Advertisement

Helicopter ಮಾದರಿಯಲ್ಲಿ ಕಾರು ಮಾರ್ಪಾಡು: ಪೊಲೀಸರಿಂದ ದಂಡ

04:03 PM Mar 21, 2024 | Team Udayavani |

ಲಕ್ನೋ: ಉತ್ತರ ಪ್ರದೇಶದ ಅಹ್ಮದ್‌ನಗರದ ನಿವಾಸಿ ಯೊಬ್ಬರು ತನ್ನ ಕಾರನ್ನು ಹೆಲಿಕಾಪ್ಟರ್‌ ಮಾದರಿಯಲ್ಲಿ ಮಾರ್ಪಡಿಸಿದ್ದಾರೆ. ನಿಯಮಿತ ತಪಾಸಣೆ ವೇಳೆ ಈ ಕಾರನ್ನು ಕಂಡ ಪೊಲೀಸರು, ಕಾರನ್ನು ವಶಪಡಿಸಿಕೊಂಡು, ಮಾಲಕರಿಗೆ ದಂಡ ವಿಧಿಸಿದ್ದಾರೆ. ಈ ಕಾರಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಅಹ್ಮದ್‌ನಗರದ ಖಜೂರಿ ಬಜಾರ್‌ನ ಈಶ್ವರ್‌ ದೀನ್‌ ಅವರು ತಮ್ಮ ಮಾರತಿ ವ್ಯಾಗನ್‌ ಆರ್‌ ಕಾರನ್ನು ಹೆಲಿಕಾಪ್ಟರ್‌ ರೀತಿಯಲ್ಲಿ ಮಾರ್ಪಡಿಸಿದ್ದಾರೆ. “ಮದುವೆ ಸಮಾರಂಭದಲ್ಲಿ ಈ ವಿಶೇಷ ಕಾರನ್ನು ಬಾಡಿಗೆಗೆ ನೀಡಲು, ದೀರ್ಘ‌ ಸಮಯ ವ್ಯಯಿಸಿ, 2.5 ಲಕ್ಷ ರೂ. ಖರ್ಚು ಮಾಡಿ ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿಸಿದ್ದೇನೆ. ಪೊಲೀಸರು 2,000 ರೂ. ದಂಡ ವಿಧಿಸಿದ್ದು, ಮಾರ್ಪಾಡಾದ ಭಾಗಗಳನ್ನು ತೆಗೆದು, ಮೊದಲಿನಂತೆ ಮಾಡಲು ಸೂಚಿಸಿದ್ದಾರೆ’ ಎಂದು ಈಶ್ವರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 207ರ ಅಡಿಯಲ್ಲಿ ಯಾವುದೇ ವಾಹನದ ಭಾಗಗಳನ್ನು ಮಾರ್ಪಾಡು ಮಾಡಿಸುವ ಮುನ್ನ ಆ ಭಾಗದ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಒ)ಯ ಅನುಮತಿ ಪಡೆಯುವುದು ಕಡ್ಡಾಯ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next