Advertisement

ಕರ್ನಾಟಕಕ್ಕೆ ಕೋವಿಡಾಘಾತ : ಇಂದು ಬರೋಬ್ಬರಿ 48296 ಹೊಸ ಪ್ರಕರಣ

07:15 PM Apr 30, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಗಾಲೋಟದಲ್ಲಿ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ದಾಖಲಾಗಿವೆ.

Advertisement

ಇಂದು ( ಶುಕ್ರವಾರ) ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ( ದಿನಾಂಕ: 29.04.2021, 00:00 ರಿಂದ 23:59) ಬರೋಬ್ಬರಿ 48296 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳ ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 382690ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ ಕೋವಿಡ್‍ಗೆ ಬಲಿಯಾದವರ ಸಂಖ್ಯೆ 217 ಎಂದು ವರದಿಗಳು ತಿಳಿಸಿವೆ. 14884 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಜಿಲ್ಲಾವಾರು :

ಬಾಗಲಕೋಟೆ-234, ಬಳ್ಳಾರಿ -1282, ಬೆಳಗಾವಿ-514, ಬೆಂಗಳೂರು ಗ್ರಾಮಾಂತರ-818, ಬೆಂಗಳೂರು ನಗರ-26756, ಬೀದರ್-447, ಚಾಮರಾಜನಗರ-474, ಚಿಕ್ಕಬಳ್ಲಾಪುರ-579 ಚಿಕ್ಕಮಗಳೂರು-542, ಚಿತ್ರದುರ್ಗ-144, ದಕ್ಷಿಣ ಕನ್ನಡ-1205, ದಾವಣಗೆರೆ-438, ಧಾರವಾಡ-703,ಗದಗ-122, ಹಾಸನ-709, ಹಾವೇರಿ-90, ಕಲಬುರಗಿ-1256, ಕೊಡಗು-609, ಕೋಲಾರ-845, ಕೊಪ್ಪಳ-256, ಮಂಡ್ಯ-1348, ಮೈಸೂರು-3500, ರಾಯಚೂರು-733, ರಾಮನಗರ-286,ಶಿವಮೊಗ್ಗ-673, ತುಮಕೂರು-1801, ಉಡುಪಿ-660, ಉತ್ತರ ಕನ್ನಡ-426, ವಿಜಯಪುರ-521, ಯಾದಗಿರಿ-325.

Advertisement

Udayavani is now on Telegram. Click here to join our channel and stay updated with the latest news.

Next