ಬೆಂಗಳುರು: ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಕೂಡ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿಲ್ಲ. ಇಂದೂ ಸಹ ( ಮಂಗಳವಾರ) ಹೊಸ ಪ್ರಕರಣಗಳ ಸಂಖ್ಯೆ 40 ಸಾವಿರ ಗಡಿ ದಾಟಿದೆ.
ಇಂದು ಸಂಜೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಕಳೆದ 24 ಗಂಟೆಗಳ ( ದಿನಾಂಕ: 03.05.2021, 00:00 ರಿಂದ 23:59ರವರೆಗೆ )ಕಾಲಾವಧಿಯಲ್ಲಿ ಬರೋಬ್ಬರಿ 44631 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 464363ಕ್ಕೆ ಏರಿಕೆಯಾಗಿದೆ.
ಕೋವಿಡ್ ಸೋಂಕಿಗೆ ಬಲಿಯಾಗುತ್ತಿರುವ ಸಂಖ್ಯೆಯೂ ಕೂಡ ಹೆಚ್ಚಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 292 ಜನರು ಮಹಾಮಾರಿ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಇಂದಿನವರೆಗೆ ಕೋವಿಡ್-19 ಸೋಂಕಿನಿಂದ ಮೃತ ಪಟ್ಟವರ ಒಟ್ಟು ಸಂಖ್ಯೆ 16538ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-676, ಬಳ‍್ಳಾರಿ-1280, ಬೆಳಗಾವಿ-615, ಬೆಂಗಳೂರು ಗ್ರಾಮಾಂತರ-996, ಬೆಂಗಳೂರು ನಗರ-20870, ಬೀದರ್-403,ಚಾಮರಾಜನಗರ-528, ಚಿಕ್ಕಬಳ್ಳಾಪುರ-639, ಚಿಕ್ಕಮಗಳೂರು-735, ಚಿತ್ರದುರ್ಗ-215, ದಕ್ಷಿಣ ಕನ್ನಡ-985, ದಾವಣಗೆರೆ-277, ಧಾರವಾಡ-647, ಗದಗ-191, ಹಾಸನ-2278, ಹಾವೇರಿ-408, ಕಲಬುರಗಿ-1162, ಕೊಡಗು-743, ಕೋಲಾರ-600, ಕೊಪ್ಪಳ-585, ಮಂಡ್ಯ-1506, ಮೈಸೂರು-2293, ರಾಯಚೂರು-817, ರಾಮನಗರ-529, ಶಿವಮೊಗ್ಗ-803, ತುಮಕೂರು-1636, ಉಡುಪಿ-556, ಉತ್ತರ ಕನ್ನಡ-822, ವಿಜಯಪುರ-379, ಯಾದಗಿರಿ-457.