Advertisement

Kanhaiya Kumar ಕ್ಯಾಂಪೇನ್‌ಗೆ 47 ಲಕ್ಷ ರೂ. ದೇಣಿಗೆ ಸಂಗ್ರಹ!

09:45 PM May 21, 2024 | Team Udayavani |

ನವದೆಹಲಿ: ದೆಹಲಿ ಈಶಾನ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯ ಕುಮಾರ್‌ ಅವರಿಗೆ ಚುನಾವಣೆ ಪ್ರಚಾರಕ್ಕೆಂದು 47.04 ಲಕ್ಷ ರೂ.ಗಳು ಸಾರ್ವಜನಿಕ ದೇಣಿಗೆ ಮೂಲಕ ಸಂಗ್ರಹವಾಗಿದೆ.

Advertisement

ಕಾಂಗ್ರೆಸ್‌ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಆರ್ಥಿಕ ಸಂಪನ್ಮೂಲಗಳ ಕೊರತೆ ಎದುರಿಸುತ್ತಿದ್ದಾಗ, ಕನ್ಹಯ್ಯ ಸಾರ್ವಜನಿಕ ದೇಣಿಗೆ ಅಭಿಯಾನ ಆರಂಭಿಸಿದರು. ಜನರ ಸಮಸ್ಯೆಗೆ ಜನರ ಸಹಕಾರದಿಂದಲೇ ಹೋರಾಡುವ ಉದ್ದೇಶ ತಮ್ಮದು ಎಂದಿದ್ದರು.

ಅದರಂತೆ, ಈವರೆಗೆ 2,037 ಜನ 100ರಿಂದ 5 ಲಕ್ಷ ರೂ. ವರೆಗೆ ದೇಣಿಗೆ ನೀಡಿದ್ದಾರೆ. ಖ್ಯಾತ ಹಾಸ್ಯಗಾರ ಕುನಾಲ್‌ ಕಾಮ್ರಾ, ನಿರ್ದೇಶಕ ವಿಶಾಲ್‌ ಭಾರದ್ವಾಜ್‌, ಜೆಎನ್‌ಯು ಹಾಲಿ, ಮಾಜಿ ಪ್ರಾಧ್ಯಾಪಕರು ಹಾಗೂ ಸಾಮಾನ್ಯ ಜನರು ಸಹ ದೇಣಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ಮಾಧ್ಯಮ ವಕ್ತಾರ ಅಂಶುಲ್‌ ತ್ರಿವೇದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next