Advertisement
ಇಲ್ಲಿನ ತಡಸಿನಕೊಪ್ಪ ಬಳಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ 4ನೇ ವರ್ಷದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
Related Articles
Advertisement
ಭಾರತ ಮತ್ತು ಕರ್ನಾಟಕಕ್ಕೆ ಐಟಿ, ಕೈಗಾರಿಕೆ ಮತ್ತು ಸೇವಾ ವಲಯದ ಕ್ಷೇತ್ರಗಳಿಗೆ ಬೇಕಾಗುವ ಅತ್ಯಂತ ಉತ್ಕೃಷ್ಠವಾದ ಮಾನವ ಸಂಪನ್ಮೂಲವನ್ನು ಸೃಜಿಸುವ ಶಕ್ತಿ ಇದೆ. ಇದೇ ನಮ್ಮ ದೊಡ್ಡ ಬಂಡವಾಳವಾಗಿದ್ದು, ಇಂದು ಅಮೇರಿಕಾ,ಚೀನಾ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲೂ ಸಿಂಹಪಾಲು ಭಾರತೀಯರೇ ಉದ್ಯೋಗದಲ್ಲಿದ್ದಾರೆ.
ದೇಶದಲ್ಲಿನ 1100 ವಿಶ್ವವಿದ್ಯಾಲಯಗಳು,54 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳು ದೇಶದಲ್ಲಿದ್ದರೂ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿಲ್ಲ. ಆದರೆ ಇದೀಗ ತಾಂತ್ರಿಕ ಶಿಕ್ಷಣದ ದೃಷ್ಠಿಯಿಂದ ಭಾರತೀಯ ಮಾನವ ಸಂಪನ್ಮೂಲಕ್ಕೆ ವಿಶ್ವದಲ್ಲಿಯೇ ಬೇಡಿಕೆ ಇದ್ದು, ಇದು ದೇಶದ ಅರ್ಥವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸಹಾಯಕವಾಗಲಿದೆ ಎಂದು ಮೋಹನದಾಸ್ ಪೈ ಅಭಿಪ್ರಾಯ ಪಟ್ಟರು.
ಮಹಿಳೆಯರು ದೇಶ ಕಟ್ಟುತ್ತಾರೆ : ಇನ್ನು ಐಟಿಬಿಟಿ ಕ್ಷೇತ್ರದಲ್ಲಿ ಯುವತಿಯರು ಅತ್ಯಂತ ಶ್ರದ್ಧೆಯಿಂದ ಕಲಿಕೆ ಆರಂಭಿಸಿದ್ದು, ಹೆಚ್ಚು ಉದ್ಯೋಗಗಳು ಅವರ ಪಾಲಾಗುತ್ತಿರುವುದು ಖುಷಿಯ ಸಂಗತಿ. ಎಂದಿದ್ದರೂ ಮಹಿಳೆಯಿಂದ ಆಗುವ ಕೆಲಸಗಳು ದಕ್ಷತೆಯಿಂದಲೇ ಕೂಡಿರುತ್ತವೆ. ಈ ನಿಟ್ಟಿನಲ್ಲಿ ಮುಂಬರುವ ದಶಕಗಳು ಮಹಿಳೆಯರದ್ದೇ ಆಗಿರಲಿದ್ದು, ಅವರು ದೇಶ ಕಟ್ಟಬಲ್ಲರು ಎಂದು ಐಟಿ ಕ್ಷೇತ್ರದಲ್ಲಿನ ಮಹಿಳಾ ಶಕ್ತಿಯನ್ನು ಮೋಹನದಾಸ್ ಪೈ ಶ್ಲಾಘಿಸಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಎಚ್.ಪಿ.ಕಿಂಚಾ ಮಾತನಾಡಿ, ಇಂದು ಪದವಿ ಮುಗಿಸಿದ ವಿದ್ಯಾರ್ಥಿಗಳು ನ್ಯಾನೋ ತಂತ್ರಜ್ಞಾನ, ಕಿರು ಉದ್ಯಮ, ದೊಡ್ಡ ಉದ್ಯಮ, ಕಾಗ್ನೇಟಿವ್ ವಿಜ್ಞಾನ ಮತ್ತು ಆರ್ಥಿಕತೆ ಈ ಐದು ವಿಷಯಗಳನ್ನು ಗಮನದಲ್ಲಿಡಬೇಕು. ತೈತ್ರೇಯ ಉಪನಿಷತ್ತಿನಲ್ಲಿ ಹೇಳಿದಂತೆ ಸತ್ಯದ ದಾರಿಯಲ್ಲೇ ನಡೆದು ಧರ್ಮ ಬಿಡದೇ ಬದುಕಬೇಕು ಎಂದು ಸಲಹೆ ನೀಡಿದರು.
ಐಐಐಟಿಯ ರೆಜಿಸ್ಟ್ರಾರ್ ಪ್ರೊ|ಚೆನ್ನಪ್ಪ ಅಕ್ಕಿ ಅವರು ಐಐಐಟಿಯ ಒಂದು ವರ್ಷದ ಸಾಧನೆ ಪಟ್ಟಿ ಓದಿ ವಿವರಿಸಿದರು. ಹಿರಿಯ ಪ್ರಾಧ್ಯಾಪಕರಾದ ಪ್ರೊ|ಎಚ್.ಎಸ್.ಜಮದಗ್ನಿ, ಧಾರವಾಡ ಐಐಟಿ ಮುಖ್ಯಸ್ಥ ಪ್ರೊ|ಪಿ.ಶೇಷು,ಡಾ|ರಾಜೇಂದ್ರ ಹೆಗಡಿ,ಪ್ರೊ|ಕೆ.ಎಂ.ಬಾಲಸುಬ್ರಮಣ್ಯಮೂರ್ತಿ, ಸುನೀತ ವರ್ಮಾ ಸೇರಿದಂತೆ ಗಣ್ಯರು ಹಾಜರಿದ್ದರು.
ಚಿನ್ನದ ಪದಕ ಪ್ರದಾನ :
ಐಐಐಟಿಯ ೪ನೇ ಘಟಿಕೋತ್ಸವದಲ್ಲಿ 2021ನೇ ಸಾಲಿನಲ್ಲಿ ಪದವಿ ಪಡೆದ ಒಟ್ಟು 161ವಿದ್ಯಾರ್ಥಿಗಳು ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನೀಯರಿಂಗ್ ವಿಷಯದಲ್ಲಿ 47 ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ ಇಂಜಿನೀಯರಿಂಗ್ನಲ್ಲಿ ಪದವಿ ಪಡೆದುಕೊಂಡರೆ ನಾಲ್ಕು ಜನ ವಿದ್ಯಾರ್ಥಿಗಳು ಚಿನ್ನದ ಪದ ಪಡೆದರು. ಪಾರ್ವತಿ ಜಯಕುಮಾರ್ ಅವರು ಹೆಚ್ಚು ಚಿನ್ನದ ಪದಕ ಪಡೆದು ಚಿನ್ನದ ಹುಡುಗಿಯಾಗಿ ಹೊರ ಹೊಮ್ಮಿದರು. ವೃಷಭ ದ್ವಿವೇದಿ, ಸ್ಮೀತಾ ಸಾಯಿ ಬುಡ್ಡೆ ಮತ್ತು ನೇಹಾ ದೇವಿದಾಸ್ ಮಹೇಂದ್ರಕರ್ ತಲಾ ಒಂದೊಂದು ಚಿನ್ನದ ಪದಕ ಪಡೆದುಕೊಂಡರು. ಮುಖ್ಯ ಅತಿಥಿಯಾಗಿದ್ದ ಟಿ.ವಿ.ಮೋಹನದಾಸ್ ಪೈ ಮತ್ತು ಪ್ರೊ|ಎಚ್.ಪಿ.ಕಿಂಚಾ ಅವರು ಚಿನ್ನದ ಪದಕ ಪ್ರದಾನ ಮಾಡಿದರು.
ಸಾಧನೆ ಎಂಬುದು ಸರಳ ಜೀವನ, ಧರ್ಮದ ದಾರಿಯಲ್ಲೇ ಆಗಬೇಕು.ದೊಡ್ಡ ಮತ್ತು ಸುಂದರ ಕನಸುಗಳು ಎಲ್ಲರಿಗೂ ಇರಬೇಕು. ಅವುಗಳನ್ನು ಸಾಕಾರ ಮಾಡುತ್ತಲೇ ಉತ್ತಮ ಬದುಕು ಬದುಕಬೇಕು. ಅಂದಾಗಲೇ ಬದುಕಿಗೆ ಸಾರ್ಥಕತೆ ಬರಲಿದೆ.–ಟಿ.ಮೋಹನದಾಸ್ ಪೈ,ಐಟಿ ದಿಗ್ಗಜ.