ಮುಂಬಯಿ: ಗ್ರಾಹಕರ ಆರ್ಥಿಕ ವ್ಯವಹಾರಕ್ಕೆ ಸೂಕ್ಷ್ಮ ಮಟ್ಟದ ಸುರಕ್ಷತ ಭಾವ ಮತ್ತು ನಂಬಿಕೆಯನ್ನು ಹೊಂದಿರುವ ಭಾರತ್ ಬ್ಯಾಂಕ್ ಆರ್‌ಬಿಐ, ಹೊಸದಿಲ್ಲಿಯ ಸೆಂಟ್ರಲ್ ರಿಜಿಸ್ಟ್ರಾ†ರ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳ ಸಹಕಾರಿ ದಾಖಲಾಧಿಕಾರಿ ಮತ್ತು ಆಯುಕ್ತರ ಹಣಕಾಸು ವ್ಯವಸ್ಥೆಗಾಗಿನ ಮಾರ್ಗದರ್ಶನ ಮತ್ತು ಅರ್ಹತ ಮಾನದಂಡಗಳಿಗೆ ಬದ್ಧವಾಗಿ ಮುನ್ನಡೆ ಯುತ್ತಿದೆ. ಗ್ರಾಹಕರು ಆರ್ಥಿಕ ಚೈತನ್ಯ, ಸೇವಾ ಧನ್ಯತೆಯನ್ನು ಪಡೆದಿರುವುದೇ ನಮ್ಮ ಬ್ಯಾಂಕಿನ ಸಾರ್ಥಕತೆಯಾಗಿದೆ. ಗ್ರಾಹಕರ ಹಣಕಾಸು ಭದ್ರತೆಗೆ ಸದಾ ಸುರಕ್ಷೆ, ನಂಬಿಕೆ ಹಾಗೂ ಭದ್ರತೆಯನ್ನೊದಗಿಸಿದ ಕಾರಣವೇ ಬ್ಯಾಂಕಿನ ಸೇವಾ ಸಾಚಾತನವನ್ನು ಗ್ರಾಹಕರೇ ಖಾತ್ರಿಪಡಿಸಿ ದ್ದಾರೆ. ಆದ್ದರಿಂದ ಭಾರತ್ ಬ್ಯಾಂಕ್ ಹಣಕಾಸು ವ್ಯವಸ್ಥೆಯ ಭರವಸೆ ಎಂದೆಣಿಸಿದೆ ಎಂದು ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ತಿಳಿಸಿದರು.
ಜೂ. 17ರಂದು ಸಂಜೆ ಗೋರೆಗಾಂವ್ ಪೂರ್ವದ ಬ್ರಿಜ್ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ನಡೆದ ಭಾರತ್ ಬ್ಯಾಂಕಿನ 41ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಮಾನವ ಜೀವನದಲ್ಲಿ ಹಣಕಾಸು ಜವಾಬ್ದಾರಿಗಳು ಹಾಗೂ ಹೊಣೆಗಾರಿಕೆ ಹೆಚ್ಚಾಗುವುದು ತುಂಬ ಸಹಜ ವಾದದ್ದು. ಅವರ ಹಣಕಾಸು ಸ್ಪಂದನೆ ಹಾಗೂ ವ್ಯವಹಾರ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೊಂದಿ, ಸಾಲಗಾರರಲ್ಲಿ ಮರುಪಾವತಿಯ ಕುರಿತು ಜಾಗೃತಿ, ಉತ್ತೇಜನ ನೀಡಿದ್ದರಿಂದ ಬ್ಯಾಂಕ್ ಸಾಲದಮೊತ್ತ ಹಿಂಪಡೆಯುವಲ್ಲಿ ಸಶಕ್ತಗೊಂಡಿದೆ. ಸಾಲಗಾರರನ್ನು ಪ್ರೋತ್ಸಾಹಿಸಿದ ಕಾರಣ ನೂರಾರು ಉದ್ಯೋಗದಾತರನ್ನು ಸೃಷ್ಟಿಸಿದ ಹಿರಿಮೆ ಭಾರತ್ ಬ್ಯಾಂಕ್‌ಗಿದೆ. ಬ್ಯಾಂಕ್ ಗತ ಸಾಲಿನಲ್ಲಿ ಒಟ್ಟು 1,964 ಕೋ. ರೂ. ಗಳ ವ್ಯವಹಾರ ನಡೆಸಿ ವಾರ್ಷಿಕ ಆರ್ಥಿಕ ಅತಿಪ್ರಮಾಣದಲ್ಲಿ ಶೇ. 12.97 ರಷ್ಟು ಅಭಿವೃದ್ಧಿಯನ್ನು ಸಾಧಿಸಿದೆ ಎಂದರು.
ಠೇವಣಾತಿಯಲ್ಲಿ 1,267 ಕೋ. ರೂ. ಗಳ ವ್ಯವಹಾರದೊಂದಿಗೆ ಶೇ. 13.90 ರಷ್ಟು ಅಭಿವೃದ್ಧಿ ಕಂಡಿದೆ. ಮುಂಗಡ ವ್ಯವಹಾರದಲ್ಲೂ 697 ಕೋ. ರೂ. ವ್ಯವಹರಿಸಿ ಶೇ. 11.56ರಷ್ಟು ಏರಿಕೆ ಕಂಡಿದೆ. ನಿವ್ವಳ ಲಾಭ 119.08 ಕೋ. ರೂ. ಗಳನ್ನು ಹೊಂದಿದೆ. ಗತ ಸಾಲಿನಲ್ಲಿ ಬ್ಯಾಂಕ್ ಒಟ್ಟು 13 ನೂತನ ಶಾಖೆಗಳನ್ನು ತೆರೆದಿದ್ದು, ಒಂದು ವಿಸ್ತಾರಿತ ಕೌಂಟರ್, ಎಟಿಎಂಗಳನ್ನು ತೆರೆದು ಒಟ್ಟು 101 ಶಾಖೆಗಳನ್ನು ಹೊಂದಿದೆ ಎಂದು ನುಡಿದು ಈ ಬಾರಿಯೂ ತನ್ನ ಷೆೆೇರುದಾರರಿಗೆ ಬ್ಯಾಂಕ್ ಶೇ. 15 ರಷ್ಟು ಡಿವಿಡೆಂಟ್ ನೀಡುತ್ತಿದೆ. ಗ್ರಾಹಕರ ಆಶಯ ಹಾಗೂ ನಮ್ಮ ಮನವಿ ಮೇರೆಗೆ ಆರ್‌ಬಿಐ ಇದೀಗಲೇ ಇನ್ನೂ ಹೊಸ ಆರು ಶಾಖೆಗಳನ್ನು ತೆರೆಯುವಲ್ಲಿ ಅನುಮತಿ ನೀಡಿದೆ. ಆ ಪ್ರಕಾರ ಮಹಾರಾಷ್ಟ್ರದ ಮಲ್ವಾಣಿ-ಮಲಾಡ್, ಚೆಂಬೂರು, ಖಾರ್ ಪೂರ್ವ ಮುಂಬಯಿ, ಕರ್ನಾಟಕದ ಬನ್ನೇರುಘಟ್ಟ ಬೆಂಗಳೂರು, ಗುಜರಾತ್‌ನ ಸೂರತ್‌ನಲ್ಲಿ ದ್ವಿತೀಯ ಶಾಖೆ ಆರಂಭಿಸಲಿದ್ದೇವೆ. ಆ ಪೈಕಿ ಅಂಕ್ಲೇಶ್ವರ್‌ನ ಶಾಖೆ ಸೇವಾರಂಭಗೊಂಡಿದೆ. ಬ್ಯಾಂಕಿನ ಸರ್ವೋನ್ನತಿಗೆ ಸದಾ ಬೆನ್ನೆಲುಬು ಆಗಿ ಸಹಯೋಗವನ್ನೀಡುವ ಸರ್ವ ಗ್ರಾಹಕರ, ನಮ್ಮ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಪದಾಧಿಕಾರಿಗಳು, ಸರ್ವ ಸದಸ್ಯರ, ಬ್ಯಾಂಕಿನ ಉನ್ನತಾಧಿಕಾರಿ, ಎಲ್ಲ ಸಿಬಂದಿಯನ್ನು ಅಭಿವಂದಿಸುತ್ತಿದ್ದೇನೆ ಎಂದರು.
ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಆರ್. ಮೂಲ್ಕಿ ಸ್ವಾಗತಿಸಿ, ಬ್ಯಾಂಕಿನ ಕಾರ್ಯಸಾಧನೆಗಳನ್ನು ವಿವರಿಸಿ, ಗತ ವರ್ಷದಲ್ಲಿ ಬ್ಯಾಂಕಿನ ಪಾಲುದಾರಿಕ ಬಂಡವಾಳ 228.75 ಕೋ. ರೂ. ಗಳಿಗೆ ಏರಿದೆ. ಕಾಯ್ದಿರಿಸಿದ ಸ್ಥಿರನಿಧಿ 889.89 ಕೋ. ರೂ., ಸ್ಥಿರ ಠೇವಣಾತಿ 8,071.91 ಕೋ. ರೂ., ಉಳಿತಾಯ ಠೇವಣಾತಿ 1,504.75 ಕೋ. ರೂ., ಚಾಲ್ತಿ ಠೇವಣಾತಿ 591.82 ಕೋ. ರೂ., ಆವರ್ತ ಠೇವಣಾತಿ 153.06 ಕೋ. ರೂ., ಭಾರತ್ ದೈನಂದಿನ ಠೇವಣಾತಿ 63.48 ಕೋ. ರೂ. ಗಳನ್ನು ಹೊಂದಿ ಬ್ಯಾಂಕ್ ಒಟ್ಟು 10,385.02 ಕೋ. ರೂ. ಗಳ ವ್ಯವಹಾರ ನಡೆಸಿದೆ. ಸಾಲ ಮತ್ತು ಮುಂಗಡ 6,731.34 ಕೋ. ರೂ., ನಿಬಿಡ ಆದಾಯ 1,240.37 ಕೋ. ರೂ., ನಿವ್ವಳ ಲಾಭ 119.08 ಕೋ. ರೂ., ಕಾರ್ಯ ಮಾನ ಬಂಡವಾಳ 11,988.98 ಕೋ. ರೂ. ವ್ಯವಹರಿಸಿದೆ ಎಂದು ವಾರ್ಷಿಕ ಲೆಕ್ಕಾಚಾರದ ಬಗ್ಗೆ ಮಾಹಿತಿ ನೀಡಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್, ನಿರ್ದೇಶಕರಾದ ವಾಸುದೇವ ಆರ್. ಕೋಟ್ಯಾನ್, ಪುಷ್ಪಲತಾ ಎನ್. ಸಾಲ್ಯಾನ್, ಕೆ. ಎನ್. ಸುವರ್ಣ, ಜೆ. ಎ. ಕೋಟ್ಯಾನ್, ಯು. ಎಸ್. ಪೂಜಾರಿ, ಭಾಸ್ಕರ್ ಎಂ. ಸಾಲ್ಯಾನ್, ನ್ಯಾಯವಾದಿ ಎಸ್. ಬಿ. ಅಮೀನ್, ಚಂದ್ರಶೇಖರ ಎಸ್. ಪೂಜಾರಿ, ರೋಹಿತ್ ಎಂ. ಸುವರ್ಣ, ಹರಿಶ್ಚಂದ್ರ ಜಿ. ಮೂಲ್ಕಿ, ದಾಮೋದರ ಸಿ. ಕುಂದರ್, ಆರ್. ಡಿ. ಪೂಜಾರಿ, ಕೆ. ಬಿ. ಪೂಜಾರಿ, ಗಂಗಾಧರ್ ಜೆ. ಪೂಜಾರಿ, ಸೂರ್ಯಕಾಂತ್ ಜೆ. ಸುವರ್ಣ, ಅಶೋಕ್ ಎಂ. ಕೋಟ್ಯಾನ್, ಅನºಲಗನ್ ಸಿ. ಹರಿಜನ, ಜ್ಯೋತಿ ಕೆ. ಸುವರ್ಣ, ಸಿ. ಟಿ. ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಲ್ಲವ ಜಾಗೃತಿ ಬಳಗದ ಉಪಾಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ನಿರ್ದೇಶಕ ಮಹೇಂದ್ರ ಸೂರು ಕರ್ಕೇರ, ಹರೀಶ್ ಜಿ. ಅಮೀನ್, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್. ಬೆಳ್ಚಡ, ಲೋನವಾಲ ನಗರ ಪರಿಷತ್‌ನ ನಗರಾಧ್ಯಕ್ಷೆ ಸುರೇಖಾ ಜಾಧವ್, ಉಪಾಧ್ಯಕ್ಷ ನಿಟ್ಟೆ ಶ್ರೀಧರ್ ಎಸ್. ಪೂಜಾರಿ, ಆರ್. ಆರ್. ಪಾಂಡ್ಯನ್, ಲಕ್ಷ್ಮಣ್ ಎಸ್. ಪೂಜಾರಿ (ಎನ್‌ಸಿಪಿ), ಬ್ಯಾಂಕಿನ ಸ್ಥಾಪಕ ಕಾರ್ಯಾಧ್ಯಕ್ಷ ವರದ ಉಲ್ಲಾಳ್, ಸಂದರ್ಶ್ ಚೌಟ, ಸಿಎ ಜಗದೀಶ್ ಶೆಟ್ಟಿ, ನ್ಯಾಯವಾದಿ ಶಶಿಧರ ಕಾಪು ಅವರು ವಿಶೇಷವಾಗಿ ಉಪಸ್ಥಿತರಿದ್ದರು.
ಬ್ಯಾಂಕಿನ ನೂರಾರು ಷೆೇರುದಾರರು, ಗ್ರಾಹಕರುಗಳು, ಹಿತೈಷಿಗಳು ಬ್ಯಾಂಕಿನ ಉನ್ನತಾಧಿಕಾರಿಗಳು, ಸಿಬಂದಿ ಮತ್ತಿತರರು ಸಭೆಯಲ್ಲಿ ಹಾಜರಿದ್ದರು. ಬ್ಯಾಂಕಿನ ಅಧಿಕಾರಿ ಯಶೋಧರ ಡಿ. ಪೂಜಾರಿ ಪ್ರಾರ್ಥನೆಗೈದರು. ಬ್ಯಾಂಕಿನ ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್. ಕರ್ಕೇರ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್