Advertisement

ರೈಲ್ವೆ ವರ್ಕ್‌ಶಾಪ್‌ಗೆ ಶೀಘ್ರ 430 ಎಕ್ರೆ ಭೂ ಸ್ವಾಧೀನ

04:05 PM Nov 22, 2020 | Suhan S |

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ಸಮೀಪ ರೈಲ್ವೆ ವರ್ಕ್‌ಶಾಪ್‌ ಸ್ಥಾಪನೆಗೆ ಅಗತ್ಯವಾದ 430 ಎಕರೆ ಭೂಮಿ ಸ್ವಾಧೀನಕ್ಕೆ ಪಡೆಯುವ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಸಂಸದ ಎಸ್‌. ಮುನಿಸ್ವಾಮಿ ತಿಳಿಸಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಕೋರ್‌ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಮೊದಲು 260 ಎಕರೆ ಮಾತ್ರ ಸರ್ಕಾರಿ ಜಾಗವನ್ನು ಗುರುತಿಸಲಾಗಿತ್ತು. ಈಗ ಸುತ್ತಮುತ್ತಲಿನ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಸರ್ಕಾರಕ್ಕೆ ಪ್ರಸ್ತಾವನೆ: ನರಸಾಪುರದ ಸಮೀಪದಲ್ಲಿ ಕೈಗಾರಿಕೆಗಳು ಇರುವುದರಿಂದ ಆ ಭಾಗದಲ್ಲಿ 50 ಹಾಸಿಗೆಯ ಇಎಸ್‌ಐ ಆಸ್ಪತ್ರೆ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ಆಸ್ಪತ್ರೆ ನಿರ್ಮಾಣದಿಂದ 85 ಸಾವಿರ ಕಾರ್ಮಿಕರಿಗೆ ಅನುಕೂಲವಾಗಲಿದ್ದು, ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರ ಗಮನಕ್ಕೆ ತರಲಾಗಿದೆ ಎಂದರು. ಕೇಂದ್ರ ರೈಲ್ವೆ ಸಚಿವರೊಂದಿಗೆ ಈಗಾಗಲೇ ಮಾತನಾಡಿದ್ದು ಕೆಜಿಎಫ್‌ ವ್ಯಾಪ್ತಿಯಲ್ಲಿ ಕುಪ್ಪಂ, ಮಾರಿಕುಪ್ಪಂ ನಡುವಿನ ರೈಲ್ವೆ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಈಗ ಚಾಲನೆ ನೀಡಲು ಪ್ರಹ್ಲಾದ ಜೋಷಿ ಅವರೊಂದಿಗೆ ಚರ್ಚಿಸಿದ್ದು ಅವರೂ ಸಮ್ಮತಿಸಿದ್ದಾರೆಂದರು.

ಗ್ರಾಮ ದತ್ತು: ಸಂಸದ ಆದರ್ಶ ಗ್ರಾಮವಾಗಿ ಈಗಾಗಲೇ ಮಾಲೂರು ತಾಲೂಕಿನ ಬನಹಳ್ಳಿ ಗ್ರಾಮವನ್ನು ಗುರ್ತಿಸಿದೆ. ಜತೆಗೆ ನಮ್ಮ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ತವರು ಗ್ರಾಮವಾದ ಕ್ಯಾಸಂಬಳ್ಳಿ ಗ್ರಾಮವನ್ನೂ ದತ್ತು ಪಡೆದು ಆದರ್ಶ ಗ್ರಾಮವಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆಂದರು.

ಯುವಪಡೆ ರಚನೆಗೆ ಚಿಂತನೆ: ಗ್ರಾಮಗಳಲ್ಲಿನ ಸಮಸ್ಯೆ ಪರಿಹರಿಸಲು ಮತ್ತು ಅಗತ್ಯವಾದ ಅಭಿವೃದ್ಧಿ ಕಾರ್ಯ ಮಾಡಲು ಯುವಪಡೆಯೊಂದನ್ನು ರಚಿಸಲು ಚಿಂತಿಸಲಾಗಿದೆ ಎಂದರು.

Advertisement

ಮಾರ್ಗಸೂಚಿ ಪಾಲಿಸಿ: ಕೈಗಾರಿಕೆಗಳ ಸಿಎಸ್‌ಆರ್‌ ಅನುದಾನವನ್ನು ವೆಚ್ಚ ಮಾಡಿರುವ ಬಗ್ಗೆ ಕೈಗಾರಿಕೆಗಳು ವರದಿ ನೀಡಲು ನ.27ರ ನಂತರ ಸಭೆಯ ದಿನಾಂಕ ನಿಗದಿಪಡಿಸಲಾಗುವುದು. ರಾಜ್ಯ-ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಪ್ರಗತಿಯ ವರದಿ ನೀಡಬೇಕು.ಈವೇಳೆ ಅಗತ್ಯ ಕ್ರಮಕೈಗೆತ್ತಿಕೊಳ್ಳಲು ಸೂಚಿಸಲಾಗುವುದೆಂದರು.

ಶಿಫಾರಸು ಮಾಡಿ: ಸರ್ಕಾರಿ ಕಚೇರಿಗಳಲ್ಲಿ ಬ್ರೋಕರ್‌ಗಳ ಹಾವಳಿ ಬಗ್ಗೆ ದೂರುಗಳಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು,ಈಕುರಿತು ಕ್ರಮ ಕೈಗೊಳ್ಳಲಾಗುವುದು. ಅನೇಕ ಯೋಜನೆ ಸದ್ಭಳಸದೆ ಸರ್ಕಾರಕ್ಕೆ ಅನುದಾನ ವಾಪಸ್ಸಾಗಿದೆ. ಈ ಕುರಿತೂ ಸಂಬಂಧಪಟ್ಟಅಧಿಕಾರಿಗಳ ವಿರುದ್ಧಕ್ರಮಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದರು.

ತನಗೆ ರಾಜಕಾರಣಕ್ಕಿಂತ ಅಭಿವೃದ್ಧಿ ಮುಖ್ಯ. ಕೋಲಾರದ ಇತಿಹಾಸದಲ್ಲಿ ತನ್ನ ಹೆಸರು ಚಿರಕಾಲ ಉಳಿಯಲುಕೆಲಸ ನಿರ್ವಹಿಸುತ್ತಿದ್ದೇನೆ. ಸರ್ಕಾರ ತನಗೆ ನೀಡುತ್ತಿರುವ ವೇತನ, ಭತ್ಯೆ ಬೇಕಾಗಿಲ್ಲ ಅದನ್ನೂ ಸಂಕಷ್ಟದಲ್ಲಿರುವವರಿಗೆ ಹಂಚುತ್ತಿದ್ದೇನೆಂದರು. ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಪಕ್ಷದ ವಿಭಾಗೀಯ ಸಹ ಪ್ರಮುಖ್‌ ಪುಷ್ಪಾ, ಮುಖಂಡರಾದ ವಿಜಯಕುಮಾರ್‌, ಅಪ್ಪಿನಾರಾಯಣಸ್ವಾಮಿ, ರಾಘವೇಂದ್ರ, ರಾಜೇಶ್‌ ಮತ್ತಿತರರಿದ್ದರು.

ಕೆಜಿಎಫ್ ಚಿನ್ನದ ಗಣಿ ಪುನಾರಂಭಕ್ಕೆ ಆಸಕ್ತಿಕೆಜಿಎಫ್‌ನ ಬಿಜಿಎಂಎಲ್‌ ವ್ಯಾಪ್ತಿಯ3200 ಎಕರೆ ಜಾಗದಲ್ಲಿ ಕೈಗಾರಿಕೆಗಳ ಪಾರ್ಕ್‌ ಸ್ಥಾಪಿಸುವ ಸಲುವಾಗಿ ಈಗಾಗಲೇ ಕೈಗಾರಿಕೆ ಸಚಿವರಾದ ಜಗದೀಶ್‌ ಶೆಟ್ಟರ್‌ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಚಿನ್ನದ ಗಣಿಯಲ್ಲಿ ನಿಕ್ಷೇಪ ಇರುವ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದ್ದು ಕೇಂದ್ರ ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸಿದೆ. ಚುನಾವಣೆಗೆ ಮೊದಲು ಅಭಿವೃದ್ಧಿ ಕಾರ್ಯ ಆಗಲಿದೆ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next