Advertisement
ಮಹಾರಾಷ್ಟ್ರದ ಧೂಮ, ವಾರಣಾ, ಉರ್ಮೋದಿ, ತರಾಳಿ, ಕೊಯ್ನಾ, ಯವತಿ ಮಸೋಳಿ, ಪಂಚಗಂಗಾ, ದೂದಗಂಗಾ ರಾಜ್ಯದ ಘಟಪ್ರಭಾ ನದಿಗಳ ಉಗಮ ಸ್ಥಾನ ಹಾಗೂ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ಎಲ್ಲ ನದಿಗಳು ತುಂಬಿ ಹರಿದು ಕೃಷ್ಣೆಯನ್ನು ಸೇರುತ್ತವೆ. ಇದರಿಂದ ಕೃಷ್ಣೆ ಪ್ರವಾಹ ಅಪಾಯಮಟ್ಟ ಮೀರಿ ಹರಿಯುವಂತಾಗಿದ್ದು, ಕಳೆದ ಕೆಲ ದಿನಗಳಿಂದ ಗಡಿ ಭಾಗದ ರಾಜಾಪುರ ಬ್ಯಾರೇಜ್, ಹಿಪ್ಪರಗಿ ಬ್ಯಾರೇಜ್‌ಗಳಿಗೆ ಕೃಷ್ಣೆ ನೀರು ವ್ಯಾಪಕವಾಗಿ ಹರಿದು ಬಂದು ಬ್ಯಾರೇಜುಗಳಿಂದ ನೀರು ಹೊರ ಹೋಗಲು ಗೇಟುಗಳ ಪ್ರಮಾಣ ಕಡಿಮೆಯಿದ್ದು ಬ್ಯಾರೇಜುಗಳ ಹಿಂಭಾಗ ಹಾಗೂ ಮುಂಭಾಗದ ಗ್ರಾಮಗಳಲ್ಲಿ ನೀರು ನುಗ್ಗಿದ್ದರಿಂದ ಕೃಷ್ಣಾ ನದಿ ದಡದಲ್ಲಿರುವ ರೈತರ ಬೆಳೆಗಳು ಜಲಾವೃತವಾಗಿರುವುದಲ್ಲದೇ ಗ್ರಾಮಗಳಲ್ಲಿ ವ್ಯಾಪಕ ನೀರು ಬಂದು ಗ್ರಾಮಸ್ಥರು ಗ್ರಾಮಗಳನ್ನು ತೊರೆಯುವಂತಾಗಿದೆ.
Related Articles
Advertisement
ಭೇಟಿ: ನೆರೆ ಪೀಡಿತ ಅರಳದಿನ್ನಿ ಗ್ರಾಮಕ್ಕೆ ಶಾಸಕ ಶಿವಾನಂದ ಪಾಟೀಲ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಸಂಸದ ರಮೇಶ ಜಿಗಜಿಣಗಿ, ಜಿಪಂ ಸದಸ್ಯೆ ಬಸಮ್ಮ ಮಾದರ, ತಾಪಂ ಸದಸ್ಯ ಮಲ್ಲು ರಾಠೊಡ, ಮುಖಂಡರಾದ ಸಂಗರಾಜ ದೇಸಾಯಿ, ಸೋಮನಗೌಡ ಪಾಟೀಲ (ಮನಗೂಳಿ) ಹಾಗೂ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೋಹ್ಮದ್ ಮೋಹ್ಸಿನ್, ಎಸ್ಪಿ ಪ್ರಕಾಶ ನಿಕ್ಕಂ, ತಹಶೀಲ್ದಾರ್, ತಾಪಂ ಆಡಳಿತಾಧಿಕಾರಿ ಸೇರಿದಂತೆ ಹಲವಾರು ಮುಖಂಡರು ಭೇಟಿ ನೀಡಿದ್ದಾರೆ.
ಇನ್ನು ಆಲಮಟ್ಟಿ ಪಿಡಿಒ ಮಂಜುಳಾ ಘಂಟಿ, ಅಧ್ಯಕ್ಷೆ ಸೈದಮ್ಮ ಬೆಣ್ಣಿ, ಗ್ರಾಮ ಲೆಕ್ಕಾಧಿಕಾರಿ ನಾನಾಗೌಡ ಪಾಟೀಲ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಹಾಗೂ ಅವರ ತಂಡ, ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಳಿಯಂತೆ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.