ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿಂದು 41 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1608ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿಂದು 614 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 573 ಜನರ ವರದಿ ನೆಗೆಟಿವ್ ಬಂದಿದೆ. 41 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ.
ಕುಂದಾಪುರ ತಾಲೂಕಿನ ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸಹಿತ ಬೇಳೂರು ಗ್ರಾ.ಪಂ.ವ್ಯಾಪ್ತಿಯ ಮೊಗೆಬೆಟ್ಟಿನ ಮೀನು ವ್ಯಾಪಾರದ ಮಹಿಳೆಯೋರ್ವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಸಿಬಂದಿಯ ನಿವಾಸ ಹಾಗೂ ಮೊಗೆಬೆಟ್ಟಿನ ಮೀನಿನ ಅಂಗಡಿಯನ್ನು ಜು.12 ರಂದು ಸೀಲ್‌ಡೌನ್ ಮಾಡಲಾಗಿದೆ.
ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಅವರು ಆರೋಗ್ಯ ತಪಾಸಣೆಗೈದಿದ್ದು, ಗಂಟಲು ದ್ರವ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದಾಗ ಕೋವಿಡ್ ಪಾಸಿಟಿವ್ ಇರುವುದು ಜು.12 ರಂದು ದೃಢಪಟ್ಟಿದೆ. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದಿನ 41 ಪ್ರಕರಣಗಳ ಪೈಕಿ 26 ಉಡುಪಿ ತಾಲೂಕಿನಲ್ಲಿ ದೃಢವಾಗಿದ್ದರೆ, 11 ಪ್ರಕರಣಗಳು ಕುಂದಾಪುರದಲ್ಲಿ, ನಾಲ್ಕು ಪ್ರಕರಣಗಳು ಕಾರ್ಕಳದಲ್ಲಿ ದೃಢವಾಗಿದೆ. ಇವುಗಳ ಪೈಕಿ ಇಬ್ಬರು ಮುಂಬೈನಿಂದ ಬಂದವರಾಗಿದ್ದರೆ, ಒಂದು ಸೌದಿ ಅರೇಬಿಯಾ ದಿಂದ ಬಂದವರು. ಆರು ಮಂದಿ ಅಂತರ್ ಜಿಲ್ಲಾ ಪ್ರಯಾಣಿಕರು ಮತ್ತು 32 ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಬಂದಿದೆ ಎನ್ನಲಾಗಿದೆ.
ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1608ಕ್ಕೆ ಏರಿಕೆಯಾಗಿದೆ. ಅದರಲ್ಲಿ 1273 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 332 ಸಕ್ರಿಯ ಪ್ರಕರಣಗಳಿದೆ.