Advertisement

4ನೇ ತಾಲೂಕು ಸಾಹಿತ್ಯ ಸಮ್ಮೇಳನ ಇಂದು

05:01 PM Mar 31, 2022 | Team Udayavani |

ಅಕ್ಕಿಆಲೂರು: ಸಮೀಪದ ಹಾವಣಗಿ ಗ್ರಾಮದಲ್ಲಿ ಮಾ.31 ರಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ 4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಬೆಳಿಗ್ಗೆ 8ಕ್ಕೆ ತಾಲೂಕು ದಂಡಾಧಿಕಾರಿ ಪಿ.ಎಸ್‌. ಎರ್ರಿಸ್ವಾಮಿ ರಾಷ್ಟ್ರಧ್ವಜಾರೋಹಣ ನೆರವೇರಿಸುವರು.

Advertisement

ಪರಿಷತ್‌ ಧ್ವಜಾರೋಹಣವನ್ನು ಲಿಂಗಯ್ಯ ಹಿರೇಮಠ ಹಾಗೂ ನಾಡ ಧ್ವಜಾರೋಹಣವನ್ನು ಷಣ್ಮುಖಪ್ಪ ಮುಚ್ಚಂಡಿ ನೆರವೇರಿಸುವರು. ಬೆಳಿಗ್ಗೆ 9ಕ್ಕೆ ಸಮ್ಮೇಳನದ ಸರ್ವಾಧ್ಯಕ್ಷೆ ಪಾರ್ವತಿಬಾಯಿ ಕಾಶೀಕರ ಅವರ ಭವ್ಯ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ನಡೆಯಲಿದೆ.

ಉದ್ಘಾಟನೆ: ಬೆ.11 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಶಿವಬಸವ ಶ್ರೀಗಳು ವಹಿಸುವರು. ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸುವರು.

ಸಾಹಿತಿ ಸಂಕಮ್ಮ ಸಂಕಣ್ಣನವರ ಉದ್ಘಾಟಿಸುವರು. ಉದಯ ನಾಸಿಕ, ಪಾರ್ವತಿಭಾಯಿ ಕಾಶೀಕರ, ಸಂಸದ ಶಿವಕುಮಾರ ಉದಾಸಿ, ಶಾಸಕ ಶ್ರೀನಿವಾಸ್‌ ಮಾನೆ, ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಪಂ ಸಿಇಒ ಮೊಹಮ್ಮದ ರೋಷನ್‌, ರುಕ್ಮಾಜಿ ಸಾಳುಂಕೆ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವರು.

ಕವಿಗೋಷ್ಠಿ: ಮದ್ಯಾಹ್ನ 1.30 ಕ್ಕೆ ಪ್ರಧಾನ ವೇದಿಕೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಮಾಲತಿ ಭಟ್‌ ಗೋರೇಬೈಲ್‌, ಸಂತೋಷ ಬಿದರಗಡ್ಡೆ, ಮಂಜುನಾಥ ವನಹಳ್ಳಿ, ಹಾವಣಗಿ ಗ್ರಾಪಂ ಸದಸ್ಯರು ಸೇರಿದಂತೆ ಕವಿ-ಕವಿಯತ್ರಿಯರು ಪಾಲ್ಗೊಳ್ಳಲಿದ್ದಾರೆ.

Advertisement

ಸಂಕೀರ್ಣ ಗೋಷ್ಠಿ: ಸಂಜೆ 4ಕ್ಕೆ ಮಹಿಳೆ-ಬದಲಾವಣೆಯ ಹರಿಕಾರಳು ಮತ್ತು ಸಾವಯವ ಕೃಷಿ ಎಂಬ ವಿಷಯಗಳ ಕುರಿತು ಸಂಕೀರ್ಣಗೋಷ್ಠಿ ನಡೆಯಲಿದ್ದು, ಪ್ರಭು ಗುರಪ್ಪನವರ, ಅಶೋಕ ಕರೇಗೌಡ್ರ, ಡಾ.ಯಮುನಾ ಕೋಣೆಸರ್‌, ನಿಂಗಯ್ಯ ಹಿರೇಮಠ, ಮರಿಗೌಡ ಪಾಟೀಲ, ಮಹೇಶ ವಿರುಪಣ್ಣನವರ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳುವರು.

ಬಹಿರಂಗ ಅಧಿವೇಶನ: ಸಂಜೆ 6ಕ್ಕೆ ನಡೆಯಲಿರುವ ಬಹಿರಂಗ ಅಧಿವೇಶನದಲ್ಲಿ ಮಂಜುನಾಥ ಕರ್ಜಗಿ ನಿರ್ಣಯಗಳನ್ನು ಮಂಡಿಸುವರು. ಷಣ್ಮುಖಪ್ಪ ಮುಚ್ಚಂಡಿ, ಡಾ.ವಿಶ್ವನಾಥ ಬೊಂದಾಡೆ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವರು. ಕಿರಣ ಹೂಗಾರ, ಮಂಜುನಾಥ ಭಜಂತ್ರಿ, ರಾಜೀವ ದಾನಪ್ಪನವರ, ಕಿರಣಕುಮಾರ ಮಿರ್ಜಿ ಸನ್ಮಾನ ಸ್ವೀಕರಿಸುವರು. ಸಂಜೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಾಳೂರಿನ ಅಡವಿಸ್ವಾಮಿಮಠದ ಕುಮಾರ ಶ್ರೀಗಳು ಸಾನ್ನಿಧ್ಯ ವಹಿಸುವರು. ನಾಗರಾಜ ಅಡಿಗ, ಶಂಭು ಬಳಿಗಾರ, ಗಣೇಶಪ್ಪ ಕೋಡಿಹಳ್ಳಿ, ಗ್ರಾಪಂ ಅಧ್ಯಕ್ಷ ಅನಂತರಾಜ ಹವಳಣ್ಣನವರ, ವಿಜಯಕಾಂತ ಪಾಟೀಲ, ಸಿಪಿಐ ಗಡ್ಡೆಪ್ಪ ಗುಂಜಟಗಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವರು. ನಂತರ ಖಾಸೀಂ ಅಲಿ ಸಾರಥ್ಯದಲ್ಲಿ ಗೀತ ಸೌರಭ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಕ್ಕಿಆಲೂರಿನ ಚನ್ನವೀರೇಶ್ವರ ನೃತ್ಯ ನಿಕೇತನದಿಂದ ನೃತ್ಯ ಸೌರಭ, ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ, ಗದುಗಿನ ರಾಜಕರಣ್‌, ಮಂಜುನಾಥ ಭಜಂತ್ರಿ ಅವರಿಂದ ಸಾಂಸ್ಕೃತಿಕ ಸೌರಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಮ್ಮೇಳನಕ್ಕೆ ಸಕಲ ಸಿದ್ಧತೆ:

ಅಕ್ಕಿಆಲೂರು: ಹಾವಣಗಿ ಗ್ರಾಮದಲ್ಲಿ ಮಾ.31 ರಂದು ನಡೆಯಲಿರುವ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಪ್ರೊ|ಚಂದ್ರಶೇಖರ ಪಾಟೀಲ (ಚಂಪಾ) ವೇದಿಕೆಯ ಸಿದ್ಧೇಶ್ವರ ಮಹಾಮಂಟಪದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಗ್ರಾಮದ ಪ್ರಮುಖ ಕಡೆಗಳಲ್ಲಿ ನಾಡಿನ ಮಹನೀಯರ ಮಹಾದ್ವಾರಗಳನ್ನು ನಿರ್ಮಿಸಲಾಗಿದ್ದು, ಬ್ಯಾನರ್‌, ಬಂಟಿಂಗ್ಸ್‌ಗಳಿಂದ ಅಲಂಕೃತವಾಗಿದೆ. ಕನ್ನಡಾಭಿಮಾನಿಗಳಿಗೆ ತೊಂದರೆಯಾಗದಂತೆ ವಿಶೇಷ ಬಸ್‌ ಸೌಲಭ್ಯ, ಊಟದ ವ್ಯವಸ್ಥೆ, ಆಸನಗಳ ವ್ಯವಸ್ಥೆ ಸೇರಿದಂತೆ ಮೂಲ ಭೂತ ವ್ಯವಸ್ಥೆಗಳನ್ನು ಮಾಡಲಾಗಿದೆ. ಇನ್ನುಳಿದಂತೆ ಸರ್ಕಾರಿ ನೌಕರರಿಗೆ ಓಓಡಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಹಾವಣಗಿ ಗ್ರಾಮದಲ್ಲಿ ಕನ್ನಡದ ಬ್ಯಾನರ್‌, ಬಂಟಿಂಗ್ಸ್‌, ಬಾವುಟಗಳು ರಾರಾಜಿಸುತ್ತಿವೆ. ಸಮ್ಮೇಳನದಲ್ಲಿ ಹಲವಾರು ಪುಸ್ತಕ ಮಳಿಗೆಗಳು, ಖಾದಿ ಮತ್ತು ಕಂಬಳಿ ಮಳಿಗೆಗಳು, ಜಾನಪದ ಸೊಗಡಿನ ನೈಜ ಸಂಸ್ಕೃತಿ ಸಾರುವ ಚಿತ್ರಕಲೆಗಳ ಪ್ರದರ್ಶನ ಇನ್ನು ಮುಂತಾದ ಮಳಿಗೆಗಳಿಗೆ ಪ್ರತ್ಯೇಕ ಸ್ಥಳವಕಾಶ ಕಲ್ಪಿಸಲಾಗಿದೆ. ಕನ್ನಡ ನಾಡಿನ ಶ್ರೀಮಂತಿಕೆ ಸಾರುವ ನುಡಿಮುತ್ತುಗಳು, ಜಾನಪದ ಶೈಲಿಯ ಕಲಾಚಿತ್ರಗಳು ಕನ್ನಡಿಗರ ಮನ ಸೆಳೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next