Advertisement

48 ದಿವಸಗಳ ಉದಯಾಸ್ತಮಾನ ಮೌನ ನಾಮಜಪ ವ್ರತ

01:00 AM Mar 07, 2019 | Team Udayavani |

ಮಂಜೇಶ್ವರ: ಪಾವೂರು ಕೊಪ್ಪಳದ ಶಿವಪುರ ಶ್ರೀ ಮಹಾ ಮೃತ್ಯುಂ ಜಯೇಶ್ವರ ದೇವಸ್ಥಾನದಲ್ಲಿ ಮಾ. 4 ಸೊಮವಾರದಿಂದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರಿಂದ 48 ದಿವಸಗಳ ಉದಯಾಸ್ತಮಾನ ಮೌನ ನಾಮಜಪ ವ್ರತಾನುಷ್ಠಾನರಾಗಿದ್ದು, ಮಂಗಳವಾರ ಬೆಳಗ್ಗೆ ಗಣಪತಿ ಹವನ ಅನಂತರ ಪುಂಡರೀಕಾಕ್ಷ ಯೋಗಾಚಾರ್ಯರವರಿಂದ ಮೌನ ನಾಮ ಜಪ ಮುಂದುವರಿಯಿತು. 

Advertisement

ಈ ಸಂದರ್ಭದಲ್ಲಿ ಸಾವಿರ ಸಂಖ್ಯೆಯಲ್ಲಿ ಭಕ್ತರು ನಾಮ ಜಪ ಮಾಡಿದರು. ಸಂಜೆ ಶ್ರೀ ಚಾಮುಂಡೇಶ್ವರಿ ಮಹಿಳಾ ಭಜನ ಮಂಡಳಿಯವರು ಭಜನ ಸಂಕೀರ್ತನೆ ನಡೆಸಿದರು. ಸಂಜೆ ಪುಂಡರೀಕಾಕ್ಷರಿಂದ ಸತ್ಸಂಗ ನಡೆಯಿತು. ಈ ಸಂದರ್ಭದಲ್ಲಿ ಅಥಿತಿಯಾಗಿ ವರ್ಕಾಡಿ ಕಾವೀ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅಧ್ಯಕ್ಷ ಪ್ರಭಾಕರ ರೈ ವರ್ಕಾಡಿ ಮಾತನಾಡಿದರು. ಮುಖಂಡರಾದ ಗೋಪಾಲ ಶೆಟ್ಟಿ ಅರಿಬೈಲು, ಸಂಜೀವ ಶೆಟ್ಟಿ ಮಾಡ, ಶ್ರೀಧರ ಶೆಟ್ಟಿ ಪಾವೂರು ಉಪಸ್ಥಿತರಿದ್ದರು.

ಸೋಮವಾರ ಬೆಳಗ್ಗೆ ಗಣಪತಿ ಹವನ, ಪುಂಡರೀಕಾಕ್ಷ ಅವರಿಂದ ಮೌನವ್ರತ, ಭಕ್ತರಿಂದ 2 ಲಕ್ಷ ನಾಮಜಪ, ಸಂಜೆ ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ಸುಂಕದಕಟ್ಟೆ ವರ್ಕಾಡಿ ತಂಡ ದಿಂದ ಭಜನಾ ಸಂಕೀರ್ತನೆ, ಸತ್ಸಂಗ ನೆರವೇರಿತು. ಈ ಸಂದರ್ಭ ಡಾ| ಕೆ.ಎಸ್‌.ಶಂಕರ ಹೊಳ್ಳ ಕೋಡಿ ವರ್ಕಾಡಿ, ಸುಬ್ಬ ಗುರುಸ್ವಾಮಿ, ಗೋಪಾಲ ಶೆಟ್ಟಿ ಅರಿಬೈಲು, ಲಕ್ಷ್ಮೀನಾರಾಯಣ ಭಟ್‌ ಕೋಳ್ಯೂರು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next