Advertisement

ರಕ್ಷಣಾ ಶಸ್ತ್ರಾಸ್ತ್ರ ತಯಾರಿಕಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಕ್ಕೆ ನಗದು ಬಹುಮಾನ

09:49 PM Jun 13, 2021 | Team Udayavani |

ನವದೆಹಲಿ: ರಕ್ಷಣಾ ಶಸ್ತ್ರಾಸ್ತ್ರ ತಯಾರಿಕಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವವರಿಗೆ ನಗದು ಪುರಸ್ಕಾರ ನೀಡುವ ಮೂಲಕ ಮೇಕ್‌ ಇನ್‌ ಇಂಡಿಯಾಕ್ಕೆ ಹೆಚ್ಚಿನ ಉತ್ತೇಜನ ನೀಡಲು ರಕ್ಷಣಾ ಇಲಾಖೆ ತೀರ್ಮಾನಿಸಿದೆ. ಇದಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ 499.8 ಕೋಟಿ ರೂ.ಗಳನ್ನು ಮೀಸಲಿರಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಒಪ್ಪಿಗೆ ನೀಡಿದ್ದಾರೆ.

Advertisement

ಈ ಮೂಲಕ ರಕ್ಷಣಾ ಶಸ್ತ್ರಾಸ್ತ್ರ ತಯಾರಿಕಾ ಕ್ಷೇತ್ರವನ್ನು ಸಂಪೂರ್ಣವಾಗಿ ಆತ್ಮನಿರ್ಭರವನ್ನಾಗಿಸಲು ಹೊಸ ಪ್ರಯತ್ನಕ್ಕೆ ಕೈಹಾಕಲಾಗಿದೆ. ಈ ಕುರಿತಂತೆ ಪ್ರಕಟಣೆ ನೀಡಿರುವ ರಕ್ಷಣಾ ಇಲಾಖೆ, “ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ತೊಡಗಿಕೊಳ್ಳುವ ಸುಮಾರು 300 ಸ್ಟಾರ್ಟ್‌ ಅಪ್‌ ಗಳು ಯಾವುದಾದರೂ ಹೊಸ ಆವಿಷ್ಕಾರಗಳನ್ನು ಮಾಡಿದರೆ ಅಂಥ ಕಂಪನಿಗಳಿಗೆ ಈ ನಗದು ಪುರಸ್ಕಾರ ನೀಡಲಾಗುತ್ತದೆ.

ಇದನ್ನೂ ಓದಿ:ಒಂದೇ ಕುಟುಂಬದ 11 ಜನರಿಗೆ ಸೋಂಕು : ಗ್ರಾಮಸ್ಥರಲ್ಲಿ ಆತಂಕ

ಇನ್ನೋವೇಷನ್ಸ್‌ ಫಾರ್‌ ಡಿಫೆನ್ಸ್‌ ಎಕ್ಸೆಲೆನ್ಸ್‌ (ಐಡಿಇಎಕ್ಸ್‌)- ಡಿಫೆನ್ಸ್‌ ಇನೋವೇಷನ್‌ ಆರ್ಗನೈಷನ್‌ ಎಂಬ ಯೋಜನೆಯಡಿ ಈ ಬಹುಮಾನ ವಿತರಿಸಲಾಗುತ್ತದೆ. ಮುಂದಿನ ಐದು ವರ್ಷಗಳವರೆಗೆ ಈ ಯೋಜನೆ ಚಾಲ್ತಿಯಲ್ಲಿರಲಿದೆ’ ಎಂದು ರಕ್ಷಣಾ ಇಲಾಖೆ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next