Advertisement
ನಗರಸಭೆಯ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡಿಸಲಾಗಿದ್ದು, ಎಲ್ಲ ಸದಸ್ಯರು ಹಾಗೂ ಸಾರ್ವಜನಿಕರು ನಗರದ ಸೌಂದರ್ಯಕರಣ ಹಾಗೂ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶ್ರೀಶೈಲ ಬೀಳಗಿ ಹೇಳಿದರು.
ಯೋಜನೆ ಆರಂಭಿಸಿದ್ದು ಅದಕ್ಕೆ ಭೂಮಿಪೂಜೆ ಮಾಡಲಾಗಿದೆ ಎಂದರು. ನಗರೋತ್ಥಾನದಡಿ ಅಭಿವೃದ್ಧಿಗೆಂದು ಮೂಲಭೂತ ಸೌಕರ್ಯಕ್ಕೆ 30 ಕೋಟಿ ರೂ.ಗಳಷ್ಟು ಅನುದಾನ ಹಾಗೂ ರಾಜ್ಯ ಹಣಕಾಸು ಅಡಿಯಲ್ಲಿ 5 ಕೋಟಿ ರೂ. ಗಳಷ್ಟು ಹಣ ಬಿಡುಗಡೆಗೊಂಡಿದೆ. ಈ ಕುರಿತು ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಸಮಸ್ಯೆಗಳನ್ನು ಸದಸ್ಯರು ಸಾರ್ವಜನಿಕರ ಮೂಲಕ ಪಡೆದು ಪರಿಹರಿಸಬೇಕು. ಒಳಚರಂಡಿಗೆ ಸಂಬಂಧಿ ಸಿದ ಕಾಮಗಾರಿಯು ಶೇ. 50ರಷ್ಟು ಮುಕ್ತಾಯಗೊಂಡಿದೆ.
Related Articles
Advertisement
ಅವಳಿ ಪಟ್ಟಣದಾದ್ಯಂತ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ರಸ್ತೆಗಳೆಲ್ಲವೂ ಹಾಳಾಗಿವೆ. ಅವೆಲ್ಲವುಗಳಿಗೆ ಮರು ಡಾಂಬರೀಕರಣ ಹಾಗು ಸಿಸಿ ರಸ್ತೆ ಕಾರ್ಯ ಜರುಗಲಿದೆ ಎಂದು ಸವದಿ ತಿಳಿಸಿದರು.
ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿದರು. ಆಯವ್ಯಯ ಮಂಡನೆ ಸಂದರ್ಭ ಆಡಳಿತಾರೂಢ ಬಿಜೆಪಿ ಸದಸ್ಯರು ಮಾತ್ರ ಕಂಡು ಬಂದು ವಿಪಕ್ಷದ ಸದಸ್ಯರ ಗೈರು ಎದ್ದು ಕಾಣುತ್ತಿತ್ತು. ಆಯವ್ಯಯ ಮಂಡನೆಗೆ ಸಂಜಯ ತೆಗ್ಗಿ ಸಹಮತ ತೋರಿಸಿದರೆ ಯಲ್ಲಪ್ಪ ಕಟಗಿ ಅನುಮೋದಿಸಿದರು.
ನಗರಸಭೆ ಉಪಾಧ್ಯಕ್ಷೆ ಬಾಳವ್ವ ಕಾಖಂಡಕಿ, ವ್ಯವಸ್ಥಾಪಕ ಸುಭಾಸ ಖುದಾನಪುರ, ಬಸವರಾಜ ಶರಣಪ್ಪನವರ, ಬಿ.ಎಂ. ಡಾಂಗೆ, ಎಸ್. ಎಂ. ಕಲಬುರ್ಗಿ, ವಿ.ಆಯ್. ಬೀಳಗಿ, ಮುಖೇಶ ಬನಹಟ್ಟಿ, ವೈಶಾಲಿ ಹಿಪ್ಪರಗಿ, ಎಂ.ಎಂ. ಮುಗಳಖೋಡ, ರಾಜಕುಮಾರ ಹೊಸೂರ, ಶೋಭಾ ಹೊಸಮನಿ, ಸಂಗೀತಾ ಕೋಳಿ, ಮುತ್ತಪ್ಪ ಚೌಡಕಿ, ಎಸ್. ಎಂ. ಮಠದ, ರಮೇಶ ಮಳ್ಳಿ, ಅಭಿನಂದನ ಸೋನಾರ, ಪ್ರಭಾಕರ ಮೊಳೇದ, ಗೌರಿ ಮಳ್ಳಿ, ಅರುಣ ಬುದ್ನಿ ಇದ್ದರು.