Advertisement
ಸೋಮವಾರ ಬಿಬಿಎಂಪಿ ಲೆಕ್ಕಪತ್ರ ಸ್ಥಾಯಿ ಸಮಿತಿಯ ಸಭೆಯಲ್ಲಿ ಪಾಲಿಕೆಯ ಎಂಟು ವಲಯಗಳ ಸಹಾಯಕ ಹಣಕಾಸು ನಿಯಂತ್ರಕರು ಹಾಗೂ ಕೇಂದ್ರ ಕಚೇರಿಯ ಸಹಾಯಕ ಹಣಕಾಸು ನಿಯಂತ್ರಕರ ಸಭೆ ನಡೆಸಿದ ಪರಿಣಾಮ ಒಟ್ಟು 418 ಬ್ಯಾಂಕ್ ರಹಸ್ಯ ಖಾತೆಗಳಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಪಾವತಿಸುವ ತೆರಿಗೆ ಹಣ ಯಾವ ಖಾತೆಗೆ ಜಮೆಯಾಗಿದೆ ಹಾಗೂ ಯಾರು ಬಳಕೆ ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.
Related Articles
Advertisement
ಶಿಕ್ಷಣ ವಿಭಾಗದಲ್ಲಿ 92 ಖಾತೆ: ಪಾಲಿಕೆಯ ಶಿಕ್ಷಣ ವಿಭಾಗ ಒಂದರಲ್ಲಿಯೇ ಒಟ್ಟು 92 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಅದರದಲ್ಲಿ ಪೂರ್ವ ಮತ್ತು ಪಶ್ಚಿಮ ಎರಡು ವಲಯದಲ್ಲಿ ಅತಿ ಹೆಚ್ಚು ಬ್ಯಾಂಕ್ ಖಾತೆಗಳಿರುವುದಾಗಿ ತಿಳಿಸಿದೆ. ಈ ಖಾತೆಗಳನ್ನು ಬಿಬಿಎಂಪಿ ಶಾಲೆಯ ಮುಖ್ಯೋಪಾಧ್ಯಾಯರು ನಿರ್ವಹಣೆ ಮಾಡುತ್ತಿದ್ದು, ಯಾವುದಕ್ಕೆ ಎಷ್ಟು ಹಣವನ್ನು ಬಳಸಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ.
46 ಖಾತೆಗಳಲ್ಲಿ 1800 ಕೋಟಿ ರೂ.: ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ನಿರ್ವಹಣೆ ಮಾಡುತ್ತಿರುವ 46 ಬ್ಯಾಂಕ್ ಖಾತೆಗಳಲ್ಲಿ ಒಟ್ಟು 1800 ಕೋಟಿ ರೂ. ಹಣವಿದ್ದು, ಉಳಿದ 372 ಬ್ಯಾಂಕ್ ಖಾತೆಗಳಲ್ಲಿ ಎಷ್ಟು ಹಣವಿದೆ ಎಂಬ ಮಾಹಿತಿಯಿಲ್ಲ. ಇನ್ನೂ 50 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿರುವ ಬಗ್ಗೆ ಅನುಮಾನವಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುವುದು. ಜತೆಗೆ ಯಾವ ಖಾತೆಗೆ ಎಷ್ಟು ಜಮೆಯಾಗಿದೆ ಹಾಗೂ ಎಷ್ಟು ಹಣವನ್ನು ಪಡೆಯಲಾಗಿದೆ ಎಂಬ ಮಾಹಿತಿಯನ್ನು ಕಲೆ ಹಾಕಲಾಗುವುದು ಎಂದು ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯ ಗೌತಮ್ ಕುಮಾರ್ ತಿಳಿಸಿದ್ದಾರೆ.
ಪಾಲಿಕೆಯಲ್ಲಿ ಎಷ್ಟು ಬ್ಯಾಂಕ್ ಖಾತೆಗಳಿವೆ, ಯಾವ ಖಾತೆಗೆ ಎಷ್ಟು ಹಣ ಸಂದಾಯವಾಗುತ್ತಿದೆ ಎಂಬ ಮಾಹಿತಿ ಸ್ವತಃ ಬಿಬಿಎಂಪಿ ಆಯುಕ್ತರಿಗೆ ಸವಾಲಿನ ಪ್ರಶ್ನೆಯಾಗಿದೆ. ಈ ಕುರಿತು ಮುಖ್ಯ ಹಣಕಾಸು ಅಧಿಕಾರಿಗೆ ಸಮಿತಿಯಿಂದ ನಿರ್ಣಯ ಮಾಡಿ ಎಷ್ಟು ಬ್ಯಾಂಕ್ ಖಾತೆಗಳಿವೆ ಯಾವ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದರ ಕುರಿತು ಮಾಹಿತಿ ನೀಡುವಂತೆ ಪತ್ರ ಬರೆಯಲಾಗುವುದು. -ನೇತ್ರಾ ನಾರಾಯಣ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಪತ್ತೆಯಾದ ಬ್ಯಾಂಕ್ ಖಾತೆಗಳು
-ಕೇಂದ್ರ ಕಚೇರಿ 46
-ದಕ್ಷಿಣ ವಲಯ 32
-ಮಹದೇವಪುರ 16
-ಪಶ್ಚಿಮ ವಲಯ 64
-ಬೊಮ್ಮನಹಳ್ಳಿ 17
-ದಾಸರಹಳ್ಳಿ 13
-ರಾಜರಾಜೇಶ್ವರಿ ನಗರ 15
-ಪೂರ್ವ ವಲಯ 91
-ಶಿಕ್ಷಣ ವಿಭಾಗದ 92
-ಹಣಕಾಸು ವಿಭಾಗ 4
-ಜನನ, ಮರಣ ನೋಂದಣೆ 4
-ಅರಣ್ಯ, ಕೆರೆ ನಿರ್ವಹಣೆ 2
-ಒಟ್ಟು 418