ವಿಶೇಷವೆಂದರೆ, ಆಸೀಸ್ ತಂಡದಲ್ಲಿ ವನಿತಾ ಕ್ರೀಡಾಳುಗಳೇ ಜಾಸ್ತಿ ಇರುವುದು.ಇವರ ಸಂಖ್ಯೆ 254. ಪುರುಷ ಕ್ರೀಡಾಪಟುಗಳ ಸಂಖ್ಯೆ 218. ವಿಶ್ವದ ನಂ. 1 ಟೆನಿಸ್ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಈ ತಂಡದ ಪ್ರಮುಖ ಸದಸ್ಯೆ.
Advertisement
ಆಸ್ಟ್ರೇಲಿಯ ಒಟ್ಟು 33 ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದೆ. ಈ ಬಾರಿ ನೂತನವಾಗಿ ಸೇರ್ಪಡೆಗೊಳಿಸಲಾದ ಕರಾಟೆ, ಸ್ಕೇಟ್ ಬೋರ್ಡಿಂಗ್, ನ್ಪೋರ್ಟ್ ಕ್ಲೈಂಬಿಂಗ್ ಮತ್ತು ಸರ್ಫಿಂಗ್ ಸ್ಪರ್ಧೆಗಳಲ್ಲೂ ಸ್ಪರ್ಧಿಸಲಿದೆ. ಅತ್ಯಧಿಕ 63 ಕ್ರೀಡಾಪಟುಗಳು ಆ್ಯತ್ಲೆಟಿಕ್ಸ್‌ನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.
66 ವರ್ಷದ ಕುದುರೆ ಸವಾರೆ ಮೇರಿ ಹನ್ನಾ ಈ ತಂಡದ ಅತೀ ಹಿರಿಯ ಕ್ರೀಡಾಪಟು. ಅವರಿಗೆ ಇದು 6ನೇ ಒಲಿಂಪಿಕ್ಸ್ ಆಗಿದೆ. ಮತ್ತೋರ್ವ ಕುದುರೆ ಸವಾರ ಆ್ಯಂಡ್ರೂé ಹೋಯ್ ಕೂಡ ಈ ತಂಡದಲ್ಲಿದ್ದು, ಅವರಿಗೆ ಇದು 8ನೇ ಒಲಿಂಪಿಕ್ಸ್ ಪಂದ್ಯಾವಳಿ ಆಗಿರುವುದು ವಿಶೇಷ. ಒಲಿಂಪಿಕ್ಸ್‌ನಲ್ಲಿ 3 ಚಿನ್ನ, ಒಂದು ಬೆಳ್ಳಿ ಪದಕ ಗೆದ್ದಿರುವುದು ಹೋಯ್ ಹೆಗ್ಗಳಿಕೆ.