Advertisement

ಅಕ್ಷರ ಜಾತ್ರೆಗೆ ಜಿಪಂ 5.75 ಲಕ್ಷ ದೇಣಿಗೆ

10:52 AM Jan 21, 2020 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಮೂರು ದಶಕಗಳ ನಡೆಯುತ್ತಿರುವ ನುಡಿ ಜಾತ್ರೆಗೆ ಜಿಪಂ ಹಾಗೂ ಸದಸ್ಯರ ತಮ್ಮ ಗೌರವಧನ ಸೇರಿ 5.75 ಲಕ್ಷ ರೂ. ದೇಣಿಗೆ ನೀಡುವ ನಿರ್ಧಾರವನ್ನು ಸೋಮವಾರ ತೆಗೆದುಕೊಳ್ಳಲಾಗಿದೆ.

Advertisement

ನಗರದ ನೂತನ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ 17ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷೆ ಸುವರ್ಣಾ ಹನಮಂತರಾವ ಮಾಲಾಜಿ, ಫೆ.5ರಿಂದ ಮೂರು ದಿನ ಜಿಲ್ಲೆಯಲ್ಲಿ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಪಂ ವತಿಯಿಂದ ಮೂರು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.

ಸ್ಥಳೀಯ ಸರ್ಕಾರದ ಸಂವರ್ಧನೆಗೆ ಸಂಬಂಧಿಸಿದ ಅಖೀಲ ಭಾರತ ಮಟ್ಟದ, ರಾಜ್ಯಮಟ್ಟದ, ಅಂತರ್‌ ರಾಜ್ಯಮಟ್ಟದ ಸಂಘಗಳಿಗೆ, ಗ್ರಾಪಂ, ತಾಪಂ ಹಾಗೂ ಜಿಪಂ ಚಟುವಟಿಕೆಗಳಿಗೆ ನಡೆಯುವ ವಸ್ತು ಪ್ರದರ್ಶನ ಮತ್ತು ಸಮ್ಮೇಳನಗಳಿಗೆ ವಂತಿಗೆಗಳನ್ನು ನೀಡುವುದಕ್ಕಾಗಿ ಸರ್ಕಾರದ ಸುತ್ತೋಲೆ ಇದೆ ಎಂದರು.

ಅಖೀಲ ಭಾರತ ಮಟ್ಟದ ಸಂಸ್ಥೆಗಳಿಗೆ ಒಂದು ಲಕ್ಷ ರೂ., ರಾಜ್ಯಮಟ್ಟದ ಸಂಸ್ಥೆಗಳಿಗೆ ಐವತ್ತು ಸಾವಿರ ರೂ., ಅಂತರ್‌ ಜಿಲ್ಲಾಮಟ್ಟದ ಸಂಸ್ಥೆಗಳಿಗೆ ಮೂವತ್ತು ಸಾವಿರ ರೂ., ಜಿಲ್ಲಾಮಟ್ಟದ ಸಂಸ್ಥೆಗಳಿಗೆ ಇಪ್ಪತ್ತು ಸಾವಿರ ರೂ., ಜಿಪಂ ವತಿಯಿಂದ ನೀಡುವುದಕ್ಕಾಗಿ ಸರ್ಕಾರದ ನಿಯಮಗಳಿವೆ. ಈ ಬಾರಿ ವಿಶೇಷವಾಗಿ ಫೆ.5ರಿಂದ ಮೂರು ದಿನ ಜಿಲ್ಲೆಯಲ್ಲಿ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಹೀಗಾಗಿ ಮೂರು ಲಕ್ಷ ರೂ. ದೇಣಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಶೋಭಾ ಸಿರಸಗಿ, ಜಿಪಂ ಸಿಇಒ ಡಾ.| ರಾಜಾ.ಪಿ, ಮುಖ್ಯ ಯೋಜನಾ ಧಿಕಾರಿ ಪ್ರವೀಣ ಪ್ರಿಯಾ ಡೇವಿಡ್‌ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next