Advertisement

ಮಹಾರಾಷ್ಟ್ರದಲ್ಲಿ ದಿನಕ್ಕೆ 424  ಮೆಟ್ರಿಕ್‌ ಟನ್‌ ಆಮ್ಲಜನಕ ಬಳಕೆ

10:56 AM Jan 09, 2022 | Team Udayavani |

ಮುಂಬಯಿ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಹೆಚ್ಚಾಗಿದೆ. ಡಿಸೆಂಬರ್‌ ಕೊನೆಯ ವಾರದವರೆಗೆ ರಾಜ್ಯದಲ್ಲಿ ದಿನಕ್ಕೆ 270ರಿಂದ 300 ಮೆಟ್ರಿಕ್‌ ಟನ್‌ ಬಳಕೆಯಾಗುತ್ತಿದ್ದ ಆಮ್ಲಜನಕ, ಪ್ರಸ್ತುತ ದಿನಕ್ಕೆ 424 ಮೆಟ್ರಿಕ್‌ ಟನ್‌ಗೆ ಏರಿಕೆಯಾಗಿದೆ.

Advertisement

ರಾಜ್ಯದಲ್ಲಿ ಸದ್ಯ ಆಮ್ಲಜನಕದ ಕೊರತೆಯಿಲ್ಲ, ಪ್ರಸ್ತುತ ಸ್ಥಿತಿಯು ಮೊದಲ ಮತ್ತು ಎರಡನೇ ಅಲೆಗಿಂತ ಉತ್ತಮವಾಗಿದೆ ಎಂದು ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಹೇಳಿದೆ. ಕೊರೊನಾ ಸೋಂಕು ರೋಗಿ ಗಳ ಶ್ವಾಸ ಕೋಶದ ಮೇಲೆ ಪರಿಣಾಮ ಬೀರು ವುದರಿಂದ ಹೆಚ್ಚಿನ ಸೋಂಕಿತರಿಗೆ ಕೃತಕ ಆಮ್ಲಜನಕದ ಅಗತ್ಯವಿರುತ್ತದೆ. ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಪ್ರತಿನಿತ್ಯ 1,500 ಮೆಟ್ರಿಕ್‌ ಟನ್‌ ವರೆಗೆ ಆಮ್ಲಜನಕ ಅಗತ್ಯವಿರುತಿತ್ತು ಎಂದು ತಿಳಿಸಿದೆ.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಆಮ್ಲ ಜನಕದ ತೀವ್ರ ಕೊರತೆ ಉಂಟಾಗಿದ್ದು, ಇದ ರಿಂದಾಗಿ ನೆರೆ ರಾಜ್ಯ ಗಳಿಂದ ಆಮ್ಲ ಜನಕ ಆಮದು ಮಾಡಿಕೊಳ್ಳಬೇಕಾಯಿತು. ಅದೇ ರೀತಿ ಎರಡನೇ ಅಲೆಯ ಸಂದರ್ಭದಲ್ಲೂ ಆಮ್ಲಜನಕ ಬೇಡಿಕೆ ಹೆಚ್ಚಿದ್ದು, ಆದರೆ ಆ ಸಮಯಕ್ಕೆ ರಾಜ್ಯದಲ್ಲಿ ಆಮ್ಲ ಜನಕ ಉತ್ಪಾದನೆ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ ಹಲವೆಡೆ ಸ್ಥಾವರ ಗಳನ್ನು ಸ್ಥಾಪಿಸಿರುವುದರಿಂದ ಆಮ್ಲಜನಕದ ಕೊರತೆ ನಿಭಾಯಿಸಲಾಯಿತು ಎಂದು ಇಲಾಖೆ ತಿಳಿಸಿದೆ.

ಎರಡನೇ ಅಲೆಯ ಸಂದರ್ಭದಲ್ಲಿ ದಿನಕ್ಕೆ 1,600ರಿಂದ 1,800 ಮೆಟ್ರಿಕ್‌ ಟನ್‌ ಆಮ್ಲಜನಕದ ಅಗತ್ಯವಿತ್ತು. ಜುಲೈನಲ್ಲಿ ಈ ಬೇಡಿಕೆಯು 500 ಮೆಟ್ರಿಕ್‌ಗೆ ಅನಂತರ 270ರಿಂದ 300 ಟನ್‌ಗೆ ಇಳಿಕೆಯಾಯಿತು. ಆದರೆ ಈಗ ಜನವರಿಯಲ್ಲಿ ರಾಜ್ಯದಲ್ಲಿ ಕೊರೊನಾ ಹರಡುವಿಕೆ ಮತ್ತೆ ಹೆಚ್ಚಿದ್ದು, ಆಮ್ಲಜನಕದ ದೈನಂದಿನ ಅಗತ್ಯವೂ ಹೆಚ್ಚಾಗಿದೆ. ಡಿಸೆಂಬರ್‌ ಕೊನೆಯ ವಾರದಲ್ಲಿ ರಾಜ್ಯಕ್ಕೆ ದಿನಕ್ಕೆ 270 ರಿಂದ 300 ಮೆಟ್ರಿಕ್‌ ಟನ್‌ ಆಮ್ಲಜನಕದ ಅಗತ್ಯವಿತ್ತು. ಆದರೆ ಜನವರಿ 1ರಂದು ಈ ಸಂಖ್ಯೆ 311 ಮೆಟ್ರಿಕ್‌ ಟನ್‌ಗೆ ಏರಿದೆ. ಕೋವಿಡ್‌ ಹೊರತುಪಡಿಸಿ ಇತರ ರೋಗಿಗಳಿಗೆ ದಿನಕ್ಕೆ ಸರಿಸುಮಾರು 200 ಮೆಟ್ರಿಕ್‌ ಟನ್‌ ಆಮ್ಲಜನಕದ ಅಗತ್ಯವಿದೆ ಎಂದು ತಿಳಿಸಿದೆ.

ಎಫ್ಡಿಎಯ ಪ್ರಧಾನ ಕಚೇರಿಯ ಜಂಟಿ ಆಯುಕ್ತ (ಔಷಧ) ಡಿಆರ್‌ ಗಹಾನೆ ಅವರು ಮಾಹಿತಿ ನೀಡಿ, ಜನವರಿ 5ರಂದು ರಾಜ್ಯದಲ್ಲಿ 424 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಬಳಸಲಾಗಿದೆ. ಸದ್ಯ ರಾಜ್ಯದಲ್ಲಿ ಒಮಿಕ್ರಾನ್‌ ವೈರಸ್‌ ಹರಡುತ್ತಿದ್ದು, ವೈರಸ್‌ ಸೌಮ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ಚಿಕಿತ್ಸೆಗೆ ಒಳಪಡುವ ಒಟ್ಟು ರೋಗಿಗಳಲ್ಲಿ ಶೇ.10 ರಷ್ಟು ಆಮ್ಲಜನಕವನ್ನು ನೀಡಬೇಕಾಗಿತ್ತು. ಆದರೆ ಈಗ ಕೇವಲ ಶೇ.2ರಷ್ಟು ರೋಗಿಗಳಿಗೆ ಮಾತ್ರ ಆಮ್ಲಜನಕದ ಅಗತ್ಯವಿದೆ ಎಂದವರು ತಿಳಿಸಿದರು.

Advertisement

ರೋಗಿಗಳ ಸಂಖ್ಯೆ ಹೆಚ್ಚಳದಿಂದ ಆಮ್ಲಜನಕದ ಅಗತ್ಯವೂ ಸ್ವಲ್ಪ ಹೆಚ್ಚಾಗಿದೆ. ಆದರೆ ರಾಜ್ಯವು ಮುನ್ನೆಚ್ಚರಿಕೆ ವಹಿಸಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಿದ್ಧವಾಗಿದೆ. ಇಂದು ನಾವು ದಿನಕ್ಕೆ 1,400 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಉತ್ಪಾದಿಸುತ್ತಿದ್ದೇವೆ. ಆರೋಗ್ಯ ಇಲಾಖೆಯು ವಿವಿಧ ವಿಧಾನಗಳ ಮೂಲಕ ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸಿದೆ.-ಪರಿಮಲ್‌ ಸಿಂಗ್‌, ಆಯುಕ್ತ, ಎಫ್ಡಿಎ

Advertisement

Udayavani is now on Telegram. Click here to join our channel and stay updated with the latest news.

Next