Advertisement

ಮಗನೊಂದಿಗೆ 10ನೇ ತರಗತಿ ಪರೀಕ್ಷೆ: ಇದು 44ರ ತಾಯಿಯ ಕಥೆ

11:49 AM Mar 29, 2018 | Team Udayavani |

ಲೂಧಿಯಾನ : ಕೌಟುಂಬಿಕ ಸಮಸ್ಯೆಗಳಿಂದಾಗಿ ಶಾಲಾ ಶಿಕ್ಷಣ ಕೈಗೊಳ್ಳಲಾಗದೆ ಹೊರ ಬಿದ್ದಿದ್ದ 44ರ ಹರೆಯದ ರಜನಿ ಬಾಲಾ ಅವರೀಗ ತನ್ನ ಮಗನೊಂದಿಗೆ 10ನೇ ತರಗತಿಯ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. 

Advertisement

ಸರಕಾರಿ ಆಸ್ಪತ್ರೆಯಲ್ಲಿ ವಾರ್ಡ್‌ ಅಟೆಂಡೆಂಟ್‌ ಆಗಿರುವ ರಜನಿ ಬಾಲಾ, 10ನೇ ತರಗತಿ ಪರೀಕ್ಷೆಗೆ ಕೂರಲು ಹಲವು ತಿಂಗಳ ರಜೆ ಪಡೆದು ಶಾಲೆಗೆ ಹೋಗಿ ವಿದ್ಯಾರ್ಥಿನಿಯಾಗಿ ಕುಳಿತು ಪಾಠಗಳನ್ನು ಕಲಿತು ಇದೀಗ ತನ್ನ ಪುತ್ರನೊಂದಿಗೆ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. 

“ನಾನು ಹತ್ತನೇ ಕ್ಲಾಸ್‌ ಓದಿ ಮುಗಿಸಲೇಬೇಕು; ಪರೀಕ್ಷೆ ಪಾಸು ಮಾಡಲೇ ಬೇಕು ಎಂಬ ಹಠ ನನ್ನಲ್ಲಿತ್ತು. ಆರಂಭದಲ್ಲಿ ನಾನು, ಇಷ್ಟು ಪ್ರಾಯವಾದವಳು, ಶಾಲೆಗೆ ಹೋಗಿ ಕೂರುವುದಕ್ಕೆ ತುಂಬಾ ಸಂಕೋಚವಾಗಿತ್ತು. ಆದರೂ ಅದನ್ನು ಬದಿಗಿಟ್ಟು ನಾನು 10ನೇ ತರಗತಿ ಶಿಕ್ಷಣ ಪೂರೈಸಿ ಈಗ ಪರೀಕ್ಷೆ ಬರೆಯುತ್ತಿದ್ದೇನೆ’ ಎಂದು ಸಂಭ್ರಮದಿಂದ ಮತ್ತು ಆತ್ಮವಿಶ್ವಾಸದಿಂದ ರಜನಿ ಬಾಲಾ ಹೇಳಿದರು. 

1989ರಲ್ಲಿ 9ನೇ ತರಗತಿಯ ಓದಿನೊಂದಿಗೆ ಕೌಟುಂಬಿಕ ಸಮಸ್ಯೆಗಳಿಂದಾಗಿ ಶಾಲೆಯಿಂದ ಹೊರಬಿದ್ದಿದ್ದ ರಜನಿ ಬಾಲಾ ಅವರು “ನನಗೆ ಈಗ 10ನೇ ತರಗತಿ ಮುಗಿಸಿ ಪರೀಕ್ಷೆ ಎದುರಿಸಲು ನನ್ನ ಪತಿ ರಾಜ್‌ಕುಮಾರ್‌ ಸಾಥಿ  ಮತ್ತು ಪುತ್ರಿಯರು ತುಂಬ ಸಪೋರ್ಟ್‌ ನೀಡಿದ್ದಾರೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next