Advertisement
1.80 ಲಕ್ಷಕ್ಕೂ ಅಧಿಕ ಲಸಿಕೆ ಗುರಿ ಹೊಂದಲಾಗಿದೆ. ಶೇ.60 ಜನರು ಮೊದಲನೇ ಡೋಸ್ ಲಸಿಕೆ ಪಡೆದಿದ್ದು, ಅವರಲ್ಲಿ ಶೇ.35 ಮಾತ್ರ ಎರಡನೇ ಡೋಸ್ ಪಡೆದಿದ್ದಾರೆ. ಇನ್ನುಳಿದವರು ಊರಲ್ಲಲ್ಲಿ, ಆರೋಗ್ಯ ಸಮಸ್ಯೆ ಹೀಗೆ ಒಂದಿಲ್ಲೊಂದು ಕಾರಣಗಳ ನೆಪ ಹೇಳಿ ಡೋಸ್ ಪಡೆಯದಿರುವುದು ಆರೋಗ್ಯ ಇಲಾಖೆಗೆ ಬೇಸರ ಮೂಡಿದೆ.
Related Articles
ಶುಕ್ರವಾರ ನಡೆಯುವ “ಲಸಿಕೆ ಮೇಳ’ ಕಾರ್ಯಕ್ರಮ ಅಂಗವಾಗಿ ಪ್ರತಿಯೊಂದು ವಾರ್ಡ್‌ನಲ್ಲಿ ಎರಡು ಲಸಿಕೆ ಕೇಂದ್ರಗಳು ಆರಂಭಿಸಬೇಕೆನ್ನುವ ಚಿಂತನೆ ನಡೆದಿದೆ. ಈಗಾಗಲೇ ಪುರಸಭೆ ಸದಸ್ಯರು, ವರ್ತಕರ ಸಂಘದ ಅಧ್ಯಕ್ಷ-ಸದಸ್ಯರ ಸಭೆ ನಡೆಸಲಾಗಿದೆ. ಕೋವಿಡ್ ಲಸಿಕೆ ಗುರಿ ಮುಟ್ಟಲು ಕಂದಾಯ ಮತ್ತು ಆರೋಗ್ಯ ಇಲಾಖೆ ಶ್ರಮಕ್ಕೆ ಬಹುತೇಕರು ಸ್ಪಂದಿಸದಿರುವುದು ಬೇಸರಕ್ಕೆ ಕಾರಣವಾಗಿದೆ.
Advertisement
ನೂರಕ್ಕೆ ನೂರರಷ್ಟು ಲಸಿಕೆ ಗುರಿಕೋವಿಡ್ ಲಸಿಕೆ ಗುರಿ ಮುಟ್ಟಲು ಗ್ರಾಪಂ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಶ್ರಮ ವಹಿಸಿದ್ದಾರೆ. ಕಂದಾಯ- ಆರೋಗ್ಯ ಇಲಾಖೆ ಒಂದು ಹೆಜ್ಜೆ ಮುಂದಿಟ್ಟಿದ್ದು, ಗೋಪಾಳಪುರು, ಮಾನಶಯ್ಯನದೊಡ್ಡಿ ಗ್ರಾಮದಲ್ಲಿ ನೂರಕ್ಕೆ ನೂರರಷ್ಟು ಲಸಿಕೆ ಗುರಿ ಮುಟ್ಟಲಾಗಿದೆ. ಗೋಪಾಳಪುರು, ಮಾನಶಯ್ಯನದೊಡ್ಡಿ ಗ್ರಾಮದಲ್ಲಿ ಶೇ.100 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಶೇ.45ರಷ್ಟು ಮೊದಲನೇ ಡೋಸ್ ಲಸಿಕೆ ಪಡೆಯದವರನ್ನು ಗುರುತಿಸಲು ವಾರ್ಡ್‌ಗಳಲ್ಲಿ ಎರಡು ಲಸಿಕೆ ಕೇಂದ್ರಗಳು ಆರಂಭಿಸಲಾಗುತ್ತಿದೆ. ಸಮುದಾಯ ಸಹಕಾರ ಬಹಳ ಅಗತ್ಯವಿದೆ.
ಡಾ| ಬನದೇಶ್ವರ,
ತಾಲೂಕು ಆರೋಗ್ಯಾಧಿಕಾರಿ ಪುರಸಭೆ ಹಾಗೂ ವರ್ತಕರ ಸಂಘದ ಸದಸ್ಯರ ಸಭೆ ನಡೆಸಲಾಗಿದೆ. ಲಸಿಕೆ ಮೇಳ ಕಾರ್ಯಕ್ರಮ ಮೂಲಕ ವಾರ್ಡ್‌ನಲ್ಲಿ ಎರಡು ಲಸಿಕೆ ಕೇಂದ್ರಗಳು ಆರಂಭಿಸಲಾಗುತ್ತಿದ್ದು, ಸದಸ್ಯರು ಸಮುದಾಯ ಸಹಕಾರಿಸುವಂತೆ ಮನವಿ ಮಾಡಲಾಗಿದೆ.
ಶ್ರೀನಿವಾಸ ಚಾಪಲ್, ಪ್ರಭಾರ ತಹಶೀಲ್ದಾರ್ *ನಾಗರಾಜ ತೇಲ್ಕರ್