Advertisement

ಉಕ್ರೇನಿಯನ್‌ನ್ರ ಡಾನ್‌ ಬಾಸ್‌ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

07:00 AM Nov 29, 2018 | Team Udayavani |

ಪಣಜಿ: ಗೋವಾದ ರಾಜಧಾನಿ ಪಣಜಿಯಲ್ಲಿ ನ. 20 ರಿಂದ ಆರಂಭವಾದ 49 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಬುಧವಾರ ತೆರೆ ಬಿದ್ದಿದೆ. ಚಿತ್ರೋತ್ಸವದ ಸುವರ್ಣ ನವಿಲು ಪುರಸ್ಕಾರಕ್ಕೆ ಉಕ್ರೇನ್‌ ದೇಶದ ಚಲನಚಿತ್ರ ಡಾನ್‌ಬಾಸ್‌ ಆಯ್ಕೆಯಾಯಿತು. ಅತ್ಯುತ್ತಮ ನಟ ಪ್ರಶಸ್ತಿ ಮಲಯಾಳಂ ಭಾಷೆ ಇ.ಮಾ.ಯು ಚಿತ್ರದ ಚೆಂಬನ್‌ ವಿನೋದ್‌ ಪಡೆದರೆ, ಅತ್ಯುತ್ತಮ ನಟಿ ಪ್ರಶಸ್ತಿ ಮತ್ತೂಂದು ಉಕ್ರೇನಿಯನ್‌ ಚಿತ್ರವಾದ ವೆನ್‌ ದಿ ಟ್ರೀಸ್‌ ಫಾಲ್‌ನಲ್ಲಿನ ಅಭಿನಯಕ್ಕಾಗಿ ಅನಾಸ್ತಸಿಲಾ ಪುಸ್ತೋವಿತ್‌ ಪಡೆದುಕೊಂಡರು. ಇ.ಮಾ.ಯು ಚಿತ್ರದ ನಿರ್ದೇಶಕ ಲಿಜೋ ಜೋಸ್‌ ಪೆಲಿಸೆರಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ದೊರೆತಿದೆ.

Advertisement

ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಬಲ್ಗೇರಿಯನ್‌ ಭಾಷೆಯ ಆಗಾ ಪಡೆದರೆ, ಅತ್ತುತ್ತಮ ಚೊಚ್ಚಲ ಚಿತ್ರ ನಿರ್ದೇಶಕ ಪ್ರಶಸ್ತಿ ರೆಸ್ಪೆಕ್ಟೊ ಚಿತ್ರದ ಅಲ್ಬರ್ಟೊ ಮಾಂಟ್ರೀಸ್‌ ಪಾಲಾಯಿತು.  ಪ್ರವೀಣ್‌ ಮೊರ್ಚಲೆ ನಿರ್ದೇಶನದ ವಾಕಿಂಗ್‌ ವಿತ್‌ ದಿ ವಿಂಡ್‌ ಚಿತ್ರಕ್ಕೆ ಐಸಿಎಫ್ಟಿ-ಯುನೆಸ್ಕೊ ಗಾಂಧಿ ಮೆಡಲ್‌ ಪುರಸ್ಕಾರ ದೊರೆಯಿತು. ಇದೇ ವಿಭಾಗದಲ್ಲಿ ಸ್ಪ್ಯಾನಿಶ್‌ ಚಿತ್ರ ಲೊಸ ಸೈಲೆನ್ಸಿಯೋಸ್‌ ಚಿತ್ರ ಕ್ಕೆ ವಿಶೇಷ ಪುರಸ್ಕಾರ ಲಭಿಸಿದೆ. ಬಾಲಿವುಡ್‌ನ‌ ಚಿತ್ರಕಥೆಗಾರ ಸಲೀಂ ಖಾನ್‌ ಗೆ ಈ ರ್ವದ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಪುತ್ರ ಅರ್ಬಾಜ್‌ ಖಾನ್‌ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ತಮಿಳಿನ ಟು ಲೆಟ್‌ ಚಿತ್ರಕ್ಕಾಗಿ ನಿರ್ದೇಶಕ ಚೆರಿಯನ್‌ ರಾ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು. 

ಸಂಭ್ರಮದಿಂದ ಮುಗಿದ ಉತ್ಸವ ಒಟ್ಟು 9 ದಿನಗಳು ನಡೆದ ಚಿತ್ರೋತ್ಸವದಲ್ಲಿ 210 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶಿತವಾದವು. ಸಮಾರೋಪ ಸಮಾರಂಭದಲ್ಲಿ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಕೆ.ಜೆ. ಅಲೊ³àನ್ಸಾ, ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಗೋವಾದ ರಾಜ್ಯಪಾಲೆ ಮೃದುಲಾ ಸಿನ್ಹಾ, ಹಿಂದಿ ಚಿತ್ರನಟ ಅನಿಲ್‌ ಕಪೂರ್‌ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತಲ್ಲದೇ, ತೀರ್ಪುಗಾರರನ್ನೂ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next