Advertisement

Mangaluru; ರಾಜ್ಯದಲ್ಲಿ 49 ಸಾವಿರ ಪೋಕ್ಸೋ ಪ್ರಕರಣ

01:23 AM Jan 17, 2024 | Team Udayavani |

ಮಂಗಳೂರು: ಕಳೆದ ಒಂದೆರಡು ವರ್ಷಗಳಲ್ಲಿ ರಾಜ್ಯದಲ್ಲಿ 49 ಸಾವಿರ ಪೋಕ್ಸೋ ಪ್ರಕರಣಗಳು ಹಾಗೂ 240 ಅಪ್ರಾಪ್ತ ವಯಸ್ಕರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಬಾಲ್ಯ ವಿವಾಹ ನಿಷೇಧ, ಕಡ್ಡಾಯ ಶಿಕ್ಷಣ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಗಳು ಜಾರಿಯಲ್ಲಿವೆ. ಆದರೂ ಈ ಬಗ್ಗೆ ಸಮರ್ಪಕ ಮಾಹಿತಿಯ ಕೊರತೆ ಎದ್ದುಕಾಣುತ್ತಿದೆ. ಬುದ್ಧಿವಂತರ ಜಿಲ್ಲೆ ದ.ಕ.ದಲ್ಲೇ ಪೋಕೊÕà ಪ್ರಕರಣಗಳು ನಡೆದಿರುವುದು ಖೇದಕರ ಎಂದರು.

ಬಾಲ್ಯ ವಿವಾಹದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಬೇಕು. ಇವುಗಳಿಂದ ಮುಂದೆ ಎದುರಾಗುವ ಜಂಜಾಟಗಳನ್ನು ಪೋಷಕರಿಗೆ ಹಾಗೂ ಮಕ್ಕಳಿಗೆ ವಿವರಿಸಬೇಕು. ಬಾಲ್ಯ ವಿವಾಹವಾದ ಬಳಿಕ ಪ್ರಕರಣ ದಾಖಲಾದಲ್ಲಿ ಯುವಕನನ್ನು ಬಂಧಿಸಲಾಗುತ್ತದೆ. ಇದರಿಂದಾಗಿ ಬಾಲಕಿಗೆ ಒತ್ತಡ ಹೆಚ್ಚಾಗುತ್ತದೆ. ಕುಟುಂಬಸ್ಥರ ಶೋಷಣೆಯೂ ಆರಂಭಗೊಳ್ಳುತ್ತದೆ. ಇದು ಹೆಣ್ಣು ಮಗುವಿನ ಸಾವಿನ ಹಾದಿ ಹಿಡಿಯಲು ಪ್ರೇರೇಪಿಸುತ್ತದೆ. ಈ ಮೂಲಕ ಮಕ್ಕಳ ಜೀವನಕ್ಕೆ ಪೋಷಕರೇ ಕೊಳ್ಳಿ ಇಟ್ಟಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹಕ್ಕೆ ಯಾವುದೇ ಪೋಷಕರು ಆಸ್ಪದ ನೀಡಬಾರದು ಎಂದು ಹೇಳಿದರು.

ಆತ್ಮಹತ್ಯೆ ನೈಸರ್ಗಿಕ ಸಾವಲ್ಲ!
ಹಾಸ್ಟೆಲ್‌, ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ಸಣ್ಣಪುಟ್ಟ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್‌ ಬಳಿಕ ಇಂತಹ ಪ್ರಕರಣಗಳು ಹೆಚ್ಚಾಗಿದ್ದು, ಇವುಗಳು ನೈಸರ್ಗಿಕ ಸಾವೆಂದು ಹೇಳಲಾ ಗುತ್ತವೆ. ಆದರೆ ಅವುಗಳು ನೈಸರ್ಗಿಕ ಸಾವಲ್ಲ. ಬದಲಾಗಿ ಸಂಸ್ಥೆಯವರ ಒತ್ತಡದಿಂದ ನಡೆಯುವ ಪ್ರಕರಣಗಳಾಗಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ನಿರ್ಲಕ್ಷé ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಮಕ್ಕಳು ಶಾಲೆಯಿಂದ ದೂರ
ಉಳಿಯದಂತೆ ಎಚ್ಚರ ವಹಿಸಿ
ಅತಿಯಾದ ಮೊಬೈಲ್‌ ಬಳಕೆಯಿಂದ ಮಕ್ಕಳ ಮನಸ್ಸು, ಓದಿನ ಮೇಲೆ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳಿಗೆ ದಂಡ ಪ್ರಯೋಗ ಮಾಡಲು ಅವಕಾಶವಿಲ್ಲ. ಇದರಿಂದಾಗಿ ಭಯಗೊಂಡು ಶಾಲೆಯಿಂದ ವಿದ್ಯಾರ್ಥಿಗಳು ದೂರ ಉಳಿಯುತ್ತಾರೆ. ಅದರ ಬದಲು ಪ್ರೀತಿಯ ಮಾತುಗಳಿಂದ ತಿದ್ದುವ ಕೆಲಸವನ್ನು ಪೋಷಕರು, ಶಿಕ್ಷಕರು ಮಾಡಬೇಕು. ಶಾಲೆಗೆ ಸೇರಲು ಆಸಕ್ತಿ ಮೂಡಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಶಾಲೆಯಿಂದ ದೂರ ಉಳಿದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಮರಳಿ ಸೇರಿಸುವ ಕೆಲಸ ನಡೆಯಬೇಕು. ಕಡ್ಡಾಯ ಶಿಕ್ಷಣದಿಂದ ಮಕ್ಕಳನ್ನು ವಂಚಿತರನ್ನಾಗಿಸುವ ಕೆಲಸವನ್ನು ಪೋಷಕರು, ಶಿಕ್ಷಕರು ಅಥವಾ ಕುಟುಂಬಸ್ಥರು ಮಾಡುವಂತಿಲ್ಲ ಎಂದರು.
ಭಿಕ್ಷಾಟನೆ, ಬಾಲ ಕಾರ್ಮಿಕರಾಗಿ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಅವುಗಳ ವಿರುದ್ಧವೂ ಪೋಷಕರು ಎಚ್ಚರ ವಹಿಸಬೇಕು. ಮಕ್ಕಳ ರಕ್ಷಣೆಗೆ ಸಂಬಂಧಿಸಿ ಇರುವ ಕಾಯ್ದೆಗಳ ಬಗ್ಗೆ ಸಾರ್ವಜನಿಕ ಜಾಗೃತಿ ಅಗತ್ಯವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ಮುಂದಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next