Advertisement
ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರು ಮುಖ್ಯಮಂತ್ರಿಯವರಿಗೆ ಸಲ್ಲಿಸಿದ ಮನವಿ ಆಧರಿಸಿ 45 ಕೋಟಿ ರೂ. ವಿಶೇಷ ಅನುದಾನವನ್ನು ಮಂಜೂರು ಮಾಡಿ, 2021 -22ನೇ ಸಾಲಿನಲ್ಲಿಯೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.
ಹೇಮಾವತಿ ಯೋಜನೆ ಮುಖ್ಯ ಎಂಜಿನಿಯರ್‌ಗೆ ನಿರ್ದೇಶನ ನೀಡಿದ್ದಾರೆ.
Related Articles
Advertisement
ಹಾಸನ ನಗರ ಕಾವೇರಿ ಅಚ್ಚು ಕಟ್ಟು ವ್ಯಾಪ್ತಿಗೆ ಬರುವುದಿಲ್ಲ. ಆದರೂ ಕಾವೇರಿ ನೀರಾವರಿ ನಿಗಮದಿಂದ ವಿಶೇಷ ಅನುದಾನ ಬಿಡುಗಡೆಗೆ ಆದೇಶ ನೀಡಿರುವುದು ವಿವಾದಕ್ಕೀಡಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೊಂದು ನಿದರ್ಶನವೂ ಹೌದು.
ಜಿಪಂ ಅನುದಾನ: ಶಾಸಕರು, ಸಂಸದರಿಗೆ ಸಮಾನಹಂಚಿಕೆಹಾಸನ: ಜಿಪಂಗೆ 2021 -22ನೇ ಸಾಲಿಗೆ ಮಂಜೂರಾದ ಅನುದಾನವನ್ನು ಎಲ್ಲ ತಾಲೂಕುಗಳಿಗೂ ಹೋಬಳಿವಾರು ವಿಧಾನಸಭಾ ಕ್ಷೇತ್ರ ಗಳಿಗೂ ಸಮಾಜವಾಗಿ ಹಂಚಿಕೆ ಮಾಡಿ ಕ್ರಿಯಾ ಯೋಜನೆ ರೂಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಸಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಜಿಪಂನಲ್ಲಿ ಈಗಚುನಾಯಿತ ಆಡಳಿತ ಮಂಡಳಿ ಇಲ್ಲ. ಆಡಳಿ ತಾಧಿಕಾರಿಯವರಿದ್ದು, ಈ ವರ್ಷದ ಅನುದಾನದ ಕ್ರಿಯಾ ಯೋಜನೆ ರೂಪಿಸ ಬೇಕಾಗಿದೆ. ಹಾಗಾಗಿ ಆಡಳಿತಾಧಿಕಾರಿ ಕೊಠಡಿಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಮ್ಮುಖದಲ್ಲಿ ಸಚಿವ ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಒಂದು ಗಂಟೆಗೂ ಹೆಚ್ಚುಕಾಲ ಕ್ರಿಯಾ ಯೋಜನೆ ರೂಪಿಸುವ ಸಂಬಂಧ ಸಭೆ ನಡೆಯಿತು. ಆ ಸಭೆಯಲ್ಲಿ ಚರ್ಚಿಸಿ ವಿಧಾನ ಪರಿಷತ್ ಸದಸ್ಯರು, ಸಂಸದರು ಸೇರಿ 10 ಪಾಲು ಮಾಡಿ ಅನುದಾನ ಹಂಚಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಜಿಪಂಗೆ ಸುಮಾರು 28 ಕೋಟಿ ರೂ. ಅನುದಾನ ಬಿಡುಗಡೆಯಾಗದ್ದು ಅನುದಾನವನ್ನು ಇಬ್ಬರು ಸಂಸದರು ಒಬ್ಬ ಮೇಲ್ಮನೆ ಸದಸ್ಯರು ಹಾಗೂ 7 ಶಾಸಕರಿಗೆ ಸಮಾನವಾಗಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ತಾಲೂಕುವಾರು ಅನುದಾನ ಹಂಚಿಕೆ ಮಾಡುವ ಚರ್ಚೆ ನಡೆಯಿತು. ಆದರೆ ಒಂದು ತಾಲೂಕು ಎರಡು – ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವುದರಿಂದ ಅನುದಾನ ಹಂಚಿಕೆ ಗೊಂದಲ ಸಭೆಯಲ್ಲಿ ಏರ್ಪಟ್ಟಿತು. ಹೋಬಳಿವಾರು ಅನುದಾನ ಹಂಚಿಕೆ ಮಾಡಬೇಕು ಎಂದಾಗ ಕೆಲ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಹಾಗಾಗಿ ಅಂತಿಮವಾಗಿ 7 ಶಾಸಕರು, ಇಬ್ಬರು ಸಂಸದರು, ಒಬ್ಬ ಮೇಲ್ಮನೆ ಸದಸ್ಯರಿಗೆ ಸಮಾನವಾಗಿ ಜಿಪಂ ಅನುದಾನ ಹಂಚಿಕೆ ಮಾಡಿ ಕಾಮಗಾರಿಗಳ ಕ್ರೀಯಾ ಯೋಜನೆ ರೂಪಿಸಿಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.