Advertisement

ಸುದ್ದಿ ಸಂಸ್ಥೆಗೆ ಸಂಭಾವನೆ ನೀಡದ ಹಿನ್ನೆಲೆ : ಗೂಗಲ್‌ಗೆ ಫ್ರಾನ್ಸ್‌ನಲ್ಲಿ 4,417 ಕೋಟಿ ದಂಡ

07:29 PM Jul 13, 2021 | Team Udayavani |

ಲಂಡನ್‌: ವಿವಿಧ ಸಂಸ್ಥೆಗಳ ಸುದ್ದಿಗಳನ್ನು ತನ್ಮೂಲಕ ಓದುಗರಿಗೆ ತಲುಪಿಸುತ್ತಿರುವ ಗೂಗಲ್‌, ಅದಕ್ಕೆ ಪ್ರತಿಯಾಗಿ ಆಯಾ ಸುದ್ದಿ ಸಂಸ್ಥೆಗಳಿಗೆ ನೀಡಬೇಕಿರುವ ಸಂಭಾವನೆಯನ್ನು ನೀಡದಿರುವುದ ಹಿನ್ನೆಲೆಯಲ್ಲಿ ಆ ಸಂಸ್ಥೆಯ ಮೇಲೆ ಫ್ರಾನ್ಸ್‌ನ ಆಡಳಿತ 4,417 ಕೋಟಿ ರೂ.ಗಳ ದಂಡ ವಿಧಿಸಿದೆ.

Advertisement

ಕಳೆದ ತಿಂಗಳ ಅಂತ್ಯದಲ್ಲಿ, ತನ್ನ ಸೂಚನೆಯ ಹೊರತಾಗಿಯೂ ಸರ್ಚ್‌ ಇಂಜಿನ್‌ ಕ್ಷೇತ್ರದಲ್ಲಿ ತನ್ನ ಹಕ್ಕುಸ್ವಾಮ್ಯ ಬಿಟ್ಟುಕೊಡದೇ ಇದ್ದಿದ್ದಕ್ಕೆ ಗೂಗಲ್‌ ಮೇಲೆ ಐರೋಪ್ಯ ಒಕ್ಕೂಟ (ಇ.ಯು) 21 ಸಾವಿರ ಕೋಟಿ ರೂ.ಗಳ ದಂಡ ವಿಧಿಸಿತ್ತು. ಇದೇ ತಿಂಗಳ ಆರಂಭದಲ್ಲಿ, ಆ್ಯಂಡ್ರಾಯ್ಡ್ ಆಪರೇಟಿಂಗ್‌ ಸಿಸ್ಟಂ ವ್ಯವಸ್ಥೆಯಲ್ಲಿ ಗೂಗಲ್‌ ಏಕಸ್ವಾಮ್ಯತೆ ಸಾಧಿಸಲು ಹವಣಿಸುತ್ತಿದೆಯೆಂದು ಆರೋಪಿಸಿ ಅಮೆರಿಕದ 37 ರಾಜ್ಯಗಳು ಗೂಗಲ್‌ಗೆ ನೋಟಿಸ್‌ ಜಾರಿಗೊಳಿಸಿದ್ದವು.

ಇದನ್ನೂ ಓದಿ :ಕರಣಕುಪ್ಪೆ ಗ್ರಾಮ ಪಂಚಾಯತ್ ಗೆ ಶಾಸಕ ಎಚ್. ಪಿ. ಮಂಜುನಾಥ್ ಪ್ರಶಂಸೆ

Advertisement

Udayavani is now on Telegram. Click here to join our channel and stay updated with the latest news.

Next