ಬಳಿಕವೇ ಫಿಟ್‌ನೆಸ್‌ ಪ್ರಮಾಣ ಪತ್ರ ಒದಗಿಸಲಾಗುತ್ತದೆ. ಇನ್ನು ಇನ್ಶೂ ರೆನ್ಸ್‌ ಸಂಸ್ಥೆಗಳೂ ತಮ್ಮ ಬಳಿ ಇನ್ಶೂರೆ ನ್ಸ್‌ಗಾಗಿ ಬರುವ ವಾಹನಗಳು ಬಾಕಿ ಉಳಿಸಿಕೊಂಡಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತದ ಬಗ್ಗೆ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಬ್ಬಂದಿಗೆ ಮಾಹಿತಿ ನೀಡಲಿದ್ದಾರೆ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ.ಎಂ. ಎ.ಸಲೀಂ “ಉದಯವಾಣಿ’ಗೆ ತಿಳಿಸಿದ್ದಾರೆ.

1.27 ಲಕ್ಷ ಜನರಿಂದ ಆ್ಯಪ್‌ ಡೌನ್‌ಲೋಡ್‌ :

ವರ್ಷದಿಂದ ವರ್ಷಕ್ಕೆ ಪಬ್ಲಿಕ್‌ ಐ ಆ್ಯಪ್‌ ಮೂಲಕ ಬರುತ್ತಿರುವ ದೂರುಗಳ ಪ್ರಮಾಣ ಏರಿಕೆ ಆಗುತ್ತಿವೆ. 2015ರಲ್ಲಿ 13,803 ದೂರುಗಳು ಬಂದಿವೆ. 2016-50,789, 2017-50,939, 2018-60,738, 2019ರಲ್ಲಿ 1,52,172ಕ್ಕೆ ದೂರುಗಳ ಪ್ರಮಾಣ ಏರಿಕೆಯಾಗಿವೆ. 2019 ರಿಂದ 2022 ನವೆಂಬರ್‌ ವರೆಗೆ 5,80,742 ದೂರುಗಳು ಬಂದಿವೆ. 1.27 ಲಕ್ಷಕ್ಕೂ ಅಧಿಕ ಮಂದಿ “ಪಬ್ಲಿಕ್‌ ಐ ಆ್ಯಪ್‌’ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. 15 ಸಾವಿರಕ್ಕೂ ಹೆಚ್ಚಿನ ಜನ ಸಕ್ರಿಯವಾಗಿದ್ದಾರೆ. 2017ರಲ್ಲಿ ದಿನಕ್ಕೆ ಸರಾಸರಿ ಸಲ್ಲಿಕೆಯಾಗುತ್ತಿದ್ದ 90-110 ದೂರುಗಳ ಪ್ರಮಾಣ 310ಕ್ಕೆ ಏರಿಕೆಯಾಗಿದೆ.

ಯಾವ ಮಾದರಿಯ ದೂರುಗಳು?: ಫ‌ುಟ್‌ಪಾತ್‌ ಪಾರ್ಕಿಂಗ್‌, ನೋ ಪಾರ್ಕಿಂಗ್‌, ಹೆಲ್ಮೆಟ್‌ ರಹಿತ ಚಾಲನೆ, ವಾಹನ ಚಲಾಯಿಸುವ ವೇಳೆ ಮೊಬೈಲ್‌ ಬಳಕೆ, ತ್ರಿಬಲ್‌ ರೈಡಿಂಗ್‌, ದೋಷಯುಕ್ತ ನಂಬರ್‌ ಪ್ಲೇಟ್‌, ಏಕಮುಖ ಸಂಚಾರದಂತಹ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳೇ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿವೆ.

ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕಣ್ಣು ತಪ್ಪಿಸಿದರೂ, ಅಪಘಾತದ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಿ. ಸಂಚಾರ ಉಲ್ಲಂ ಸುವವರ ಪತ್ತೆಗೆ “ಪಬ್ಲಿಕ್‌ ಐ ಆ್ಯಪ್‌’ ಸಹಕಾರಿಯಾಗಿದೆ. -ಡಾ|ಎಂ.ಎ.ಸಲೀಂ, ವಿಶೇಷ ಆಯುಕ್ತ, ಸಂಚಾರ ವಿಭಾಗ

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next