Advertisement
ರೈಲು, ಒಂದೇ ಸಾಲಿನಲ್ಲಿ ಉದ್ದಕ್ಕೂ ಸಿದ್ಧವಾಗಿನಿಂತ ಮನೆಗಳ ಹಾಗೆ ಕೆಲವೊಂದು ರೈಲುಗಳು ಅರ್ಧ ಕಿಲೋಮೀಟರಿನಷ್ಟು ಉದ್ದ ಇರುವುದುಂಟು. ಮನೆಯಂತೆಯೇ ರೈಲಿಗೂ ಕೂಡ ಆಗಿಂದಾಗ್ಗೆ ರಿಪೇರಿ ಕೆಲಸ ಆಗುತ್ತಲೇ ಇರಬೇಕು. ಅದು ಪೇಂಟಿಂಗ್ ಇರಬಹುದು, ವೆಲ್ಡಿಂಗ್ ಇರಬಹುದು, ಎಲೆಕ್ಟ್ರಿಕಲ್ ವರ್ಕ್ ಆಗಿರಬಹುದು ಅಥವಾ ಎಂಜಿನ್‌ನ ಯಾವುದೋ ಒಂದು ಭಾಗ ಸರಿಪಡಿಸುವ ಮೆಕ್ಯಾನಿಕ್ ಕೆಲಸ ಆಗಿರಬಹುದು. ಎ.ಸಿ. ಮೆಶಿನ್‌ನ ರಿಪೇರಿ ಇರಬಹುದು ಅಥವಾ ಕಿಟಕಿ, ಬಾಗಿಲುಗಳನ್ನು ಜೋಡಿಸುವ ಕಾರ್ಪೆಂಟರ್‌ನ ಕೆಲಸವೇ ಆಗಿರಬಹುದು, ಇಂಥವೇ ಹಲವು ಬಗೆಯ ರಿಪೇರಿಗಳು ರೈಲಿನಲ್ಲಿ ಆಗುತ್ತಲೇ ಇರುತ್ತವೆ. ಈ ಕೆಲಸಗಳನ್ನು ನಿರ್ವಹಿಸಲೆಂದೇ ಸೌತ್ ಸೆಂಟ್ರಲ್ ರೈಲ್ವೆ ವಿಭಾಗವು ಒಟ್ಟು 4103 ಅಪ್ರಂಟಿಸ್ ಹುದ್ದೆಗಳಿಗೆ ಅರ್ಜಿ ಕರೆದಿದೆ. ಈ ಹುದ್ದೆಗಳು, ಮೆಕಾನಿಕ್, ಕಾರ್ಪೆಂಟರ್, ಎಲೆಕ್ಟ್ರಿಷಿಯನ್….. ಹೀಗೆ ಹಲವು ವಿಭಾಗಗಳಲ್ಲಿ ಹಂಚಿಕೆಯಾಗಲಿವೆ.ಹುದ್ದೆಯ ವಿಂಗಡನೆ
ಎ.ಸಿ ಮೆಕಾನಿಕ್- 249
ಕಾರ್ಪೆಂಟರ್-16
ಡೀಸೆಲ್ ಮೆಕಾನಿಕ್-640
ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್- 18
ಎಲೆಕ್ಟ್ರಿಷಿಯನ್-871
ಎಲೆಕ್ಟ್ರಾನಿಕ್ ಮೆಕಾನಿಕ್-102
ಫಿಟ್ಟರ್- 1460
czಮೆಶಿನಿಸ್ಟ್-74
ಪೇಂಟರ್- 40
ವೆಲ್ಡರ್- 594
ಇತರೆ- 36
ಒಟ್ಟು 4103 ಹುದ್ದೆಗಳನ್ನು ವಿಂಗಡಿಸಲಾಗಿದೆ. ರೈಲ್ವೆಯ ವಿವಿಧ ಯೂನಿಟ್‌ಗಳಿಗೆ ಎಸ್ಸಿ, ಎಸ್ಟಿ, ಒಬಿಸಿ, ಯುಆರ್ ಹೀಗೆ ವಿಂಗಡನೆ ಮಾಡಲಾಗಿದೆ.
ಈ ಎಲ್ಲ ಹುದ್ದೆಗಳಿಗೂ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಹಾಗೂ ಆಯಾ ವಿಷಯಕ್ಕೆ ಸಂಬಂಧಿತ ಐಟಿಐ ವಿದ್ಯಾಭ್ಯಾಸ ಮಾಡಿರಬೇಕು. ಕನಿಷ್ಠ 15 ರಿಂದ ಗರಿಷ್ಠ 24 ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟರಿಗೆ ಐದು ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಎಂಜಿನಿಯರಿಂಗ್ ಗ್ರಾಜುಯೇಟ್ ಮತ್ತು ಹುದ್ದೆ ಸಂಬಂಧಿತ ಡಿಪ್ಲೊಮಾ ಹೊಂದಿರುವವರೂ ಈ ಅಪ್ರಂಟಿಸ್‌ಶಿಪ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆ ಹೇಗೆ?
ರೈಲ್ವೆ ಇಲಾಖೆಯ 1961ರ ಅಪ್ರಂಟಿಸ್ ಆಕ್ಟ್ ಪ್ರಕಾರ ಸೆಂಟ್ರಲ್ ಅಪ್ರಂಟಿಸ್ ಕೌನ್ಸಿಲ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ದೈಹಿಕ ಆರೋಗ್ಯ ಪರೀಕ್ಷೆ, ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತದೆ.
Related Articles
1. ಮೊದಲು ಸೌತ್ ಸೆಂಟ್ರಲ್ ರೈಲ್ವೆ ಜಾಲತಾಣ www.scr.indianrailways.gov.in ವನ್ನು ಪ್ರವೇಶಿಸಿ ನೋಟಿಫಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
Advertisement
2. ನಿಮ್ಮ ವಯೋಮಿತಿ ಅರ್ಹತೆಯನ್ನು ಪರೀಕ್ಷಿಸಿಕೊಂಡು ಅದರಲ್ಲಿರುವ ಅಪ್ಲಿಕೇಷನ್‌ನ ಪ್ರಿಂಟ್ ಔಟ್ ಪಡೆಯುವುದು.
3. ನಿಮ್ಮ ಹೆಸರು, ತಂದೆ ಹೆಸರು, ಜನ್ಮದಿನಾಂಕ ಸೇರಿದಂತೆ ಎಲ್ಲ ವಿವರವನ್ನೂ ತುಂಬಬೇಕು.
4. ಭಾವಚಿತ್ರವನ್ನು ಅಂಟಿಸಿ, ಸಹಿ ಹಾಕುವುದು. ಅಟೆಸ್ಟ್ ಮಾಡಿರುವ ಅಗತ್ಯ ದಾಖಲಾತಿಗಳನ್ನು ಜೊತೆಯಲ್ಲಿ ಸೇರಿಸಬೇಕು.
5. ಅಗತ್ಯ ಸ್ಥಳಗಳಲ್ಲಿ ನಿಮ್ಮ ಸಹಿ ಹಾಕುವುದನ್ನು ಮರೆಯದಿರಿ
6. ಸಾಮಾನ್ಯ ಅಭ್ಯರ್ಥಿಗಳು ನೂರು ರೂ.ಗಳನ್ನು ರಾಷ್ಟ್ರೀಯ ಬ್ಯಾಂಕಿನಲ್ಲಿ ಡಿಡಿ ಅಥವಾ ಅಂಚೆ ಕಚೇರಿಯ ಪೋಸ್ಟಲ್ ಆರ್ಡರ್ ಡ್ರಾ ಮೂಲಕ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ/ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
7. ಅಪ್ಲಿಕೇಷನ್‌ಅನ್ನು ಕವರ್ ಮಾಡಿ ನೋಟಿಫಿಕೇಷನ್‌ನಲ್ಲಿ ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವುದು.
ಅರ್ಜಿ ಸಲ್ಲಿಕೆಗೆ ಜುಲೈ 17 ಕಡೆ ದಿನವಾಗಿದ್ದು, ಹೆಚ್ಚಿನ ಮಾತಿಗೆ goo.gl/dcyP4Kಎನ್. ಅನಂತನಾಗ್