Advertisement

ಥಾಣೆಯಲ್ಲಿ ಮತ್ತೆ 416 ಮಂದಿಗೆ ಸೋಂಕು

08:23 PM Dec 26, 2020 | Adarsha |

ಥಾಣೆ,: ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2,40,619ಕ್ಕೆ ಏರಿದ್ದು, ಶುಕ್ರವಾರ ಒಂದೇ ದಿನ 416 ಮಂದಿಗೆ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. 9 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 5,910ಕ್ಕೆ ಏರಿಕೆಯಾಗಿದೆ.

Advertisement

ಇದನ್ನೂ ಓದಿ:

ಚೇತರಿಕೆಯೇ ಹೆಚ್ಚು: ಇದುವರೆಗೆ 2,30,432 ಮಂದಿ ಕೋವಿಡ್ ದಿಂದ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಚೇತರಿಕೆ ಪ್ರಮಾಣ ಶೇ.95.76ರಷ್ಟಿದ್ದು, 4,277 ಸಕ್ರಿಯ ಪ್ರಕರಣಗಳಷ್ಟೇ ಇವೆ. ನೆರೆಯ ಪಾಲ್ಘಾರ್‌ ಜಿಲ್ಲೆಯಲ್ಲಿ ಒಟ್ಟು 44,04 ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 1,180 ದಾಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next