ಬೆಂಗಳೂರು: ನಗರದಲ್ಲಿ ಬುಧವಾರ ಒಂದೇ ದಿನದಲ್ಲಿ 42 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 564ಕ್ಕೆ ಏರಿಕೆಯಾಗಿದೆ. ಕುವೈತ್, ಹರಿಯಾಣ ಹಾಗೂ ತಮಿಳುನಾಡಿನಿಂದ ಬಂದ ತಲಾ ಒಬ್ಬರಲ್ಲಿ ಹಾಗೂ ಮಹಾರಾಷ್ಟ್ರದಿಂದ ಬಂದ ಆರು ಜನರಲ್ಲಿ ಸೋಂಕು ದೃಢಪಟ್ಟಿದೆ. ವಿವಿಧ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು ಒಂಬತ್ತು ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.
ಉಳಿದಂತೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಸೋಂಕು ಪರೀಕ್ಷೆಗೆ ಒಳಪಟ್ಟ 22 ಜನರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಇಬ್ಬರು ಸೋಂಕಿತರ ಸಂಪರ್ಕ ಪತ್ತೆಯಾಗಿಲ್ಲ. ಈ ಮಧ್ಯೆ ನಗರದಲ್ಲಿ ಕೋವಿಡ್ 19 ಸೋಂಕಿನಿಂದ ಬುಧವಾರ ಮತ್ತಿಬ್ಬರು ಮೃತಪಟ್ಟಿದ್ದು ಒಟ್ಟು ಸೋಂಕಿತ ಸಂಖ್ಯೆ 21ಕ್ಕೆ ಏರಿಕೆಯಾದಂತಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ 22 ವರ್ಷದ ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ ಬುಧವಾರ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ನಗರದಲ್ಲಿ ಮೂರು ಜನ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ 19 ದೃಢಪಟ್ಟಂತಾಗಿದೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಪರೀಕ್ಷೆಗೆ ಒಳಪಟ್ಟ ಆರ್.ಟಿ. ನಗರದ 27 ವರ್ಷದ ಮಹಿಳೆ, ಹನುಮಂತನಗರದ 57 ವರ್ಷದ ವ್ಯಕ್ತಿ, ಎಸ್ ಕೆ. ಗಾರ್ಡನ್‌ನ 34 ವರ್ಷದ ಮಹಿಳೆ, ನ್ಯೂ ತಿಪ್ಪಸಂದ್ರದ 19 ವರ್ಷದ ಯುವತಿ, ಪಾಟರಿ ಟೌನ್‌ನ 60 ವರ್ಷದ ಪುರುಷ ಹಾಗೂ 16 ವರ್ಷದ ಯುವಕ, ಆರ್.ಟಿ. ನಗರದ 35 ವರ್ಷದ ಪುರುಷ, ಶಿವಾಜಿ ನಗರದ 23 ವರ್ಷದ ಯುವಕ, ಅಶೋಕನಗರದ 37 ವರ್ಷದ ಪುರುಷ, ಚಾಮರಾಜಪೇಟೆಯ 57 ವರ್ಷದ ಪುರುಷ, ಗೊರಗುಂಟೆ ಪಾಳ್ಯದ 43 ವರ್ಷದ ಪುರುಷ,
ಪಾದರಾಯನಪುರದ 40 ವರ್ಷದ ಮಹಿಳೆ, ಬಂಬೂಬಜಾರ್‌ನ 60 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇನ್ನು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿಯೂ 21 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಸಿಂಗಸಂದ್ರದ 38 ವರ್ಷದ ಪುರುಷ, ಕುಮಾರಸ್ವಾಮಿ ಬಡಾವಣೆಯ 45 ವರ್ಷದ ಪುರುಷ, ಹೂಡಿಯ 34 ವರ್ಷದ ಪುರುಷ, ಬೆಳ್ಳಂದೂರಿನ 68 ವರ್ಷದ ಮಹಿಳೆ, ದೊಡ್ಡಕಲ್ಲಸಂದ್ರದ 39 ವರ್ಷದ ಪುರುಷ, ಹುಳಿಮಾವಿನ 39 ವರ್ಷದ ಪುರುಷ, ನಾಗಸಂದ್ರದ 43 ವರ್ಷದ ಮಹಿಳೆ, ಗಣಪತಿ ನಗರದ 70 ವರ್ಷದ ವೃದೆಟಛಿ ಹಾಗೂ ಕರಗಪ್ಪ ನಗರದ 46 ವರ್ಷದ ಪುರುಷರೊಬ್ಬರಲ್ಲಿ ಸೋಂಕು ಖಚಿತವಾಗಿದೆ.
ಸೋಂಕಿತರ ಸಂಪರ್ಕದಿಂದ ಸೋಂಕು: ಡಿ.ಜಿ. ಹಳ್ಳಿಯಲ್ಲಿ ಸೋಂಕು ದೃಢಪಟ್ಟ ರೋಗಿ ಸಂಖ್ಯೆ 2,180ರ ಸಂಪರ್ಕದಲ್ಲಿದ್ದ 20 ವರ್ಷದ ಯುವತಿ, 29 ವರ್ಷದ ಯುವಕ, 54 ವರ್ಷದ ಪುರುಷ ಹಾಗೂ 27 ವರ್ಷದ ಯುವತಿಗೆ ಸೋಂಕು ಹಬ್ಬಿದೆ. ರೋಗಿ ಸಂಖ್ಯೆ 4,846 ಸಂಪರ್ಕದಲ್ಲಿದ್ದ ಜೆಪಿಎನ್ ಆಸ್ಪತ್ರೆಯ 25 ವರ್ಷದ ಯುವತಿ ಹಾಗೂ 43 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಮದೀನ ಪಾಳ್ಯದಲ್ಲಿ ಸೋಂಕು ದೃಢಪಟ್ಟವರ ಸಂಪರ್ಕದಲ್ಲಿದ್ದ 19 ವರ್ಷದ ಯುವಕ, ಪಾರ್ವತಿಪುರದಲ್ಲಿ ಸೋಂಕು ದೃಢಪಟ್ಟ ರೋಗಿಯ ಸಂಪರ್ಕದಲ್ಲಿದ್ದ 16 ವರ್ಷದ ಯುವಕ ನಿಗೆ ಹಾಗೂ 3,197 ರೋಗಿಯ ಸಂಪರ್ಕದಲ್ಲಿದ್ದ ಆನೇಕಲ್‌ನ ತ್ಯಾಗರಾಜ ರಸ್ತೆಯ 42 ವರ್ಷದ ಮಹಿಳೆಗೂ ಸೋಂಕು ಇರುವುದು ದೃಢಪಟ್ಟಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ: ಕಳೆದ ಒಂದು ವಾರದಿಂದ ನಗರದಲ್ಲಿ ಹೆಚ್ಚು ಕೋವಿಡ್ 19 ಪ್ರಕರಣಗಳು ದೃಢಪಟ್ಟಿರಲಿಲ್ಲ. ಬುಧವಾರ ಒಂದೇ ದಿನ ಒಟ್ಟು 42ಜನರಲ್ಲಿ ಸೋಂಕು ದೃಢಪಡುವ ಮೂಲಕ ಬೆಂಗಳೂರು ಮತ್ತೆ ಸೋಂಕು ಜಿಲ್ಲೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆಯಾಗಿದೆ. ಬುಧವಾರ ಸೋಂಕು ದೃಢಪಟ್ಟವರಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದವರು, ವಿದೇಶದಿಂದ ಬಂದವರು, ಹೊರರಾಜ್ಯದಿಂದ ಬಂದವರುವ ಹಾಗೂ ಆರೋಗ್ಯ ಕಾರ್ಯಕರ್ತರು ಸಹ ಒಬ್ಬರು ಇದ್ದಾರೆ.
ಮತ್ತಿಬ್ಬರು ಬಲಿ: ನಗರದಲ್ಲಿ ಸೋಂಕಿನಿಂದ ಮತ್ತಿಬ್ಬರು ಬುಧವಾರ ಮೃತಪಟ್ಟಿದ್ದಾರೆ. 32 ವರ್ಷದ ಯುವಕ ಹಾಗೂ 57 ವರ್ಷದ ಪುರುಷರೊಬ್ಬರು ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಸೋಂಕಿನಿಂದ ಮೃತಪಡುತ್ತಿರುವ ಸಂಖ್ಯೆಯೂ ಏರಿಕೆಯಾಗುತ್ತಿದೆ. ಕಳೆದ ಒಂದೇ ವಾರದಲ್ಲಿ ಒಟ್ಟು ಹತ್ತು ಜನ ಬಲಿಯಾಗಿದ್ದಾರೆ.