Advertisement
ಬಾಲಿವುಡ್‌ನ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿರುವ ನವಾಜುದ್ದೀನ್ ಸಿದ್ದಿಕಿ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವುದು ಬಿಟೌನ್ ವಲಯದಲ್ಲಿ ಟ್ರೆಂಡ್ ಆಗಿದೆ. ಅದಕ್ಕೆ ಕಾರಣ ಅವರ ಮುಂಬರುವ ಸಿನಿಮಾ ʼಟಿಕು ವೆಡ್ಸ್ ಶೇರುʼ ಚಿತ್ರದ ಟ್ರೇಲರ್.
Related Articles
Advertisement
ರೆಡ್ಡಿಟ್ ನಲ್ಲಿ ಕೆಲ ಬಳಕೆದಾರರು ಟ್ರೋಲ್ ಮಾಡಿದ್ದಾರೆ. “ಇದು ಅಸಹ್ಯ. ನವಾಜುದ್ದೀನ್ ಸಿದ್ದಿಕಿ ಅವರ ಸಿನಿಮಾಗಳ ಆಯ್ಕೆಯಲ್ಲಿ ಏನಿದೆ?” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ನನಗೆ ಈಗಲೂ ನೆನಪಿದೆ ನವಾಜುದ್ದೀನ್ ಸಿದ್ದಿಕಿ ಅವರಿಗೆ ರೊಮ್ಯಾಂಟಿಕ್ ಮೂವಿಗಳನ್ನು ಮಾಡುವುದು ಇಷ್ಟವೆಂದು ಒಮ್ಮೆ ಹೇಳಿದ್ದರು” ಎಂದು ಕಮೆಂಟ್ ಮಾಡಿದ್ದಾರೆ. “ಇನ್ಮುಂದೆ ಸಿದ್ದಿಕಿ ಅವರನ್ನು ಸಹಿಸಲು ಆಗುವುದಿಲ್ಲ” ಎಂದು ಮತ್ತೊಬ್ಬರು ಹೇಳಿದ್ದಾರೆ.
ಕಂಗನಾ ರಣಾವತ್ ನಿರ್ಮಾಣ ಮಾಡಿರುವ ʼʼಟಿಕು ವೆಡ್ಸ್ ಶೇರುʼʼ ಸಿನಿಮಾ ಇದೇ ಜೂ.23 ರಂದು ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗಲಿದೆ.