ನ್ಯೂಪೋರ್ಟ್: ಕಜಾಕ್‌ಸ್ಥಾನದ ಅಲೆಕ್ಸಾಂಡರ್ ಬಬ್ಲಿಕ್ ಅವರನ್ನು ನೇರ ಸೆಟ್‌ಗಳಿಂದ ಉರುಳಿ ಸಿದ ಅಮೆರಿಕದ ಜಾನ್ ಇಸ್ನರ್ ನ್ಯೂಪೋರ್ಟ್‌ನಲ್ಲಿ ಸಾಗಿದ ಎಟಿಪಿ ಟೆನಿಸ್ ಕೂಟದ ಪ್ರಶಸ್ತಿ ಜಯಿಸಿದ್ದಾರೆ.
ಅಗ್ರ ಶ್ರೇಯಾಂಕದ ಇಸ್ನರ್ 7-6 (7-2), 6-3 ಸೆಟ್‌ಗಳಿಂದ ಗೆಲುವು ಸಾಧಿಸಿ ತಮ್ಮ ಬಾಳ್ವೆಯ 4ನೇ ನ್ಯೂಪೋ ರ್ಟ್ ಪ್ರಶಸ್ತಿಯನ್ನೆತ್ತಿದರು. ಅವರು ಈ ಹಿಂದೆ 2011, 2012 ಮತ್ತು 2017ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು.
ಕಳೆದ ಮಾರ್ಚ್‌ನಲ್ಲಿ ಮಯಾಮಿ ಯಲ್ಲಿ ನಡೆದ ಟೆನಿಸ್ ಕೂಟದ ಫೈನಲ್ ತಲುಪಿದ ಬಳಿಕ ಎಡ ಪಾದದ ಗಾಯದಿಂದಾಗಿ ಇಸ್ನರ್ ಕೆಲವು ಸಮಯ ಟೆನಿಸ್‌ನಿಂದ ದೂರ ಉಳಿದಿದ್ದರು. ಇಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಇಸ್ನರ್ ಸೆಮಿಫೈನಲ್‌ನಲ್ಲಿ ಮೂರು ಸೆಟ್‌ಗಳ ಕಠಿನ ಹೋರಾಟ ನಡೆಸಿ ಗೆಲುವು ಒಲಿಸಿಕೊಂಡಿದ್ದರು.
34ರ ಹರೆಯದ ಇಸ್ನರ್ ಕೇವಲ 5 ಏಸ್ ಸಿಡಿಸಿದ್ದರು. ಆದರೆ ಮೊದಲ ಸರ್ವ್‌ನಲ್ಲಿಯೇ ಹೆಚ್ಚಿನ ಅಂಕ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದರು. 3 ಬ್ರೇಕ್ ಪಾಯಿಂಟ್‌ಗಳನ್ನು ಅವರು ಉಳಿಸಿಕೊಂಡಿದ್ದರು.
22ರ ಹರೆಯದ ಬಬ್ಲಿಕ್ ಎಟಿಪಿ ಕೂಟದ ಫೈನಲ್‌ನಲ್ಲಿ ಆಡುತ್ತಿರುವುದು ಇದೇ ಮೊದಲು. ಮೊದಲ ಸೆಟ್‌ನಲ್ಲಿ ತೀವ್ರ ಪೈಪೋಟಿ ನೀಡಿದ್ದರಿಂದ ಇದು ಟೈಬ್ರೇಕರ್‌ಗೆ ಹೋಗಿತ್ತು. ಆದರೆ ದ್ವಿತೀಯ ಸೆಟ್‌ನಲ್ಲಿ ಇಸ್ನರ್ ಆಟಕ್ಕೆ ಉತ್ತರಿಸಲು ಅವರಿಂದ ಸಾಧ್ಯವಾಗಲಿಲ್ಲ.