Advertisement
ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ಕ್ರಿಯಾಯೋಜನೆ ಕುರಿತಂತೆ ವಿಸ್ತೃತವಾಗಿ ಚರ್ಚಿಸಿದ ನಂತರ ಸರ್ವಾನುಮತದ ಅನುಮೋದನೆ ನೀಡಿತು.
Related Articles
Advertisement
ಪೂರ್ಣಗೊಂಡ ಬಹುಗ್ರಾಮ ಯೋಜನೆಗಳನ್ನು ನಿರ್ವಹಿಸಲಾಗುವುದು, ಪ್ರಗತಿಯಲ್ಲಿರುವ ಬಹುಗ್ರಾಮ ಯೋಜನೆಗಳನ್ನು ಕ್ರಿಯಾಯೋಜನೆಯಲ್ಲಿ ಅಳವಡಿಸಲಾಗಿದೆ. ಹಿಂದಿನ ಸಾಲಿನವರೆಗೆ ಅನುಮೋದನೆಯಾದ ಎಲ್ಲಾ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. 30 ಲಕ್ಷಗಳವರೆಗಿನ ಕಾಮಗಾರಿಗಳಿಗೆ ಪೂರ್ಣ ಅನುದಾನ, 30 ಲಕ್ಷದಿಂದ 100 ಲ್ಷದವರೆಗಿನ ಕಾಮಗಾರಿಗಳಿಗೆ ಅಂದಾಜಿನ ಶೇ.75 ರಷ್ಟು ಹಾಗೂ 100 ಲಕ್ಷ ಮೀರಿದ ಕಾಮಗಾರಿಗಳಿಗೆ ಅಂದಾಜಿನ ಶೇ.60ರಷ್ಟು ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಜಗಳೂರು ತಾಲೂಕಿನಲ್ಲಿ ತೀವ್ರ ಬರಗಾಲವಿದೆ. ಮುಂದುವರೆದ ಕಾಮಗಾರಿಗೆ ಹೆಚ್ಚು ಅನುದಾನ ವ್ಯಯಿಸುವುದಕ್ಕಿಂತ ಹೊಸ ಕಾಮಗಾರಿಗೆ ಹೆಚ್ಚು ಅನುದಾನ ಮೀಸಲಿಡಬೇಕು. ಬೋರ್ ಕೊರೆಸಿದ ಬಾಕಿ ಇರುವ ಪಾವತಿ ಶೀಘ್ರವಾಗಬೇಕು. 2014-15 ರಲ್ಲಿ ಆದ ಅವಧಿಯಲ್ಲಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಂಜಿನಿಯರ್‌ಗಳ ವಿರುದ್ಧ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಕಾರ್ಯಪಾಲಕ ಅಭಿಯಂತರರು, ಬಾಕಿ ಪಾವತಿ ಬಗ್ಗೆ ಪಿಡಿಒಗಳಿಂದ ಮಾಹಿತಿ ಕೇಳಲಾಗಿದೆ ಎಂದರು. ಅಧ್ಯಕ್ಷರು ಹಾಗೂ ಸಿಇಓ ಬಾಕಿ ಇರುವ ಬಗ್ಗೆ ಮಾಹಿತಿ ನೀಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಎಸ್.ಎ.ರವೀಂದ್ರನಾಥ ಮಾತನಾಡಿ, ಮುಂದುವರೆದ ಕಾಮಗಾರಿಗಳಡಿ ಕಾಮಗಾರಿ ಯಶಸ್ವಿಯಾಗದಿದ್ದರೂ ಮಾಡಿದ್ದ ಕೆಲಸಕ್ಕೆ ಹಣ ಪಾವತಿಸಲೇಬೇಕು. ಈ ಬಗ್ಗೆ ಆಗ್ಗಿಂದಾಗ್ಗೆ ಕ್ರಮ ವಹಿಸಬೇಕು. ಗುಡಾಳ್ ಹಾಗೂ ಸುತ್ತ ಮುತ್ತ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜಾದ ಹಣವನ್ನು ಸಿಆರ್‌ಎಫ್ ಮೂಲಕ ಪಾವತಿಸುವಂತೆ ತಿಳಿಸಿದರು.
ಸಿಇಓ ಮಾತನಾಡಿ, ಹರಿಹರದ ಬಹುಗ್ರಾಮ ಯೋಜನೆಗಳು ಯಶಸ್ವಿಯಾಗಿದ್ದು, ಚನ್ನಗಿರಿಯಲ್ಲಿ ನೀರು ಸರಬರಾಜಿನ ಕುರಿತಾದ ಬಾಕಿ ಇರುವ ಹಣವನ್ನು ಶೀಘ್ರವಾಗಿ ಪಾವತಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.