Advertisement

ಒಂದೇ ದಿನ 45 ಲಕ್ಷ ರೈತರ ಮನೆ ಬಾಗಿಲಿಗೆ ಸೇವೆ!

08:24 PM Mar 09, 2022 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಇನ್ನು ಮುಂದೆ ಮನೆ ಬಾಗಿಲಿಗೇ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬರಲಿದೆ. ಇಂಥ ಒಂದು ವಿಶೇಷ ಸೇವೆ ಮಾ.12ರಿಂದ ಶುರುವಾಗಲಿದೆ.

Advertisement

ರಾಜ್ಯಾದ್ಯಂತ 45 ಲಕ್ಷ ರೈತರ ಮನೆಬಾಗಿಲಿಗೇ ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗೂ ಅಟ್ಲಾಸ್‌ ಅನ್ನು ಉಚಿತವಾಗಿ ತಲುಪಿಸಲು ರಾಜ್ಯ ಸರ್ಕಾರ ವಿಶೇಷ ಯೋಜನೆ ಜಾರಿ ಮಾಡಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಬಳ್ಳಾಪುರದ ಗುಂಗೀರ್ಲಹಳ್ಳಿಯಲ್ಲಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ ಮಾಹಿತಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next