Advertisement

46 ಕ್ವಿಂಟಲ್‌ ಅಕ್ರಮ ಅಕ್ಕಿ ವಶ

12:31 PM Aug 02, 2018 | Team Udayavani |

ಹೊನ್ನಾಳಿ: ತಾಲೂಕಿನ ದಿಡಗೂರು ಮುಖ್ಯರಸ್ತೆಯ ಗೋದಾಮು ಒಂದರಲ್ಲಿ ಅಕ್ರಮವಾಗಿ 92 ಚೀಲಗಳಲ್ಲಿ ಸಂಗ್ರಹಿಸಿದ್ದ 46 ಕ್ವಿಂಟಲ್‌ ಅಕ್ಕಿಯನ್ನು ತಹಶೀಲ್ದಾರ್‌ ಡಾ| ನಾಗವೇಣಿ, ಪಿಎಸ್‌ಐ ನಾಗಯ್ಯ ಕಾಡದೇವರಮಠ ಹಾಗೂ ಆಹಾರ ನಿರೀಕ್ಷಕ ಸಂಜಯ್‌ ಬಾಗವಾಡಿ ನೇತೃತ್ವದಲ್ಲಿ ಬುಧವಾರ ದಿಢೀರ್‌ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್‌ ನಾಗವೇಣಿ, ಗೋದಾಮು ಒಂದರಲ್ಲಿ ಅಕ್ರಮವಾಗಿ ಅಕ್ಕಿಯನ್ನು ಸಂಗ್ರಹಿಸಿದ್ದಾರೆ ಎಂಬ ಖಚಿತ ಮಾಹಿತಿ ಹಾಗೂ ಜಿಲ್ಲಾ ಧಿಕಾರಿಗಳು ಸಹ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು. 

ಗೋದಾಮು ಮಾಲೀಕ ಜಗದೀಶ್‌ ಅವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ವಶಪಡಿಸಿಕೊಂಡ ಅಕ್ಕಿಯನ್ನು ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ನಿಗಮಕ್ಕೆ ಸೇರಿದ ಗೋದಾಮಿನಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ಕಾರ್ಯಾಚಾರಣೆಯಲ್ಲಿ ಅಧಿಕಾರಿಗಳಾದ ಶಿವಾಜಿ, ಮಂಜುನಾಥ್‌ ಇಂಗಳಗುಂದಿ, ಜಯರಾಂ ನಾಯ್ಕ, ಭರ್ಮಪ್ಪ ಹಾಗೂ ಇತರರು ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next