Advertisement

ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ಸಾಂದರ್ಭಿಕ ರಜೆ

01:50 AM Jan 12, 2025 | Team Udayavani |

ನವದೆಹಲಿ: ಅಂಗಾಂಗಗಳನ್ನು ದಾನ ಮಾಡುವ ಕೇಂದ್ರ ಸರ್ಕಾರಿ ನೌಕರರು 42 ದಿನಗಳ ವಿಶೇಷ ಸಾಂದರ್ಭಿಕ ರಜೆ ಪಡೆಯಲು ಆರ್ಹರು ಎಂದು ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಂಶ ಕಸಿ ಸಂಸ್ಥೆ (ಎನ್‌ಒಟಿಟಿಒ) ಹೇಳಿದೆ. ಜೀವಂತ ದಾನಿಯಿಂದ ಅಂಗಾಂಗಳನ್ನು ಪಡೆಯುವ ವಿಧಾನವು ಶಸ್ತ್ರಚಿಕಿತ್ಸೆಗೆ ಸಮಾನವಾಗಿದ್ದು, ಪ್ರಕ್ರಿಯೆಯ ಬಳಿಕ ಅವರ ಚೇತರಿಕೆಗೆ ಸಮಯ ಬೇಕಾಗುತ್ತದೆ. ಆದ್ದರಿಂದ ಅಂಗಾಂಗ ದಾನ ಮಾಡುವ ಕೇಂದ್ರ ಸರ್ಕಾರಿ ನೌಕರರು ದಾನಕ್ಕೂ ಮುನ್ನ ಆಸ್ಪತ್ರೆಗೆ ದಾಖಲಾಗುವ ದಿನದಿಂದ ಗರಿಷ್ಟ ಗರಿಷ್ಟ 42 ದಿನಗಳ ಕಾಲ ಸಾಂದರ್ಭಿಕ ರಜೆ ನೀಡಲು ನಿರ್ದೇಶಿಸುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯ 2023ರ ಆದೇಶವನ್ನು ಎನ್‌ಒಟಿಟಿಒ ಮತ್ತೆ ಪ್ರಸ್ತಾಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.