Advertisement
ಸಗಟು ಹಣದುಬ್ಬರ ಶೇ.0.53: ಇದು 3 ತಿಂಗಳಲ್ಲೇ ಗರಿಷ್ಠಆಲೂಗಡ್ಡೆ, ಈರುಳ್ಳಿ ಸೇರಿ ತರಕಾರಿ ಹಾಗೂ ಕಚ್ಚಾ ತೈಲ ದರ ಏರಿಕೆಯಿಂದಾಗಿ ಕಳೆದ ಮಾರ್ಚ್‌ನಲ್ಲಿ ಸಗಟು ಹಣದುಬ್ಬರ ಶೇ. 0.53ಕ್ಕೆ ಏರಿಕೆಯಾಗಿದ್ದು, 3 ತಿಂಗಳ ಗರಿಷ್ಠ ಮಟ್ಟವಾಗಿದೆ. ಫೆಬ್ರವರಿಯಲ್ಲಿ ಇದು ಶೇ. 0.20ಯಷ್ಟಿತ್ತು. ಕಳೆದ ವರ್ಷ ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಋಣಾತ್ಮಕ ವಲಯದಲ್ಲಿದ್ದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ), ನವೆಂಬರ್‌ನಿಂದ ಏರಿಕೆ ಕಾಣುತ್ತಿದ್ದು ಈ ವರ್ಷ ಮಾರ್ಚ್‌ನಲ್ಲಿ ಗರಿಷ್ಠ ಹಂತವನ್ನು ತಲುಪಿದೆ. ಹಿಂದಿನ ವರ್ಷ ಮಾರ್ಚ್‌ನಲ್ಲಿ ಈ ಡಬ್ಲ್ಯುಪಿಐ ಶೇ. 1.41ರಷ್ಟಿತ್ತು.