Advertisement

ಹಿಮಾಚಲ ಪ್ರದೇಶ ಚುನಾವಣೆ: 479 ನಾಮಪತ್ರ ಸಲ್ಲಿಕೆ

12:19 PM Oct 24, 2017 | Team Udayavani |

ಶಿಮ್ಲಾ : 68 ಸದನ ಬಲದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ನ.9ರಂದು ನಡೆಯಲಿದ್ದು 479 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ನಾಮಪತ್ರಗಳ ಪರಿಶೀಲನೆ ಇಂದು ನಡೆಯಲಿದೆ.

Advertisement

ನಾಮಪತ್ರ ಸಲ್ಲಿಕೆಗೆ ನಿನ್ನೆ ಸೋಮವಾರ ಕೊನೇ ದಿನವಾಗಿತ್ತು. ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಪ್ರೇಮ್‌ ಕುಮಾರ್‌ ಧುಮಾಲ್‌ ಸಹಿತ 275 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಅಧಿಕಾರಿಗಳು ತಿಳಿಸಿರುವ ಪ್ರಕಾರ ಕಾಂಗ್ರಾದ 15 ಸೀಟುಗಳಿಗೆ 119 ನಾಮಪತ್ರಗಳು, ಶಿಮ್ಲಾದ ಎಂಟು ಸ್ಥಾನಗಳಿಗೆ 64, ಹಾಮೀರ್‌ಪುರದ ಐದು ಸ್ಥಾನಗಳಿಗೆ 41, ಚಂಬಾದ ಐದು ಸ್ಥಾನಗಳಿಗೆ 28 ಮತ್ತು ಸೋಲಾನ್‌ ನ 5 ಸ್ಥಾನಗಳಿಗೆ 29 ನಾಮಪತ್ರಗಳು ಸಲ್ಲಿಕೆಯಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next