Advertisement

ಬಡತನಕ್ಕೆ ಸವಾಲೆಸೆದ ಶಶಾಂಕ್‌ಗೆ ರಾಜ್ಯದಲ್ಲಿ 4ನೇ ರ್‍ಯಾಂಕ್‌

12:38 PM May 02, 2018 | Team Udayavani |

ಪುತ್ತೂರು: ತಂದೆ ಲಿವರ್‌ ಕ್ಯಾನ್ಸರ್‌ಗೆ ಬಲಿಯಾದ ಮೇಲೆ ಕುಟುಂಬಕ್ಕೆ ತಾಯಿಯೇ ಆಧಾರ. ಬೀಡಿ ಕಟ್ಟಿ ಸಾಕಿ ಬೆಳೆಸಿದ ತಾಯಿಯ ಶ್ರಮಕ್ಕೆ ಮಗ ಪ್ರತಿಫಲ ನೀಡಿದ್ದಾನೆ. ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಷಯದಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್‌ ಪಡೆಯುವ ಮೂಲಕ ತಾಯಿ ಶ್ರಮವನ್ನು ಸಾರ್ಥಕಗೊಳಿಸಿದ್ದಾನೆ.

Advertisement

ಬಂಟ್ವಾಳ ಸಜಿಪನಡುವಿನ ಶಶಿಕಲಾ ಮತ್ತು ದಿ| ರಾಘವ ದಂಪತಿ ಪುತ್ರ. ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿ. ತಂದೆಯ ಅಗಲಿಕೆ, ಬಡತನ ಶಶಾಂಕ್‌ಗೆ ಸವಾಲಾಗಿತ್ತು. ತಾಯಿಯ ಧೈರ್ಯದ ಮಾತು, ಸ್ಫೂರ್ತಿ ತುಂಬಿದವು. ಈ ಎಲ್ಲ ಬವಣೆ, ಶ್ರಮ, ನೋವು ಮಗನ ಸಾಧನೆ ಮುಂದೆ ಇಲ್ಲವಾಗಿದೆ. ಪಿಯುಸಿ ಪರೀಕ್ಷೆಯಲ್ಲಿ 592 ಅಂಕ ಪಡೆದಿರುವ ಶಶಾಂಕ್‌, ಸಿ.ಎ. ಮಾಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ. ಸಾಧನೆಗೆ ತಾಯಿಯ ಪ್ರೋತ್ಸಾಹ, ಗುರು, ವಿದ್ಯಾಲಯದ ಬೆಂಬಲ ಕಾರಣ ಎನ್ನುತ್ತಾರೆ ಶಶಾಂಕ್‌. ಸಹೋದರಿ ರಶ್ಮಿತಾ ಎಂ.ಎಸ್ಸಿ. ವಿದ್ಯಾರ್ಥಿನಿ.
ಶಶಾಂಕ್‌ ಅಂಕ- ಇಂಗ್ಲಿಷ್‌-94, ಕನ್ನಡ- 98, ಸಂಖ್ಯಾಶಾಸ್ತ್ರ-100, ಗಣಕವಿಜ್ಞಾನ- 100, ವ್ಯವಹಾರ ಅಧ್ಯಯನ- 100, ಲೆಕ್ಕಶಾಸ್ತ್ರ – 100. ಒಟ್ಟು 600ರಲ್ಲಿ 592 (ಶೇ. 98.6).

Advertisement

Udayavani is now on Telegram. Click here to join our channel and stay updated with the latest news.

Next