ಮಂಡ್ಯ: ಜಿಲ್ಲೆಯಲ್ಲಿ ಶನಿವಾರ ಒಂದೇದಿನ ದಾಖಲೆಯ 412 ಮಂದಿ ಕೋವಿಡ್ ದಿಂದ ಮುಕ್ತರಾಗಿ ಬಿಡು ಗಡೆ ಯಾದರೆ, ಇಬ್ಬರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ9 ಸಾವಿರದ ಗಡಿಯತ್ತ ಸಾಗಿದೆ.ಕೆ.ಆರ್.ಪೇಟೆ ತಾಲೂಕಿನ 60 ಹಾಗೂ 65 ವರ್ಷದ ವೃದ್ಧರಿಬ್ಬರು ಕೋವಿಡ್, ನ್ಯುಮೋನಿಯಾ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 92ಕ್ಕೇರಿದೆ.
1574 ಸಕ್ರಿಯ ಪ್ರಕರಣ: ಶನಿವಾರ ಜಿಲ್ಲೆಯಲ್ಲಿ 412 ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮಂಡ್ಯ 160, ಮದ್ದೂರು 6, ಮಳವಳ್ಳಿ 74, ಶ್ರೀರಂಗಪಟ್ಟಣ 13, ಕೆ.ಆರ್.ಪೇಟೆ 142, ನಾಗಮಂಗಲ 9 ಹಾಗೂ ಹೊರ ಜಿಲ್ಲೆಯ8 ಮಂದಿ ಕೋವಿಡ್ ಮುಕ್ತರಾಗಿದ್ದಾರೆ. ಇದುವರಿಗೂ ಜಿಲ್ಲೆಯಲ್ಲಿ 7331 ಜನರು ಕೊರೊನಾದಿಂದ ಬಿಡುಗಡೆಯಾದರೆ, 1574 ಸಕ್ರಿಯ ಪ್ರಕರಣಗಳಿವೆ.
93 ಮಂದಿಗೆ ಕಕೋವಿಡ್: ಮಂಡ್ಯ 39, ಮದ್ದೂರು 7, ಮಳವಳ್ಳಿ 8, ಪಾಂಡವಪುರ 6, ಶ್ರೀರಂಗಪಟ್ಟಣ 9, ಕೆ.ಆರ್.ಪೇಟೆ ಹಾಗೂ ನಾಗಮಂಗಲದಲ್ಲಿ ತಲಾ 12 ಮಂದಿಗೆ ಶನಿವಾರ ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯಲ್ಲಿ 8997 ಸೋಂಕು ಪ್ರಕರಣಗಳು ದಾಖಲಾಗಿವೆ.
1515 ಮಂದಿಗೆ ಪರೀಕ್ಷೆ: ಶನಿವಾರ 1515 ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. 566 ರ್ಯಾಪಿಡ್ ಹಾಗೂ 949 ಆರ್ ಟಿಪಿಸಿಆರ್ ಪರೀಕ್ಷೆಗೊಳಗಾಗಿದ್ದರು. ಜಿಲ್ಲೆಯ ಸರ್ಕಾರ ಆಸ್ಪತ್ರೆಗಳ ಐಸೋಲೇಷನ್‌ನಲ್ಲಿ 373, ಖಾಸಗಿ ಆಸ್ಪತ್ರೆಗಳ ಐಸೋಲೇಷನ್‌ನಲ್ಲಿ 92, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 73 ಹಾಗೂ ಹೋಂ ಐಸೋಲೇಷನ್‌ನಲ್ಲಿ 1036 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದ್ದಾರೆ