Advertisement
ನೈಋತ್ಯ ರೈಲ್ವೆ ಪ್ರಧಾನ ಕಚೇರಿಯಲ್ಲಿ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಇಲಾಖೆಗಳ ಪ್ರಧಾನ ಮುಖ್ಯಸ್ಥರು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರೊಂದಿಗೆ ಶುಕ್ರವಾರ ಸಭೆ ನಡೆಸಿ ಮಾತನಾಡಿದ ಅವರು, ಲೋಡ್ ಮಾಡಲಾದ ಸರಕುಗಳಲ್ಲಿ 17.04 ಮಿಲಿಯನ್ ಟನ್ ಕಬ್ಬಿಣದ ಅದಿರು, 9.13 ಮಿಲಿಯನ್ ಟನ್ ಕಲ್ಲಿದ್ದಲು, 9.05 ಮಿಲಿಯನ್ ಟನ್ ಪಿಗ್ ಐರನ್ ಮತ್ತು ಫಿನಿಶ್ಡ್ ಸ್ಟೀಲ್, 0.77 ಮಿಲಿಯನ್ ಟನ್ ಆಹಾರ ಧಾನ್ಯಗಳು, 0.98 ಮಿಲಿಯನ್ ಟನ್ ಸಿಮೆಂಟ್ ಇತ್ಯಾದಿ ಆಗಿದೆ. 2021-22ರಲ್ಲಿ ಸರಕು ಆದಾಯವು 4,160 ಕೋಟಿ ರೂ. ಆಗಿದ್ದು, ಇದು 2020-21ರ ಹಣಕಾಸು ವರ್ಷಕ್ಕಿಂತ ಶೇ.28.72 ಹೆಚ್ಚು. 2021-22ರಲ್ಲಿ ಪಾರ್ಸೆಲ್ ಆದಾಯವು 121.56 ಕೋಟಿ ರೂ. ಗಳಾಗಿದೆ. 2021-22ರ ಹಣಕಾಸು ವರ್ಷದಲ್ಲಿ 238 ಆಟೋಮೊಬೈಲ್ ರೇಕ್‌ಗಳನ್ನು ಲೋಡ್ ಮಾಡಿದೆ. ವಿವಿಧ ಬಗೆಯ ಗಳಿಕೆಯು ಶೇ.71.52 ಹೆಚ್ಚಳದೊಂದಿಗೆ 275.7 ಕೋಟಿ ರೂ. ಆಗಿದೆ. ನೈಋತ್ಯ ರೈಲ್ವೆಯು 138.04 ಕೋಟಿ ರೂ. ಮೌಲ್ಯದ ಸ್ಕ್ರ್ಯಾಪ್ ಮಾರಾಟ ಮಾಡಿದೆ ಮತ್ತು ರೈಲ್ವೆ ಮಂಡಳಿಯು ನಿಗದಿಪಡಿಸಿದ ಗುರಿ ಮೀರಿದೆ ಎಂದರು.
Advertisement
44.12 ಮಿಲಿಯನ್ ಟನ್ ಸರಕು ಸಾಗಣೆ
11:23 AM Apr 02, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.