Advertisement

48 ಮಂದಿ ವರದಿ ನೆಗೆಟಿವ್‌: ಡಿಸಿ

04:59 PM Apr 05, 2020 | Suhan S |

ವಿಜಯಪುರ: ಜಿಲ್ಲೆಯಿಂದ ಈ ವರೆಗೆ  ಕೋವಿಡ್ 19 ಸೋಂಕು ಶಂಕಿತ 50 ಜನರ ಗಂಟಲು ದ್ರವ ಮಾದರಿಗಳ ವೈದ್ಯಕೀಯ ಪರೀಕ್ಷೆ ನಡೆಸಿದ್ದು, 48 ಜನರ ವರದಿ ನೆಗೆಟಿವ್‌ ಬಂದಿದೆ. ಇಬ್ಬರ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಹೇಳಿದರು.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರದ ವರೆಗೆ 370 ಜನರು ವಿದೇಶದಿಂದ ಬಂದಿದ್ದು, ಹೋಂ ಕ್ವಾರಂಟೈನ್‌ ನಿಗಾ ಇರಿಸಿದ್ದ 114 ಜನ 28 ದಿನ ಮುಗಿಸಿದ್ದಾರೆ. 242 ಜನರು 28 ದಿನಗಳ ರಿಪೋರ್ಟಿಂಗ್‌ ಅವಧಿಯಲ್ಲಿದ್ದಾರೆ. 14 ಜನ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next