ಮಸ್ಕಿ: 5ಎ ಕಾಲುವೆಗಾಗಿ ತೀವ್ರವಾದ ಹೋರಾಟ ಮಠಾಧೀಶರ ಮಧ್ಯಸ್ಥಿಕೆಯಲ್ಲೂ ಇತ್ಯರ್ಥವಾಗಿಲ್ಲ. ಆದರೆ ಇದರ ನಡುವೆಯೇ 5ಎ ಕಾಲುವೆ ಅನುಷ್ಠಾನ ಕಾರ್ಯ ಸಾಧುವಲ್ಲ ಎನ್ನುವ ಸ್ಪಷ್ಟ ನಿರ್ಧಾರ ಸರ್ಕಾರ ಹೊರ ಹಾಕಿದೆ!.
ನಾರಾಯಣಪುರ ಬಲದಂಡೆ ಕಾಲುವೆ 5ಎ ಶಾಖಾ ಕಾಲುವೆ ಅನುಷ್ಠಾನಕ್ಕೆ ಇರುವ ಸಾಧ್ಯತೆ,ತಾಂತ್ರಿಕ ತೊಡಕು, ಆರ್ಥಿಕ ಅನುದಾನದವ್ಯಯ ಹಾಗೂ ಯೋಜನೆ ಲಾಭದ ಅಂಶಗಳನ್ನು ಉಲ್ಲೇಖೀಸಿ ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ(ಕೆಬಿಜಿಎನ್‌ಎಲ್) ಅಧಿಕಾರಿಗಳು ನೀಡಿದ ವಿಸ್ತೃತವರದಿ ಆಧರಿಸಿ ಸರ್ಕಾರ ಇಂತಹ ಸ್ಪಷ್ಟ ತೀರ್ಮಾನಹೊರ ಹಾಕಿದೆ. 5ಎ ಶಾಖೆ ಕಾಲುವೆ ಬೇಡಿಕೆ ಕೈಬಿಟ್ಟು ನಂದವಾಡಗಿ ಏತ ನೀರಾವರಿ-2ನೇ ಹಂತದಯೋಜನೆಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲುಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಜಲಸಂಪನ್ಮೂಲಸಚಿವ ರಮೇಶ ಜಾರಕಿಹೊಳಿ ಕೆಬಿಜಿಎನ್‌ಎಲ್‌ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದ ಆದೇಶ ಪ್ರತಿ “ಉದಯವಾಣಿ’ಗೆ ಲಭ್ಯವಾಗಿದ್ದು, ಈ ಪತ್ರದಲ್ಲಿ 5ಎ ಕಾಲುವೆಹೇಗೆ ಕಾರ್ಯ ಸಾಧುವಲ್ಲ; ನಂದವಾಡಗಿಏತ ನೀರಾವರಿ-2ನೇ ಹಂತವೇ ಸೂಕ್ತ ಹೇಗೆ?ಎನ್ನುವ ಅಂಶ ಉಲ್ಲೇಖೀಸಿದ್ದು, ಅದರ ವಿವರ ಇಲ್ಲಿದೆ.
14.50 ಕಿ.ಮೀ. ಸುರಂಗ ಕಾಲುವೆ: ನಾರಾಯಣಪುರ ಬಲದಂಡೆ ಕಾಲುವೆ 17.300 ಕಿ.ಮೀ. ರಲ್ಲಿ ಬಲ ಬದಿಗೆ ಹೆಡ್ ರೆಗ್ಯೂಲೇಟರ್ ನಿರ್ಮಿಸಿ ಅಲ್ಲಿಂದ ವಿತರಣಾ ಕಾಲುವೆ 5ಎ ಆರಂಭಿಸಬೇಕಿದೆ. ಒಟ್ಟು 65 ಕಿ.ಮೀ. ಉದ್ದದ ಕಾಲುವೆಯಲ್ಲಿ 14.50 ಕಿ.ಮೀ. ಸುರಂಗ ಕಾಲುವೆನಿರ್ಮಾಣ ಮಾಡಬೇಕಿದೆ. ಉಳಿದ50.50 ಕಿ.ಮೀ. ಆಳವಾದ ತೆರದಕಾಲುವೆ ನಿರ್ಮಿಸಬೇಕು. ಇನ್ನು 5ಎ ಶಾಖಾಕಾಲುವೆಯ 60ನೇ ಕಿ.ಮೀ. ನಲ್ಲಿ ಬರುವ ಕ್ಯಾದಿಗೇರಕೆರೆ ವಿಸ್ತರಿಸಿ ಸಂಗ್ರಹಣಾ ಜಲಾಶಯ ನಿರ್ಮಿಸಿ, ಇಲ್ಲಿಂದಲೇ ಭೂ ಇಳಿತಮತ್ತು ಏರಿಗನುಗುಣವಾಗಿ ಪೈಪ್ ಲೈನ್ ಅಳವಡಿಸಿಕೊಂಡು 31,346 ಹೆಕ್ಟೇರ್‌ಗೆ ನೀರು ಕಲ್ಪಿಸುವುದು ಯೋಜನೆ ನೀಲನಕಾಶೆ. ಇದಕ್ಕಾಗಿಖರ್ಚಾಗುವುದು ಬರೋಬ್ಬರಿ 4850 ಕೋಟಿ ರೂ.ಅಚ್ಚುಕಟ್ಟು ವಿಭಜನೆ: ಉದ್ದೇಶಿತ ಈ ಯೋಜನೆಯಲ್ಲಿಅಚ್ಚುಕಟ್ಟು ಪ್ರದೇಶಕ್ಕೆ ಒಳಪಡುತ್ತಿದ್ದ 31,346ಹೆಕ್ಟೇರ್ ಪೈಕಿ ಈಗಾಗಲೇ ನಂದವಾಡಗಿ ಏತ ನೀರಾವರಿ-2ನೇ ಹಂತ, ಮತ್ತು ನಾರಾಯಣಪುರ ಬಲದಂಡೆ 9ಎ ವಿತರಣಾ ಕಾಲುವೆ ಯೋಜನೆಯಲ್ಲಿ26,146 ಹೆಕ್ಟೇರ್ ಪ್ರದೇಶ ಅಲ್ಲಿನ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿಸಲಾಗಿದೆ.
ಹೀಗಾಗಿ ಇದರಲ್ಲಿ ಬಾಕಿ ಉಳಿಯುವುದು ಕೇವಲ5200 ಹೆಕ್ಟೇರ್ ಪ್ರದೇಶ ಮಾತ್ರ. ಇಷ್ಟೇ ಪ್ರದೇಶಕ್ಕೆ 4850 ಕೋಟಿ ಖರ್ಚು ಮಾಡಬೇಕೆ? ಎನ್ನುವ ಅಂಶ ಒಂದಾದರೆ, 5ಎ ಕಾಲುವೆಯ 17.30 ಕಿ.ಮೀ.ನಲ್ಲಿ ಆರಂಭವಾಗಿ ರಾಂಪೂರ ಏತ ನೀರಾವರಿ, 9ಎ ಕಾಲುವೆ ಅಚ್ಚುಕಟ್ಟು ಪ್ರದೇಶಲ್ಲಿ ಹಾದುಹೋಗುವುದರಿಂದ 400 ಎಕರೆ ಫಲವತ್ತಾದ ಭೂಮಿ ಹಾಳಾಗಲಿದೆ. ಇದರ ಭೂ ಸ್ವಾಧೀನದ ಜತೆಗೆ ಹಟ್ಟಿ ಚಿನ್ನದ ಗಣಿಯ ಭೂ ಪ್ರದೇಶವನ್ನೂ ಭೂ ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಇದು ಕಷ್ಟಸಾಧ್ಯವಾಗಿದ್ದು,9ಎ, ರಾಂಪೂರ ಏತ ನೀರಾವರಿ ವಿತರಣಾ ಕಾಲುವೆಜಾಲಗಳನ್ನು ಬೇಧಿಸುವುದರಿಂದ ಅಲ್ಲಿನ ಕಾಲುವೆ, ಕಟ್ಟಡ ನೆಲಸಮ ಮಾಡಿ ಮರು ನಿರ್ಮಾಣದ ಅಗತ್ಯವಿದೆ.
ಈ ಅಂಶಗಳನ್ನು ಪರಿಗಣಿಸಿ ಈ ಯೋಜನೆ ಕಾರ್ಯ ಸಾಧುವಲ್ಲ ಎನ್ನುವ ಸ್ಪಷ್ಟ ನಿರ್ಧಾರ ಸರ್ಕಾರ ಹೊರ ಹಾಕಿದೆ.
ಇದೊಂದೇ ಮಾರ್ಗ : 5ಎ ಅನುಷ್ಠಾನದ ಎಲ್ಲ ತೊಡಕು ವಿವರಿಸಿರುವ ಕೆಬಿಜಿಎನ್‌ಎಲ್ ಅಧಿಕಾರಿಗಳು ಈ ಯೋಜನೆ ಜಾರಿಮಾಡಿದ್ದೇ ಆದರೆ 3.75 ಟಿಎಂಸಿಯಷ್ಟು ಹೆಚ್ಚುವರಿನೀರಿನ ಅನುಮತಿ ಕೂಡ ಪಡೆಯಬೇಕು. ಇಷ್ಟೆಲ್ಲದರಬಳಿಕವೂ ಈ ಯೋಜನೆ ಲಾಭ ನಿರ್ಮಾಣ ವೆಚ್ಚಕ್ಕೆಹೋಲಿಸಿದರೆ ಶೇ.0.04ರಷ್ಟಿದೆ. ಹೀಗಾಗಿ ಇದನ್ನು ಕೈಬಿಟ್ಟು ನಂದವಾಡಗಿ ಏತ ನೀರಾವರಿ-2ನೇಹಂತದಲ್ಲಿ ಹಂಚಿಕೆಯಾದ 2.25 ಟಿಎಂಸಿ ನೀರಿನಲ್ಲಿಹನಿ ನೀರಾವರಿ ಬದಲು ಹರಿ ನೀರಾವರಿಗೆಅವಕಾಶವಿದೆ. ರೈತರ ಹೋರಾಟ ತಣಿಸಲು ಇದೊಂದೇ ಮಾರ್ಗ ಎಂದು ಅರಿತ ಸರ್ಕಾರ ಈಪದ್ಧತಿ ಅನುಷ್ಠಾನಕ್ಕೆ ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದೆ.
5ಎ ಕಾಲುವೆ ಅನುಷ್ಠಾನ ತಾಂತ್ರಿಕ ಸಮಸ್ಯೆ ಇದೆ. ಇದನ್ನು ಸರ್ಕಾರ ಒಪ್ಪುತ್ತಿಲ್ಲ.ನಂದವಾಡಗಿ ಏತ ನೀರಾವರಿ ಮೂಲಕವೇ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ನಿರ್ದೇಶನ ನೀಡಿದೆ.-
ಎಸ್.ರಂಗರಾಂ, ಮುಖ್ಯ ಅಭಿಯಂತರ, ಕೆಬಿಜಿಎನ್‌ಎಲ್, ನಂದವಾಡಗಿ
ನಂದವಾಡಗಿ ಏತ ನೀರಾವರಿ ಮೂಲಕನಮಗೆ ನೀರು ಉಪಯೋಗವಾಗುವುದಿಲ್ಲ.5ಎ ಕಾಲುವೆಯಿಂದಲೇ ನೀರು ಬೇಕುಅಲ್ಲಿಯವರೆಗೂ ಹೋರಾಟ ನಿಲ್ಲದು.
ಬಸವರಾಜಪ್ಪಗೌಡ, -ಹರ್ವಾಪೂರ, ರೈತ ಮುಖಂಡ
-ಮಲ್ಲಿಕಾರ್ಜುನ ಚಿಲ್ಕರಾಗಿ