ಚಿಕ್ಕಮಗಳೂರು: 420 ಕೆಲಸ ಮಾಡಿದವರು ಮಾಡಿದವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಬಿಜೆಪಿ ಪಕ್ಷವನ್ನು ವ್ಯಂಗ್ಯವಾಡಿದ್ದಾರೆ.
ಭಾನುವಾರ ಚಿಕ್ಕಮಂಗಳೂರು ಪತ್ರಕರ್ತರ ಭವನದಲ್ಲಿ ಮಾತನಾಡಿದ ಪ್ರಕಾಶ್ ರಾಜ್, 420 ಮಾಡಿದವರು ಮಾತ್ರ 400 ಕ್ಕೂ ಹೆಚ್ಚು ಸ್ಥಾನ ಪಡೆಯುವ ಬಗ್ಗೆ ಮಾತನಾಡುತ್ತಾರೆ, ಯಾವುದೇ ಪಕ್ಷವಿರಲಿ, ಈ ರೀತಿಯಾಗಿ ಮಾತನಾಡುವುದು ಇದು ನಿಮ್ಮ ದುರಹಂಕಾರವನ್ನು ಬಿಂಬಿಸುತ್ತದೆ ಎಂದು ಹೇಳಿದರು.
400ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಕುರಿತು ಮಾತನಾಡಿದ ಅವರು “ಪ್ರಜಾಪ್ರಭುತ್ವದಲ್ಲಿ” ಯಾವುದೇ ಒಂದು ಪಕ್ಷವು 400 ಅಥವಾ ಅದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅವಕಾಶಗಳು ಕಡಿಮೆ ಅದನ್ನು ನಿರ್ಧರಿಸುವುದು ಮತದಾರರು ಹಾಗಾಗಿ ಬಿಜೆಪಿ ಹೇಳುವ ಹೇಳಿಕೆಗೆ ತಲೆಬುಡ ಇಲ್ಲ, ಅಲ್ಲದೆ “ಮತದಾರರು ಕೊಟ್ಟರೆ ಮಾತ್ರ ಸೀಟು ಗೆಲ್ಲಲು ಸಾಧ್ಯ. ಯಾವುದೇ ರಾಜಕೀಯ ಪಕ್ಷಗಳು ಚುನಾವಣೆಗೂ ಮೊದಲು ನಮಗೆ ಇಷ್ಟು ಸೀಟು ಸಿಗುತ್ತದೆ ಎಂದು ಹೇಳಿದರೆ ಅದನ್ನು ದುರಹಂಕಾರ ಎನ್ನಲಾಗುತ್ತದೆ” ಎಂದರು.
400ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಫೆಬ್ರವರಿ 5 ರಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದರು. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, “ನಮ್ಮ ಮೂರನೇ ಅಧಿಕಾರಾವಧಿ ದೂರವಿಲ್ಲ, ಗರಿಷ್ಠ 100-125 ದಿನಗಳು ಉಳಿದಿವೆ. ಇಡೀ ರಾಷ್ಟ್ರವು ‘ಅಬ್ಕಿ ಬಾರ್, 400 ಪಾರ್’ ಎಂದು ಹೇಳುತ್ತಿದೆ, ಜೊತೆಗೆ ಫೆಬ್ರವರಿ 2 ರಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಮಾತನಾಡಿದ ಪ್ರಧಾನಿ ಮೋದಿ, ಈಗಾಗಲೇ ಬಹುಮತ ಹೊಂದಿರುವ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದ್ದಾರೆ ಇದೆಲ್ಲಾ ದುರಹಂಕಾರದ ಪರಮಾವದಿ ಇದಕ್ಕೆ ಮತದಾರರು ತಕ್ಕ ಉತ್ತರ ಕೊಡಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ: ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಕಾರು… ಮಕ್ಕಳು ಸೇರಿ 7 ಮಂದಿ ದುರ್ಮರಣ