Advertisement

41ನೇ ಮಹಾಸಭೆ: ಸಾಂಸ್ಕೃತಿಕ ಕಾರ್ಯಕ್ರಮ

06:34 PM Nov 25, 2019 | Team Udayavani |

ಪುಣೆ, ನ. 24: ಪುಣೆಯ ಕೇತ್ಕರ್‌ ರೋಡ್‌ ಶ್ಯಾಮರಾವ್‌ ಕಲ್ಮಾಡಿ ಕನ್ನಡ ಹೈಸ್ಕೂಲ್‌ನ ಸಭಾಭವನದಲ್ಲಿ ನ. 10ರಂದು ಪುಣೆ ಕುಲಾಲ ಸುಧಾರಕ ಸಂಘದ 41ನೇ ಮಹಾಸಭೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದ ಕಲಾಭಿಮಾನಿಗಳನ್ನು ರಂಜಿಸಿತು. ಕುಲಾಲ ಸಮಾಜ ಬಾಂಧವರಿಂದ, ಮಕ್ಕಳಿಂದ ವಿವಿಧ ರೀತಿಯ ನೃತ್ಯ ವೈವಿಧ್ಯಮಯ ಕಾರ್ಯಕ್ರಮಗಳು, ಧೀರಜ್‌ ವರ್ಕಾಡಿ ಇವರಿಂದ ರಸ ಮಂಜರಿ ಕಾರ್ಯಕ್ರಮ, ಮನವಿತ್‌ ಕುಲಾಲ್‌ ಇವರಿಂದ ಬಾಕ್ಸಿಂಗ್‌ ಪ್ರದರ್ಶನ ಹಾಗೂ ಫ್ರೆಂಡ್ಸ್‌ ಮಂಗಳೂರು ಪ್ರವೀಣ್‌ ಕೊಡಕ್ಕಲ್‌ ಮತ್ತು ರಂಜನ್‌ ಬೋಳಾರ್‌ ಸಾರಥ್ಯದ ತಂಡದವರಿಂದ ತೆಲಿಕೆ ಬಾಯಿ ನಿಲಿಕೆ ಹಾಸ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು.

Advertisement

ಪುಣೆ ಕುಲಾಲ ಸಂಘದ ಅಧ್ಯಕ್ಷರಾದ ಹರೀಶ್‌ ಕುಲಾಲ್‌ ಅವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ಮುಖ್ಯ ಅತಿಥಿ ಪುರುಷೋತ್ತಮ ಕುಲಾಲ್‌  ಕಲ್ಬಾವಿ, ಗೌರವ ಅತಿಥಿ ಕಾತ್ರಜ್‌ ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘ, ಬಿಲ್ಲವ ಸಂಘ ಪುಣೆ ಇದರ ಮಾಜಿ ಅಧ್ಯಕ್ಷರಾದ ಶೇಖರ್‌ಟಿ. ಪೂಜಾರಿ, ಮುಂಬಯಿ ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ್‌ ಕುಲಾಲ್‌, ಜ್ಯೋತಿ ಕೋ ಅಪರೇಟಿವ್‌ ಬ್ಯಾಂಕ್‌ನ ಚೇರ್‌ ಮ್ಯಾನ್‌ ಗಿರೀಶ್‌ ಸಾಲ್ಯಾನ್‌, ಮುಂಬಯಿ ಕುಲಾಲ್‌ ಸಂಘದ ಉಪಾಧ್ಯಕ್ಷ ರಾಘು ಮೂಲ್ಯ, ಸಂಘದ ಉಪಾಧ್ಯಕ್ಷ ದೊಡ್ಡಣ್ಣ ಮೂಲ್ಯ, ಗೌರವ ಕಾರ್ಯದರ್ಶಿ ನವೀನ್‌ ಬಂಟ್ವಾಳ್‌, ಕೋಶಾಧಿಕಾರಿ ವಾಸು ಕುಲಾಲ್‌, ಹಿರಿಯ ಸಲಹೆಗಾರರಾದ ರಮೇಶ್‌ ಕೊಡ್ಮನ್ಕರ್‌, ಕುಟ್ಟಿ ಮೂಲ್ಯ, ಸದಾಶಿವ ಮೂಲ್ಯ, ಸುರೇಂದ್ರ ಮೂಲ್ಯ, ದಾಮೋದರ ಮೂಲ್ಯ, ಮನೋಜ್‌ ಸಾಲ್ಯಾನ್‌, ನಾಗೇಶ್‌ ಕುಲಾಲ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಮೂಲ್ಯ, ಉಪಾಧ್ಯಕ್ಷೆ ಯಶೋದಾ ಮೂಲ್ಯ, ಜಯಂತಿ ಮೂಲ್ಯ ಅವರು ವೇದಿಕೆಯಲ್ಲಿ ಉಪಸ್ತಿತರಿದ್ದರು. ಅತಿಥಿ ಗಣ್ಯರನ್ನು ಪುಣೆ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಯಕ್ಷಗಾನ ಮಂಡಳಿಯ ಸದಸ್ಯರು ಯಕ್ಷ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುವ ಯಕ್ಷಗಾನ ಶೈಲಿಯಲ್ಲಿ ಸ್ವಾಗತಿಸಿದರು.

 

-ವರದಿ: ಹರೀಶ್‌ ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next