Advertisement

Drugs: 44 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ!

12:47 AM Aug 30, 2023 | Team Udayavani |

ತಿರುವನಂತಪುರ: ಕೊಕೇನ್‌, ಹೆರಾಯಿನ್‌ ಸೇರಿದಂತೆ 44 ಕೋಟಿ ರೂ. ಮೌಲ್ಯದ ಮಾದಕವಸ್ತು ಕಳ್ಳಸಾಗಣೆಯ ಸಂಚನ್ನು ಕೇರಳದ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬಂದಿ ವಿಫ‌ಲಗೊಳಿಸಿದ್ದಾರೆ. ಈ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು, ಆತನಿಂದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತಿಳಿಸಿದೆ.

Advertisement

ಡಿಆರ್‌ಐನ ಕಲ್ಲಿಕೋಟೆ ಘಟಕದ ಕೊಚಿನ್‌ ವಲಯ ಘಟಕದ ಅಧಿಕಾರಿಗಳು ಉತ್ತರ ಪ್ರದೇಶದ ಮುಜಾಫ‌ರ್‌ ನಗರದ ನಿವಾಸಿ ರಾಜೀವ್‌ ಕುಮಾರ್‌ ಎಂಬಾತನನ್ನು ತಡೆ ಹಿಡಿದು, ಆತನಿಂದ 3.5 ಕೆ.ಜಿ. ಕೊಕೇನ್‌, 1.3 ಕೆ.ಜಿ. ಹೆರಾಯಿನ್‌ ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 44 ಕೋಟಿ ರೂ.ಗಳಾಗಿದೆ. ಕೀನ್ಯಾದಿಂದ ಬಂದು ಕಲ್ಲಿಕೋಟೆಯಲ್ಲಿ 4.8 ಕೆ.ಜಿ. ಮಾದಕ ವಸ್ತುವಿನೊಂದಿಗೆ ಸೋಮವಾರ ಸಿಕ್ಕಿಬಿದ್ದಿದ್ದ ವ್ಯಕ್ತಿ ನೀಡಿದ್ದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next