Advertisement

ನೇಪಾಳದಲ್ಲಿ 5.2 ತೀವ್ರತೆಯ ಭೂಕಂಪ; ಸಾವುನೋವಿನ ತತ್ ಕ್ಷಣದ ವರದಿಗಳಿಲ್ಲ

10:05 PM Apr 01, 2023 | Team Udayavani |

ಕಠ್ಮಂಡು: ನೇಪಾಳದ ದೋಲಾಖಾ ಜಿಲ್ಲೆಯ ಸೂರಿಯಲ್ಲಿ ಶನಿವಾರ ಬೆಳಗ್ಗೆ ಮಧ್ಯಮ ತೀವ್ರತೆಯ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ, ಕಠ್ಮಂಡುವಿನಿಂದ 180 ಕಿಮೀ ಪೂರ್ವಕ್ಕೆ ಡೋಲಾಖಾದಲ್ಲಿ ಬೆಳಗ್ಗೆ 11.27 ಕ್ಕೆ 5.2 ತೀವ್ರತೆಯ ಭೂಕಂಪ ದಾಖಲಾಗಿದೆ.

Advertisement

ನೆರೆಯ ಓಖಲ್‌ದುಂಗಾ, ರಾಮೆಚಾಪ್, ಸಿಂಧುಪಾಲ್ ಚೌಕ್ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಹಾಗೂ ಕಠ್ಮಂಡು ಕಣಿವೆಯಲ್ಲಿಯೂ ಕಂಪನದ ಅನುಭವವಾಗಿದೆ. ಆದಾಗ್ಯೂ, ಭೂಕಂಪದಿಂದ ಯಾವುದೇ ಹಾನಿ ಅಥವಾ ಮಾನವ ಸಾವುನೋವುಗಳ ಬಗ್ಗೆ ತತ್ ಕ್ಷಣದ ವರದಿಗಳಿಲ್ಲ.

ಶನಿವಾರ ಮುಂಜಾನೆ 3.19ಕ್ಕೆ 4.2 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಕಠ್ಮಂಡುವಿನಿಂದ ಪಶ್ಚಿಮಕ್ಕೆ 130 ಕಿಮೀ ದೂರದಲ್ಲಿರುವ ಗೂರ್ಖಾ ಜಿಲ್ಲೆಯಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿತ್ತು.

ಏಪ್ರಿಲ್ 2015 ರಲ್ಲಿ, ನೇಪಾಳದಲ್ಲಿ 7.8 ತೀವ್ರತೆಯ ವಿನಾಶಕಾರಿ ಭೂಕಂಪವು ಸುಮಾರು 9,000 ಜನರನ್ನು ಬಲಿ ಪಡೆದಿತ್ತು, 22,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 800,000 ಮನೆಗಳು ಮತ್ತು ಶಾಲಾ ಕಟ್ಟಡಗಳನ್ನು ಹಾನಿಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next