Advertisement

ಜಿಲ್ಲೆಯ 496 ಕಿ.ಮೀ. ರಸ್ತೆ ಅಭಿವೃದ್ಧಿಗೆ ಅನುಮೋದನೆ

10:16 AM Jan 27, 2019 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ 450 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯಲ್ಲಿ 496 ಕಿ.ಮೀ. ರಸ್ತೆ ಕಾಮಗಾರಿ ಶೀಘ್ರ ಅನುಷ್ಠಾನಗೊ ಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

Advertisement

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ 70ನೇ ಗಣರಾಜ್ಯೋತ್ಸವ ಸಮಾರಂಭದ ಸಂದೇಶ ಭಾಷಣದಲ್ಲಿ ಮಾತನಾಡಿ, ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾ ಮುಖ್ಯ ರಸ್ತೆಗಳು ಸೇರಿದಂತೆ ವಿಶೇಷ ಅಭಿವೃದ್ಧಿ ಯೋಜನೆ, ಪ.ಜಾತಿ, ಗಿರಿಜನ ಉಪಯೋಜನೆ ಹಾಗೂ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಗಳಿಗೆ ಸರ್ಕಾರದಿಂದ ಅನುಮೋದನೆ ದೊರ ಕಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಅನುಷ್ಠಾನ ಗೊಳ್ಳಲಿದೆ ಎಂದರು.

ಬಸ್‌ ನಿಲ್ದಾಣದಲ್ಲಿ ಕಾಂಕ್ರೀಟ್ ನೆಲಹಾಸಿಗೆ: ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಜಿಲ್ಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಳೆದ ಏಳು ತಿಂಗಳಲ್ಲಿ 28 ಹೊಸ ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗಿದೆ. ಪಾಂಡವಪುರ, ಮಳವಳ್ಳಿ, ಹಲಗ ನಹಳ್ಳಿ ಬಸ್‌ ಡಿಪೋಗಳಲ್ಲಿನ ಕಾಂಕ್ರೀಟ್ ನೆಲ ಹಾಸು ನಿರ್ಮಾಣಕ್ಕೆ ಹಾಗೂ ಕೆ.ಎಂ.ದೊಡ್ಡಿ ಬಸ್‌ ನಿಲ್ದಾಣದ ಅಭಿವೃದ್ಧಿಗಾಗಿ 3.83 ಕೋಟಿ ರೂ. ಬಿಡುಗಡೆಯಾಗಿದ್ದು ಕಾಮ ಗಾರಿ ಪ್ರಗತಿ ಯಲ್ಲಿದೆ. ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ, ಮಳವಳ್ಳಿ, ಪಾಂಡವಪುರ, ನಾಗಮಂಗಲ ಹಾಗೂ ಮೇಲುಕೋಟೆಗಳಲ್ಲಿ ಪ್ರಯಾಣಿಕರಿ ಗಾಗಿ ನೀರಿನ ಘಟಕವನ್ನು 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದರು.

ಮೂಲ ಸೌಲಭ್ಯ: ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ 24 ಕೋಟಿ ರೂ.ಗಳನ್ನು ಮಂಜೂರು ಮಾಡಲಾ ಗಿದೆ. ಇದರಲ್ಲಿ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ, ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನ ಮೇಲುಕೋಟೆ, ಮದ್ದೂರು ತಾಲೂ ಕಿನ ಕೊಕ್ಕರೆ ಬೆಳ್ಳೂರು ಹಾಗೂ ಇತರೆ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ರಸ್ತೆಯನ್ನೊಳಗೊ ಂಡಂತೆ ಮೂಲ ಸೌಲಭ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಆಶ್ವಾಸನೆ ಈಡೇರಿಸಲು ಬದ್ಧ: ಗಣರಾಜ್ಯೊ ೕತ್ಸವ ಶುಭ ದಿನದಲ್ಲಿ ನಾವೆಲ್ಲರೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕಿದೆ. ರಾಜ್ಯಸರ್ಕಾರ ಜನರ ಕಲ್ಯಾಣಕ್ಕಾಗಿ ನಿರಂತರ ವಾಗಿ ಶ್ರಮಿಸುತ್ತಿದೆ. ಸಕಲರನ್ನು ಒಳಗೊಂಡ ಸರ್ವಾಂಗೀಣ ಅಭಿವೃದ್ಧಿಯನ್ನು ಧ್ಯೇಯವಾಗಿ ಸಿಕೊಂಡು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.

Advertisement

ಅಧ್ಯಕ್ಷತೆಯನ್ನು ಶಾಸಕ ಎಂ.ಶ್ರೀನಿವಾಸ್‌ ವಹಿಸಿದ್ದರು. ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಡೀಸಿ ಎನ್‌.ಮಂಜುಶ್ರೀ, ಜಿಪಂ ಸಿಇಒ ಕೆ.ಯಾಲಕ್ಕೀಗೌಡ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಿ.ಶಿವಪ್ರಕಾಶ್‌, ಜಿಪಂ ಉಪಾಧ್ಯಕ್ಷೆ ಪಿ.ಕೆ.ಗಾಯತ್ರಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಲರಾಮೇಗೌಡ ಇತರರು ಭಾಗವಹಿಸಿದ್ದರು.

ಪಥ ಸಂಚಲನ ವಿಜೇತರು: ಗಣರಾಜ್ಯೋತ್ಸವ ಸಮಾರಂಭದಲ್ಲಿ ನಡೆದ ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಅಬಕಾರಿ ಹಾಗೂ ಗೃಹ ರಕ್ಷಕ ದಳ ಸೇರಿದಂತೆ 40ಕ್ಕೂ ಹೆಚ್ಚು ಶಾಲಾ-ಕಾಲೇಜು ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಸಚಿವ ಸಿ.ಎಸ್‌.ಪುಟ್ಟರಾಜು ಬಹುಮಾನ ವಿತರಿಸಿದರು.

ಯೂನಿಫಾರ್ಮ್ ವಿಭಾಗದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ-ಪ್ರಥಮ, ಅಬಕಾರಿ ದಳ- ದ್ವಿತೀಯ, ಗೃಹ ರಕ್ಷಕ ದಳ ತೃತೀಯ.

ಎನ್‌ಸಿಸಿ ವಿಭಾಗದಲ್ಲಿ ಪಿಇಎಸ್‌ ಕಾಲೇಜು ಬಾಲಕಿಯರ ತಂಡ-ಪ್ರಥಮ, ಪಿಇಎಸ್‌ ಕಾಲೇಜು ಬಾಲಕರ ತಂಡ ದ್ವಿತೀಯ, ಸರ್ಕಾರಿ ಬಾಲಕರ ಕಾಲೇಜು ತಂಡ- ತೃತೀಯ. ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡದಲ್ಲಿ ರೋಟರಿ ಶಾಲೆ ಪ್ರಥಮ ಬಹುಮಾನ ಗಳಿಸಿತು.ಪ್ರೌಢಶಾಲಾ ವಿಭಾಗದಲ್ಲಿ ಕಾರ್ಮಲ್‌ ಕಾನ್ವೆ ಂಟ್-ಪ್ರಥಮ, ಸಂತ ಜೋಸೆಫ್ ಶಾಲೆ ಹಾಗೂ ಎಂಇಎಸ್‌ ಪ್ರೌಢಶಾಲೆ-ದ್ವಿತೀಯ, ಸೆಂಟ್ ಜಾನ್‌ ಶಾಲೆ- ತೃತೀಯ, ಅಭಿನವಭಾರತಿ ಶಾ ಲೆ-ಸಮಾಧಾ ನಕರ ಬಹುಮಾನ ಗಳಿಸಿಕೊಂಡಿತು.

ಸಾಧಕರಿಗೆ ಸನ್ಮಾನ: ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು. ಅನಿಲ್‌ಕುಮಾರ್‌, ಡಾ.ರಾಜೇಂದ್ರಪ್ರಸಾದ್‌, ಹಂಸವೇಣಿ, ಆರ್‌.ಎನ್‌.ಹಂಸ, ಎಂ.ಮೇಘ ನಾ, ಸೃಷ್ಠಿ, ಕೆ.ಎನ್‌.ನಾಗೇಗೌಡ, ಬಿ.ಎ.ಪ್ರಶಾ ಂತ್‌, ಜಾನ್ವಿ, ರಾಜೇಗೌಡ ಅವರನ್ನು ಅಭಿನಂದಿ ಸಲಾಯಿತು. ಅಂತೆಯೇ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆಂದು ಆಯ್ಕೆ ಮಾಡಿ ಲೋಕಸಭಾ ಉಪಚುನಾವಣೆ ಘೋಷಣೆಯಾಗಿದ್ದ ಹಿನ್ನೆಲೆ ಗಣರಾಜ್ಯೋತ್ಸವದಂದು 16 ಜನಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರವಿ ಸಾವಂದಿಪುರ, ವಿಜಯಕುಮಾರಿ, ಶಿವ ಣ್ಣೇಗೌಡ, ನರಸಿಂಹಯ್ಯ, ದೇವರಾಜು, ಎಚ್.ಎಲ್‌.ರಮೇಶ್‌, ಚಂದ್ರಶೇಖರ್‌, ಲಂಕೇಶ್‌, ಮಾನಸ, ಬೋರೇಗೌಡ, ಕೆ.ಶಿವು, ಸುರೇಶ್‌, ದಕ್ಷಿಣಮೂರ್ತಿ, ಬಿ.ಪಿ.ಪ್ರಕಾಶ್‌, ಗಿರೀಶ್‌, ಎ.ಪಿ.ರಮೇಶ್‌ರನ್ನು ಸನ್ಮಾನಿಸಲಾಯಿತು.

ಸರ್ವೋತ್ತಮ ಸೇವಾ ಪ್ರಶಸ್ತಿ: 2018-19ನೇ ಸಾಲಿನಲ್ಲಿ ಗ್ರೂಪ್‌ ಎ ವೃಂದದಿಂದ ಜಿಲ್ಲಾ ಆಯುಷ್‌ ವೈದ್ಯಾಧಿಕಾರಿ ಡಾ.ಪುಷ್ಪಾ, ಜಂಟಿ ಕೃಷಿ ನಿರ್ದೇಶಕಿ ಎಂ.ಎನ್‌.ರಾಜಸುಲೋಚನಾ, ಬಿ ವೃಂದದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾರಾಯಣ್‌, ಸಿ ವೃಂದದಿಂದ ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕ ಎಂ.ಮಹಾಂತಪ್ಪ, ಜಿಪಂ ಅಧೀಕ್ಷಕ ವೇದಕುಮಾರ್‌ಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೆ.ಆರ್‌.ಪೇಟೆ ತಾಲೂಕು ಅಕ್ಕಿಹೆಬ್ಟಾಳು ಸರ್ಕಾರಿ ಪ.ಪೂ ಕಾಲೇಜು, ಮಳವಳ್ಳಿ ತಾಲೂಕು ಯತ್ತಂಬಾಡಿ ಸರ್ಕಾರಿ ಪ್ರೌಢಶಾಲೆ, ಶ್ರೀರಂಗಪಟ್ಟಣ ತಾಲೂಕು ಅರೆಕೆರೆ ಸರ್ಕಾರಿ ಪ.ಪೂ ಕಾಲೇಜು(ಪ್ರೌಢಶಾಲಾ ವಿಭಾಗ), ಮಂಡ್ಯ ತಾಲೂಕು ಬಸರಾಳು ಸರ್ಕಾರಿ ಪ.ಪೂ ಕಾಲೇಜು(ಪ್ರೌಢಶಾಲಾ ವಿಭಾಗ), ಮದ್ದೂರು ತಾಲೂಕು ಅಣ್ಣೂರು ಸರ್ಕಾರಿ ಪ.ಪೂ ಕಾಲೇಜು(ಪ್ರೌಢಶಾಲಾ ವಿಭಾಗ), ಪಾಂಡವಪುರ ತಾಲೂಕು ಚಿಟ್ಟನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ನಾಗಮಂಗಲ ತಾಲೂಕು ಪಿ.ನೇರಲೆಕೆರೆಯ ಸರ್ಕಾರಿ ಪ್ರೌಢಶಾಲೆಗೆ ಪ್ರೋತ್ಸಾಹವಾಗಿ ತಲಾ ಒಂದು ಲಕ್ಷ ಅನುದಾನ ನೀಡಲಾಗುತ್ತದೆ ಎಂದು ಘೋಷಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next