Advertisement

ಅಂಡಮಾನ್‌ ನಿಕೋಬಾರ್‌ನಲ್ಲಿ 4.5 ಅಂಕಗಳ ತೀವ್ರತೆಯ ಭೂಕಂಪ

11:17 AM Sep 16, 2017 | Team Udayavani |

ಹೊಸದಿಲ್ಲಿ : ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಇಂದು ಶನಿವಾರ 4.5 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿರುವುದು ವರದಿಯಾಗಿದೆ.

Advertisement

ಭೂಕಂಪವು 10 ಕಿ.ಮೀ. ಆಳದಲ್ಲಿ ನಸುಕಿನ ಸುಮಾರು 4.08ರ ಹೊತ್ತಿಗೆ ಘಟಿಸಿರುವುದು ದಾಖಲಾಗಿದೆ. ಈ ವರೆಗಿನ ವರದಿಗಳ ಪ್ರಕಾರ ಈ ಭೂಕಂಪದಿಂದ ಯಾವುದೇ ಜೀವ ಹಾನಿ ಅಥವಾ ಸೊತ್ತು ನಾಶ-ನಷ್ಟ ಸಂಭವಿಸಿಲ್ಲ.

ಹೆಚ್ಚಿನ ವಿವರಗಳನ್ನು ಕಾಯಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next